Thursday, May 14, 2009

ಮ್ಯಾಗಿ ನೂಡಲ್ಸ್ ಹಾಗು ರಾಜಕಾರಣ

ನನ್ನ ಲೇಖನಗಳನ್ನು ಓದುವ ಎಲ್ಲರಿಗೂ ನಾನು ಪ್ರಸ್ತುತ ಜರ್ಮನಿಯಲ್ಲಿ ಇದೀನಿ ಅನ್ನೋದು ಗೊತ್ತು.
ಇವತ್ತು ರಾತ್ರಿ ಅಂದ್ರೆ ಮೇ 13, ಸಂಜೆ ಹ್ಯಾಂಬರ್ಗಿನ ಇಂಡಿಯನ್ ಅಂಗಡಿಯಲ್ಲಿ ಮ್ಯಾಗಿ ನೂಡಲ್ಸ್ ಕಂಡಿತು.
ತಡೆಯಲಾಗಲಿಲ್ಲ. ೫ ಪ್ಯಾಕೆಟ್ ತಗೊಂಡು ಬಂದೆ (ಈ ಲೇಖನವನ್ನು ನನ್ನ ಹೆಂಡ್ತಿ ಓದಿದ್ದಾದಲ್ಲಿ, ಜರ್ಮನಿಗೆ ಬಂದು ಮ್ಯಾಗಿ ಅಪರೂಪಕ್ಕೆ ತಿಂತೀನಿ...ಅನ್ನೋದನ್ನ ಹೇಳ್ತೀನಿ...ಇದಕ್ಕೆ ಮುಂಚೆ ಬೆಂಗಳೂರಲ್ಲಿ ಇದ್ದಾಗ ಮ್ಯಾಗಿಯ ಕಡು ವಿರೋಧಿ ನಾನು!!)

ಇವತ್ತು ಒಳ್ಳೇ ವಾಕಿಗೆ ಹೋಗಿ ಬಂದ ಮೇಲೆ ಫುಲ್ಲ್ ಸುಸ್ತಾಗಿತ್ತು, ಊಟಕ್ಕೆ ಏನೂ ಮಾಡೋ ಮೂಡು ಇರ್ಲಿಲ್ಲ. ಹಾಗಾಗಿ ರಾತ್ರಿ ಊಟಕ್ಕೆ ಮ್ಯಾಗಿ ಮಾಡೋಣ ಅಂತಾ ತೀರ್ಮಾನ ಮಾಡಿದೆ (ಹೆಂಡತಿ ಕ್ಷಮಿಸಿದ್ದಲ್ಲಿ) !!.
ನಾನು ಇಲ್ಲಿ ಮಾಡೋ ನೂಡಲ್ಸ್ ಬಹಳಾ ಸಿಂಪಲ್.. ನೀರನ್ನು ಕುದಿಸಿ, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, ನಂತರ ನೂಡಲ್ಸ್ ಹಾಕಿ...ಬೇಯಿಸಿ ತಿನ್ನೋದು..ಸುಸ್ತಾಗಿದ್ದಾಗ ಈರುಳ್ಳಿ, ಟ್ಯೊಮಾಟೋ ಹೆಚ್ಚಿ ನೂಡಲ್ಸ್ ಮಾಡೋ ವ್ಯವಧಾನ ಇರಲ್ಲ.

ಸರಿ, ಟಾಪಿಕ್ಕಿಗೆ ಬರ್ತೀನಿ (ಸುಮ್ನೆ ಕುಯ್ತಾ ಸಾಯಿಸ್ತಾ ಇದಾನೆ ಬಡ್ಡಿಮಗ ಅಂತಾ ಬಯ್ಕೋತಾ ಇದೀರಾ ?)
ನೀರು ಕುದಿಯೋಕ್ಕೆ ಇಟ್ಟು, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, 2 ನಿಮಿಷದ ನಂತರ ನೂಡಲ್ಸ್ ಹಾಕಿ ಮಿಕ್ಸ್ ಮಾಡಲು ಶುರು ಮಾಡಿದೆ (ಇಲ್ಲಿ ಇರೋದು ಎಲೆಕ್ಟ್ರಿಕ್ ಒಲೆ..ಹಾಗಾಗಿ ಸರಿಯಾದ ಬಿಸಿ ಎಂಥದ್ದು ಅಂತ ಗೊತ್ತಾಗಲ್ಲ). ತಳ ಹಿಡಿಯೋಕ್ಕೆ ಶುರು ಆಯ್ತು. ಹಾಗಾಗಿ, ಇನ್ನೂ ದೊಡ್ಡದಾದ ಪಾತ್ರೆಯಲ್ಲಿ ಕಾಲುಭಾಗ ನೀರು ಇಟ್ಟು ಆದರ ಮೇಲೆ ನೂಡಲ್ಸ್ ಬೇಯಿಸೋ ಪಾತ್ರೆ ಇಟ್ಟೆ.. ಹೀಗೆ ತಳ ಸೀದುತ್ತಾ ಇರೋ ಪಾತ್ರೆಯನ್ನು, ಸೀಯದೇ ಇರೋ ಹಾಗೆ ಮಾಡಲು, ನೀರನ್ನು ತುಂಬಿರೋ ಪಾತ್ರೆ ಮೇಲೆ ಇಟ್ಟೆನಲ್ಲಾ, ಅವಾಗ............

