ಶುಕ್ರವಾರ ಇಲ್ಲೇ, ಹ್ಯಾಂಬರ್ಗಿನಲ್ಲಿ ಸುತ್ತಾಡುತ್ತಾ ಇದ್ದೆ. ಸೆಂಟ್ರಲ್ ಟ್ರೈನ್ ಸ್ಟೇಶನ್ ಇಂದ ಹೊರ ಬಂದು,
ಸಾಟರ್ನ್ (SATURN - Electronics Store Chain in Germany) ಗೆ ಹೋಗುವ ಹಾದಿಯಲ್ಲೇ ಬಾಧೆ ಶುರು ಆಯ್ತು. ಅದೃಷ್ಟವಶಾತ್ ಅಲ್ಲೇ ಒಂದು ಶುಚಾಲಯ ಕಂಡಿತು (ಸಿನಿಮಾದಲ್ಲಿ ನಮ್ಮ ಹೀರೋಗಳಿಗೆ ಬೇಕಾದ್ದ ವಸ್ತು ಅದ್ಹೇಗೋ ಸಿಗುತ್ತಲ್ಲ, ಹಾಗೆ). ಅಲ್ಲಿ ಒಳಗೆ ಹೋದಾಗ ಟಾಯ್ಲೆಟ್ಟಿನ ಕಮೋಡಿನಲ್ಲಿ ಲೇಡಿ ಬಗ್ ನ ಚಿತ್ರ ಪ್ರಿಂಟ್ ಮಾಡಿದ್ದಾರೆ.
ಇದನ್ನು ನೋಡಿದ ನನಗೆ ಕನ್ಫ್ಯೂಶನ್ ಶುರು ಆಯ್ತು.. ಏನಪ್ಪಾ ಅಂದ್ರೆ, ಮೊದಲು ಬಾಧೆ ತೀರಿಸ್ಲಾ ಅಥವ ಫೋಟೋ ತೆಗೀಲಾ ಅಂತಾ..
ಪ್ರಕೃತಿನೇ ಯಾವಾಗ್ಲೂ ಗೆಲ್ಲೋದು ಕಣ್ರೀ.. ಮೊದಲು ಬಾಧೆ ತೀರಿಸಿ ಆಮೇಲೆ ಫೋಟೋ ತೆಗೆದೆ.
ಜೊತೆಗೆ ಇನ್ನೊಂದು ವಿಚಾರ.. ಇವತ್ತಿನ ಯಾವುದೋ ಒಂದು ಹೊತ್ತಿನಲ್ಲಿ ನನ್ನ ಬ್ಲಾಗಿಗೆ ಇವತ್ತಿನವರೆಗೂ ಭೇಟಿ ಕೊಟ್ಟವರ ಸಂಖ್ಯೆ 30,000 ಮುಟ್ಟಿತು. ಏನೂ ದೊಡ್ಡ ವಿಚಾರ ಅಲ್ಲ.. ಆದರೂ ಸುಮ್ನೆ ಹೇಳಿಕೊಳ್ಳಬೇಕು ಅನ್ನುಸ್ತು.. ಅಷ್ಟೇ !
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, May 25, 2009
Subscribe to:
Post Comments (Atom)
8 comments:
ಶಂಕ್ರಪ್ಪಣ್ಣಾ....
ಜಲಬಾಧೆ ತೀರಿತಲ್ಲ....
ಇನ್ನೇನು...?
ತೊಟ್ಟಿಲು ಕಟ್ಟುವ ಸಂದರ್ಭ ಬರಲಿಲ್ಲವಲ್ಲ....
೩೦,೦೦೦ ಓದುಗರು ಬಂದು ಹೋಗಿದ್ದಕ್ಕೆ ಅಭಿನಂದನೆಗಳು...
ನಿಮ್ಮ ಬ್ಲಾಗ್ ಒಂಥರಾ ರಿಲೀಫ್ ಸ್ಥಳ...
ನಕ್ಕು ನಗಿಸುವ ತಾಣ...
ಶಂಕರ್ ಸರ್,
ಪ್ರಕೃತಿಯೇ ಗೆಲ್ಲೋದು ಅಂದೀದ್ದೀರಿ...ಸುಳ್ಳು ಫೋಟೋದಲ್ಲಿ ಅಷ್ಟು ಚೆನ್ನಾಗಿದೆಯಲ್ಲ...[ತಮಾಷೆಗೆ]
ಮತ್ತೆ ನಿಮ್ಮ Phd ಗೆ ಮತ್ತೊಂದು ಮೆಟ್ಟಿಲು ಹತ್ತಿದ್ದೀರಿ...
ಕ್ಲಿಕ್ಕಿಂಗ್ಸ್ ೩೦,೦೦೦ ದಾಟಿದ್ದಕ್ಕೆ ಅಭಿನಂದನೆಗಳು.
ಆ ಬಗ್ಗು ಲೇಡೀನೇ ಅಂತ ಹೇಗ್ಗೊತ್ತಾಯ್ತಣ್ಣ?
..................
೩೦ಸಾವಿರದ ಅಭಿನಂದನೆಗಳು!
