ಪ್ರತಿದಿನ ಆಫೀಸಿಗೆ ಹೋಗುವಾಗ, ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿ ಈ ಕಬಾಬ್ ಗಾಡಿಯನ್ನು ನೋಡ್ತಿದ್ದೆ. ಪ್ರತೀ ಸಲ ನೋಡಿದಾಗಲೆಲ್ಲಾ, ಫೋಟೋ ತೆಗೆಯಬೇಕೆಂದು ಆಸೆ ಆಗ್ತಾ ಇತ್ತು. ನಾನು ಆಫೀಸಿಗೆ ಹೋಗೋದು ಕಂಪೆನಿ ಕ್ಯಾಬ್ ನಲ್ಲಿ, ಅವರನ್ನು ನಿಲ್ಸಿ ಅಂತಾ ಕೇಳೋಕ್ಕಾಗಲ್ಲ. ಇವತ್ತು ಯಾವುದೊ ಒಂದು ಕಾರಣಕ್ಕೆ ಬೈಕಿನಲ್ಲಿ ಆಫೀಸಿಗೆ ಬಂದೆ, ದಾರಿಯಲ್ಲಿ ಈ ಗಾಡಿಯನ್ನು ಕಂಡ ತಕ್ಷಣ ನನ್ನ ಬೈಕನ್ನು ನಿಲ್ಲಿಸಿ, ಆರಾಮಾಗಿ ಫೋಟೋ ತೆಕ್ಕೊಂಡೆ.
ಈ ಬಿರ್ಲಾ ಕಬಾಬ್ ಸೆಂಟರಿನಲ್ಲಿ, ಪ್ರಾಯಶಃ ಸಂಜೆ ಹೊತ್ತು ಕಬಾಬ್ ಮತ್ತು ಬೆಳಿಗ್ಗೆ ತಿಂಡಿ ಸಿಗುತ್ತೆ. ನಾನು ಫೋಟೋ ತೆಗೆದಾಗ ಅಲ್ಲಿ ಇಡ್ಲಿ ಮತ್ತು ವಡೆ ಕಣ್ಣಿಗೆ ಕಾಣುಸ್ತು.
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, May 27, 2011
Subscribe to:
Post Comments (Atom)
3 comments:
ಸರಿ. ಓಬೇರಾಯ್ ಎಗ್ಗ ಕರಿ ಸೆಂಟರ್ ಸಹ ಅಲ್ಲೇ ಎಲ್ಲೋ ಇರಬಹುದು!
ಶಂಕ್ರ ಅವ್ರೆ,
ಇದ್ರಲ್ಲೇನೊ ಮಸಲತ್ತಿದೆ. ಬಿರ್ಲಾ ಈಗ ಚಿಕನ್ ಕಬಾಬ್, ಚಿಕನ್ ಬಿರಿಯಾನಿ ಫ್ರ್ಯಾಂಚೈಸ್ ಶುರುಮಾಡೋ ಪ್ಲ್ಯಾನ್ ಮಾಡುತ್ತಿದ್ದಾರೆ. ಇದು ಅದರ ಸಾಫ್ಟ್ ಲಾಂಚ್ ಇರಬೋದು ಅಂತ ಗುಮಾನಿ!!
@ ಸುನಾಥ್ ಮತ್ತು ಟೀನಾ, ಆ ಕಡೆ ಈ ಕಡೆ ಸುಮಾರು ಹುಡುಕಿದೆ.. ಆದ್ರೆ ಒಬೆರಾಯ್ ಎಗ್ಗ್ ಕರ್ರಿ, ರಿಲಯನ್ಸ್ ಬಿರಿಯಾನಿ ಏನೂ ಸಿಗ್ಲಿಲ್ಲಾ. ಸಾಫ್ಟ್ ಲಾಂಚ್ ಅಂತಾ ಏನಿಲ್ಲ ಅನ್ಕೋತೀನಿ.
@ ಯಳವತ್ತಿ, ಈ ಬಿರ್ಲಾ ಕಬಾಬ್ ಸೆಂಟರ್ ಇರೋ ಜಾಗ ನೋಡಿದ್ರೆ, ನೀನು ಇನ್ನು ಲೈಫಿನಲ್ಲಿ ಚಿಕನ್ ತಿನ್ನೋಲ್ಲ ಅನ್ಸುತ್ತೆ !
Post a Comment