ಬೆಂಗಳೂರಿಗೆ ಬಂದ ಮೇಲೆ ನನ್ನ ಕೈಯ್ಯಾರೆ ತೆಗೆದ ಆಟೋ ಫೋಟೋ.
ಸೆಕೆಂಡ್ ಇನಿಂಗ್ಸ್ ಶುರುವಾಗಿದ್ದು ಇಂಥ ಮಸ್ತ್ ಡೈಲಾಗಿನಿಂದ. ಸಂಜೆ ಆಫೀಸಿನ ಹೊರಗೆ ಸುಮ್ನೆ ಒಂದು ಸಣ್ಣ Walk ಗೆ ಬಂದಾಗ, ಗೇಟಿನ ಹೊರಗೆ ನನಗಾಗಿಯೇ ಅನ್ನೋ ಥರ ಕಾದು ನಿಂತಿತ್ತು..ಎಂಥಾ ಲಕ್ಕು ಅಲ್ವ?
ಎಂಥಾ ಫೀಲಿಂಗ್ ಕೊಡ್ತು ಅಂದ್ರೆ..ಅಬ್ಬಬ್ಬಾ... ಅದೂ ಎಂಥ ಡೈಲಾಗ್ ಬರೆದಿದ್ದಾನೆ ನೋಡಿ ಈ ಅಣ್ಣ.
"ಆಕಾಶ ಬಿದ್ದರೆ ಭೂಮಿ ಬಿರಿದರೆ, ಎಲ್ಲಿ ನಿಂತು ಕೂಗಲಿ"
ಯಪ್ಪಾ.. ಇದಕ್ಕೆ ನಾನೇನು ಹೇಳಲಿ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
9 comments:
ತ್ರಿಶಂಕು ನರಕ/ಸ್ವರ್ಗ.... ಎರಡರಲ್ಲಿ.. ಒಂದರಲ್ಲಿ... ನಿಂತು ಕೂಗೋಕೆ ಹೇಳಿ.. ಆ ಮಾರಯನಿಗೆ... :) :) :)
wow..
sakat agi ide quote...
ಸಂಕ್ರಪ್ಪಣ್ಣಾ....
ಕ್ಕೇ...ಕ್ಕೇ.....ಹ್ಹೇ...ಹ್ಹೆ...
ಹ್ಹೀ... ಹ್ಹೀ.....
ನಗು ತಡಿಲಿಕ್ಕೆ ಆಗ್ತಾ ಇಲ್ಲ...!!
ಆಟೋದವನು ಎಲ್ಲಾದರೂ ನಿಂತು ಕೂಗಿಯಾನು, ಆಟೋದ ಒಳಗಿದ್ದವರು ಮಾತ್ರ ಚಪ್ಪಡಿ!
ಆಟೊದ ಮ್ಯಾಲೆ ನಿಂತು ಕೂಗಲಿ...!!!
ಅಲ್ಲೆನ್ರಿ?
-ಶೆಟ್ಟರು
ನಿಂತುಕೊಂಡು ಯಾಕೆ ಕೂಗಬೇಕು ? ಆಟೋದಲ್ಲಿಯೇ ಕೂತು ಕೂಗಬಾರದೇ ?
ಶಂಕರ್ ಪ್ರಸಾದ್,
ನಿಮ್ಮ ಬ್ಲಾಗಿನಲ್ಲಿ ತುಂಬಾ ದಿನಗಳ ನಂತರ ಒಂದು ಒಳ್ಳೆಯ ಗಂಭೀರ ಆಟೋ ಸ್ಲೋಗನ್ ಓದಿದಂತಾಯಿತು....
ಮತ್ತೆ ನನಗೆ ಒಂದು ಆಟೋ ಕಾಣಿಸಿತು. ಅದೆಷ್ಟು ಅಲಂಕಾರಿಕವಾಗಿತ್ತು ಅಂದ್ರೆ ಒಳಗೆಲ್ಲಾ ಕ್ಯಾಬಿನ್ ತರ, ಹೊರಗೆಲ್ಲಾ ತರಾವರಿ ತೋರಣಗಳಿಂದಾಗಿ ಮದುಮಗಳ ಹಾಗೆ ಕಾಣುತ್ತಿತ್ತು. ನಿಮ್ಮ ನೆನಪಾಯಿತು. ಆಗ ನನ್ನ ಬಳಿ ಕ್ಯಾಮೆರಾ ಇದ್ದಿದ್ದರೇ ಫೋಟೋ ತೆಗೆದು ಕಳುಹಿಸುತ್ತಿದ್ದೆ...
ಆದ್ರೂ ನೋಡಿ ಖುಷಿ ಪಟ್ಟೆ.
ಶಂಕ್ರಣ್ಣ...ಈ ಬೆಂಗಳೂರಿಗೆ ಬಂದು ಬಿದ್ರೂ ಆಟೋ ಬೆನ್ನತ್ತುದ್ದಿರಲ್ಲಾ..ಗುಡ್..ಇಲ್ಲಿ ಅಟೋಅಣಿಮುತ್ತುಗಳಿಗೆ ಬರವಿಲ್ಲ ಬಿಡಿ
-ಧರಿತ್ರಿ
ಜನರನ್ನ ಸತಾಯಿಸುತ್ತ, ದುಡ್ಡು ಸುಲಿಯುತ್ತ, ಅಸಭ್ಯವಾಗಿ ರೌಡಿಗಳಂತೆ ವರ್ತಿಸೋ ಬೆಂಗಳೂರಿನ ಈ ಆಟೋರಾಜರಿಗೆ ಇಂಥ ಭಾರಿ ತೂಕದ ಡೈಲಾಗುಗಳೆಂದರೆ ಮಾತ್ರ ತುಂಬಾ ಇಷ್ಟಾ ಅಂತ ಅನಿಸುತ್ತೆ. "ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳನ್ನ ಮರೀಬೇಡ...", "ನಗೋ ಹೆಣ್ಣಿಗೆ ಸೋಲಬೇಡ, ಅಳೋ ಗಂಡಸನ್ನ ನಂಬಬೇಡ..." ಇಂಥ ಹಲವು ನುಡಿಮುತ್ತುಗಳೂ ಬೆಂಗಳೂರಿನ ಆಟೋಗಳ ಮೇಲೆ ಯಾವತ್ತೂ ಲಭ್ಯ.
Post a Comment