ಈ ಅಣಿಮುತ್ತು ನಮ್ಮ ಅಫೀಸಿನ ಮುಂದೆ ಕಂಡಿದ್ದು. ಹೊರಗೆ ಸುಮ್ನೆ ಒಂದು ವಾಕಿಗೆ ಬಂದ್ವಿ, ಅಲ್ಲಿ ಈ ಆಟೋ ಕಂಡಿತು. ಇನ್ನೇನು ಹೊರಡಲಿದ್ದ ಈ ಆಟೋವನ್ನು ಓಡಿ ಹೋಗಿ ತಡೆದು, ಜೇಬಿನಿಂದ ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿದ್ದನ್ನು ಅಕ್ಕ ಪಕ್ಕದಲ್ಲಿದ್ದ ಜನರು ವಿಚಿತ್ರವಾಗಿ ನೋಡ್ತಾ ಇದ್ರು (ನಂಗೆ ಇದು ಅಭ್ಯಾಸ ಆಗಿ ಹೋಗಿದೆ).
ಈ ಆಟೋವಿನ ಮಾಲಿಕ ನಾಗರಾಜ್ ಎಂದು. ದುಡಿಮೆಯೇ ದೇವರು ಎನ್ನುವ ತತ್ವವನ್ನು ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ.
ನಿಜಕ್ಕೂ ಈ ಅಣಿಮುತ್ತನ್ನು ನೋಡಿ (ಓದಿ), ಸ್ವಲ್ಪ ಹೊತ್ತು ಯೋಚನೆ ಮಾಡುವ ಹಾಗಾಯ್ತು. ನೀವೇ ನೋಡಿ

ಬಡವನಾಗಿ ಹುಟ್ಟಿದ್ದು ಅದು ನಿನ್ನ ತಪ್ಪಲ್ಲ !!
ದುಡಿಯದೆ ಬಡವನಾದರೆ ಅದು ನಿನ್ನ ತಪ್ಪು...
ಜೊತೆಗೆ ತನ್ನ ಹೆಸರಾದ "ನಾಗರಾಜ" ಅನ್ನೋದನ್ನ ಹೇಗೆ ಹೇಳಿದಾರೆ ನೊಡಿ.
ಅಪ್ಪನ ಕೊರಳಿಗೆ ಮಗನ ಹೊಟ್ಟೆಗೆ
ಜನಗಳ ಪೂಜೆಗೆ ಬೇಕಾದವನು ಈ ನಿಮ್ಮ
ನಾಗರಾಜ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
7 comments:
ಇದೀಗ ನಿಜವಾದ ಅಣಿಮುತ್ತು.
ತುಂಬಾ ಖುಶಿಯಾಯ್ತು.
ಇಂಥಾ ಅಣಿಮುತ್ತು ಹೆಕ್ಕಿಕೊಟ್ಟ ನಿಮಗೂ ಧನ್ಯವಾದಗಳು.
super !
ಶಂಕರ್ ಸರ್,
ತುಂಬಾ ದಿನವಾದ ಮೇಲೆ ಅರ್ಥವತ್ತಾದ ನುಡಿಮುತ್ತು ಆಟೋ ಮೇಲೆ ನೋಡಿ ಖುಷಿಯಾಯ್ತು...
ವಿಶಿಷ್ಟವಾಗಿದೆ ನಿಮ್ಮ ಬ್ಲಾಗ್. ನಿಜಕ್ಕೂ ಆಟೋದವರಿಗೆ ಹೀಗೋಂದು ಕಾನ್ಸೆಪ್ಟ್ ಬರೋದು ಅಚ್ಚರಿ ಮೂಡಿಸುತ್ತೆ. ಅದನ್ನ ಸೆರೆಹಿಡಿಯೋ ನಿಮ್ಮ ತಾಳ್ಮೆಗೆ ಸಲಾಮ್. ಖುಷಿಯಾಯ್ತು. ಗುಡ್ ಲಕ್
Shankranna,
Nimma blog ge idu modalane bheti.
Nimma havyasa nijakkoo kushi kottitu..!
Nagarajara auto da animuttu tumbaa hidisitu.. auto da hinde oodi hogi chitra tegeda nimma shrama sarthaka..!
Dhanyavaadagalu
Prashanth
Shankranna,
nimma blog bahala vibhinnavaagide..
doorada hyderebad ninda odta iro nanage nimma creativity matte kannadavanna nodi tumba santoshavaagide.
Dhanyavaadagalu.
Vinaykumar
ಶಂಕ್ರಣ್ಣ,
ಚೆನ್ನಾಗಿದೆ ಈ ಅಣಿಮುತ್ತು.....ತುಂಬ ದಿನ ಆಯ್ತು ಈ ತರಹ ಅಣಿಮುತ್ತುಗಳನ್ನು ನೋಡಿ...
Post a Comment