ಸಂದರ್ಭಕ್ಕೆ ತಕ್ಕುನಾಗಿ ತಮ್ಮ ನಿಷ್ಠೆ, ನೀಯತ್ತು, ನಿಯಮ ಬದಲಾಯಿಸೋ ರಾಜಕಾರಣಿಗಳು ಜ್ನಾಪಕಕ್ಕೆ ಬಂದರು.
ಇಷ್ಟನ್ನು ಹೇಳೋಕ್ಕೆ ಇಷ್ಟು ಉದ್ದದ ಲೇಖನ.

ಲೇಖನದ ಹೆಡಿಂಗು ನೋಡಿ, ತರುವಾಯ ಲೇಖನವನ್ನು ಓದಿ ನಿರಾಸೆಯಾಗಿದ್ದಲ್ಲಿ ನನಗೆ ಬಯ್ಯಲು ನಿಮಗೆ ಎಲ್ಲಾ ಅಧಿಕಾರ ಇದೆ. ಏಕೆಂದ್ರೆ, ನಿಮ್ಮ ಅಭಿಮಾನದಿಂದಲೇ ಇಂದಿನ ತನಕ ನನ್ನ ಬ್ಲಾಗು ಉಸಿರಾಡುತ್ತಾ ಇದೆ :-).

ಜಾಸ್ತಿ ಹೇಳಲ್ಲಾ...ನಿಮ್ಮ ಅಭಿಮಾನವೇ ನನ್ನ ಬ್ಲಾಗಿಗೆ ಅಕ್ಕಿ ಬೇಳೆ....ಜೊತೆಗೆ ಮ್ಯಾಗಿ ನೂಡಲ್ಸ್ :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

11 comments:

Prashant said...

ನಿಜವಾಗಲು ನನಗೆ ಈ Post ತಳ್ ಬುಡಾ ಒಂದು ಅರ್ಥ್ ಅಗಿಲ್ಲಾ :(

ಧರಿತ್ರಿ said...

ಏನ್ ಶಂಕ್ರಣ್ಣ..ನಿಮ್ ತಲೆಹರಟೆ!!
ನಂಗೂ ಮೊದಲು ಅರ್ಥವಾಗಿಲ್ಲ ಆಮೇಲೆ ತಲೆಗೆಹೊಕ್ಕಿತ್ತು..
ಒಟ್ಟಿನಲ್ಲಿ ನಗಿಬಿಟ್ರಲ್ಲಾ...ನಗುಬಾರದಿದ್ರೂ ನಿಮ್ ಬ್ಲಾಗಿಗೆ ನನ್ ನಗು ಉಚಿತ..
ನಿಮ್ಮ ಬ್ಲಾಗ್ ಸಾಯೋತನಕ ಉಸಿರಾಡಬೇಕು..ನಮ್ ಉಸಿರು ಇರೋ ತನಕ ನಿಮ್ಮ ಬ್ಲಾಗಿನ ಉಸಿರಾಟವನ್ನು ನಾವು ಕೇಳೋವಾಸೆ ಏನಂತೀರಿ ಶಂಕ್ರಣ್ಣ.
-ಧರಿತ್ರಿ

Abhijith said...

Shankra, light aagi thale kettithu ee blog first odhaaga.. sudden aagi realise aaythu en helidiya antha.. olle maja banthu .. office nalli obne nagtha iddidanna nodi illi jana swalpa munk aadgidru :D

sunaath said...

ವಿದೇಶದಲ್ಲಿ ಸಿಗೋ ಮ್ಯಾಗಿ ನೂಡಲ್ಸ್ ಇಲ್ಲಿ ಭಾರತದಲ್ಲಿ ಸಿಗೋ ನೂಡಲ್ಸ್ ಒಂದೇ ಥರಾ ಇರುತ್ತೋ ಅಥವಾ qualityಯಲ್ಲಿ ಬೇರೆ ಆಗಿರುತ್ತೊ?