ಶಂಕ್ರಣ್ಣ ಮೊದಲಿಗೆ ನಿಂಗೆ ಅಭಿನಂದನೆಗಳು. ಏನೆಲ್ಲಾ ನಿಮ್ ಕಣ್ಣಿಗೆ ಬೀಳ್ತಾವೋ....:)))
-ಧರಿತ್ರಿ
@ ಪ್ರಕಾಶಪ್ಪ,
ಈ ಜಲಬಾಧೇನೆ ತಡೆಯೋಕ್ಕೆ ಆಗಲ್ಲ ಅಂತಾ ಒದ್ದಾಡ್ತಾವಿ, ಇನ್ನು ಆ ಟೈಮಿನಲ್ಲಿ
ತೊಟ್ಟಿಲು ಕಟ್ಟುವ ಸಂದರ್ಭ ಬಂದ್ರೆ ಗೋವಿಂದ.. ಯಾಕೆಂದ್ರೆ ಇಲ್ಲಿ ನೀರು ಇಲ್ಲ.. ಬರೀ ಕಾಗದ.
ಮುಂದಿನದು ಹೇಳೋ ಅವಶ್ಯಕತೆ ಇಲ್ಲ ಅನ್ಕೋತೀನಿ
@ ಶಿವಣ್ಣ,
ಸಾರ್ವಜನಿಕ ಶೌಚಾಲಯ ಅಂದ್ರೆ ಏನು ಒಂದೇ ಇರುತ್ತಾ? ಇದೆ ತೆರನಾದ ಸುಮಾರು ಮೂತ್ರಕುಂಡಗಳು ಇದ್ವು..ಏನ್ PhD ನೋ ಏನೋ..ನಾನೇನೋ ಮಾಡ್ತೀನಿ, ಆದ್ರೆ ಗೈಡ್ ಯಾರು ನನಗೆ ?
@ ಸುನಾತ್,
ಸಿಕ್ಕಾಪಟ್ಟೆ ಅನುಮಾನ ಪಡ್ತಾ ಇದ್ದೀಯ ನೀನು. ಅದರ ಹೆಸರು ಲೇಡಿ ಬಗ್. ಗಂಡಾದರೆ - ಗಂಡು ಲೇಡಿ ಬಗ್, ಹೆಣ್ಣಾದರೆ - ಹೆಣ್ಣು ಲೇಡಿ ಬಗ್.. ಸರಿ ನಾ ?? ಈ ಕೀಟಕ್ಕೆ ಕನ್ನಡದಲ್ಲಿ ಏನಂತಾರೆ ಅಂತಾ ನಂಗೆ ತಿಳಿಸು.
@ ಶಿವಪ್ರಕಾಸಣ್ಣ,
ಹಿ ಹಿ ಹಿ ಹಿ ಹಿ
@ ಧರಿತ್ರಿ,
ಏನಕ್ಕ ನೀನು...ಏನೋ, ರವಿ, ಕವಿ ಇಬ್ರೂ ಕಾಣದ್ದನ್ನ ಈ ಶಂಕರ ಕಾನೋಕ್ಕೆ ಟ್ರೈ ಮಾಡ್ತಾ ಇದಾನೆ ಅಷ್ಟೇ.
ಅಭಿನಂದನೆಗೆ ಧನ್ಯವಾದಗಳು
ಕಟ್ಟೆ ಶಂಕ್ರ
Hi Shankar,
I have seen similar 'ಕೀಟಲೆ' in on of the star hotel's urinals here in Singapore. It was a picture of 'ನೊಣ' here ! You can imagine what goes in the mind of a person who has gone there and where he would aim.
----
Your comment in ittigecement blog brought me here, you have explained your tottilu episode hilariously and it brought instant laughter, made my son to wake up from his sleep! Thank you very much.
ನಮಸ್ಕಾರ, ಇಟ್ಟಿಗೆ ಸಿಮೆಂಟ್ ಬ್ಲಾಗಲ್ಲಿ ಬರೆದ ನಿಮ್ಮ ನಕ್ಕು ನಗಿಸುವ ಕಾಮೆಂಟ್ ನಿಮ್ಮ ಬ್ಲಾಗಿಗೆ ಕರೆ ತಂದಿತು. You have written your experience hilariously, so much so that we all laughed out really loud.
----
Coming to your lady bug episode, I have seen similar "ಕೀಟಲೆ" in Singapore. One of the hotel's urinals had a "ನೊಣ" in the urinal, you can imagine how one would aim ! :)
ಅಣ್ಣೋ ಸಂಕ್ರಣ್ಣ...ಎಂತಾ ಮಾತೂ ಅಂತ ಆಡೀಯಾ...ಅಲ್ಕನಣ್ಣ ಲೇಡಿ ಬಗ್ಗದೇ ಇದ್ರೆ...ಅಷ್ಟೇ ಯ್ಯಾಕೆ..ಜೆಂಟೂ ಬಗ್ದೇ ಇದ್ರೆ ಈ ಪಾಟಿ ಟಾಯ್ಲೆಟ್ಟಿಗೆ ಎಂಗೇ ಮಾರಾಯ ಓಗಾಕಾಯ್ತಾದೆ..??
ಅಲ್ಲಾ ಲೇಡೀ ಬಗ್ಗಿದ್ದು ನೀ ಯಾಕಣ್ಣಾ ನೋಡ್ದೆ...?? ಎಲ್ಲ ಓಗ್ಲಿ ಅಂದ್ರೆ..ಲೇಡಿ ಬಗ್ಗಿದ್ದ ಪೋಟೂನೂ ತೆದ್ಗೀಯೋ..!!! ಬಲ್ ಘಾಟೀ ಕಣ್ಬಿಡು ನೀನು...
ಮತ್ ಇನ್ಯಲ್ಲೋ ಇನ್ಯಾರೋ ಬಗ್ಗಿದ್ರು ಅಂತ ಪೋಟೋ ತೆದ್ಗೀಯ ಜ್ವಾಕೆ....
Post a Comment