Shankar Prasad ಶಂಕರ ಪ್ರಸಾದ said...

@ ಶಿವಣ್ಣ,
ನಿಮ್ಮ ಅಭಿಮಾನಕ್ಕೆ ಚಿರಋಣಿ
@ ಪ್ರಶಾಂತ್,
ಅಷ್ಟೊಂದು ತಲೆ ಕೆಡುಸ್ಕೊಬೇಡಿ. ನಾನು ಹೇಳಿದ್ದು, ತಳ ಸೀದು ಹೋಗ್ತಾ ಇದ್ದ ನೂಡಲ್ಸ್ ಪಾತ್ರೆಯನ್ನು ನಾನು ತೆಗೆದು ಬೇರೆ ಕಡೆ ಇಟ್ನಲ್ಲ, ಆ ಸ್ಥಾನಪಲ್ಲಟವನ್ನು ನಾನು ರಾಜಕಾರಣಕ್ಕೆ ಕಂಪೇರ್ ಮಾಡಿದ್ದು
@ ಧರಿತ್ರಿ,
ಅಪರೂಪಕ್ಕೆ Quentin Tarantino ತೆಗೆಯೋ Non Linear Editing ಫಿಲಮ್ಮಿನ ಹಾಗೆ ಒಂದು ಲೇಖನ ಬರೆದೆ ಅಷ್ಟೇ. ಎರಡು ಸಂಬಂಧವಿಲ್ಲದ ಘಟನೆ ಹಾಗು ವಿಷಯಗಳನ್ನು ಬೆಸೆದು ಸಂಬಂಧ ಬರಿಸುವ ಪ್ರಯತ್ನ ಇದು. Non Linear ಆಗಿ ಕೂಡ ಬರೆಯಬಲ್ಲೆ ಎನ್ನುವ ನಂಬಿಕೆ ಬಂತು ನಂಗೆ ಈಗ. ಹೆಂಗೆ ?
@ ಅಭಿ,
ಹಹಹ.. ಥ್ಯಾಂಕ್ಸ್ ಮಗ. ಕೆಲವೊಮ್ಮೆ ಹಾಗೆ, ನಮ್ಮನ್ನು ನೋಡಿ ಬೇರೆ ಜನ ಮಂಕಾಗ್ತಾರೆ.
ಮೈಸೂರ್ ಬಾಯ್ಸ್, ಅವರ ಆಕ್ಷನ್ನುಗಳು, ಥಿಂಕಿಂಗ್ಸು ಹಂಗೇನೆ.. ಅಲ್ವಾ?
@ ಸುನಾಥ,
ಗುರೂ, ನಾನು ತಂದಿದ್ದು ಇಂಡಿಯಾದಲ್ಲಿ ಸಿಗೋ ಮ್ಯಾಗಿಯನ್ನೇ. ಭಾರತದಿಂದ ಆಮದು ಮಾಡಿಕೊಂಡು ಇಲ್ಲಿ ಮಾರುತ್ತಾರೆ.
ಕಟ್ಟೆ ಶಂಕ್ರ

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಎತ್ತಲಿಂದೆತ್ತನ ಸಂಬಂಧವ್ವಯ್ಯ....

Harsha said...

allappa raja.. eno vishyane ilde istond bardiddiyalla... neenu rajakeeyakke ready aagta iddiya? hehe

Lakshmi Shashidhar Chaitanya said...

sadyojaatanaaNe nange enu artha aaglilla shankranna ! :( :(

Guruprasad said...

ತಲೆ ಬುಡ ಏನು ಗೊತ್ತಾಗಲಿಲ್ಲ,, ಆದರೆ ಮದ್ಯದಲ್ಲಿ ಯಾರೋ ನಕ್ಕರು (ಮ್ಯಾಗಿ ಒಳಗೆ ಯಾವ ರಾಜಕಾರಣಿ ಕಾಣಿಸಿದ್ರೊ),,, ನಾನು ನಕ್ಕಿಬಿಟ್ಟು... ಕಾಮೆಂಟ್ ಬರಿತ ಇದೇನೇ....ಅಸ್ಟೆ
:-)

ಗುರು

Mohan said...

Yes sir finally noodles and magge huli , haha

ಹರೀಶ ಮಾಂಬಾಡಿ said...

:)