Wednesday, January 28, 2009

ಉಟ್ಟು ಓರಾಟಗಾರರು ಇವರು

ಮಂಗಳೂರಲ್ಲಿ ನಡೆದ ಪಬ್ ಮೇಲಿನ ದಾಳಿಯನ್ನು ಖಂಡಿಸಿ ಬೆಂಗಳೂರಲ್ಲಿ ಇಂದು ನಡೆದ ಪ್ರತಿಭಟನೆಯ ಚಿತ್ರ ಇದು. ಇದು ಪ್ರಕತವಾಗಿರೋದು ಇಂದಿನ ಸಂಜೆವಾಣಿ ಪತ್ರಿಕೆಯಲ್ಲಿ.
ಈ ಪ್ರತಿಭಟನೆಯನ್ನು ನಡೆಸಿದವರು ಬೆಂಗಳೂರು ಯುವ ಕಾಂಗ್ರೆಸ್ ಸದಸ್ಯರು.
ಈ ಚಿತ್ರದಲ್ಲಿ ಪೋಸ್ಟರ್ ಮೇಲೆ ಏನು ಬರೆದಿದೆ ಅಂತಾ ಒಮ್ಮೆ ಓದಿ.
"ಶಾಂತಿಗೆ ಹೆಸರಾದ ಕರ್ನಾಟಕ ರಾಜ್ಯದಲ್ಲಿ
ಅಶಾಂತಿಯ ಕಿಚ್ಚನ್ನು ಬಿ.ಜೆ.ಪಿ ನಾಯಕರು ಅಚ್ಚುತ್ತಿದ್ದಾರೆ"















ಹಚ್ಚುತ್ತಿದ್ದಾರೆ ಅನ್ನೋದನ್ನ ಅಚ್ಚುತ್ತಿದ್ದಾರೆ ಅಂತಾ ಬರೆಸಿದ್ದಾರಲ್ಲ,
ಇವರು ನಮ್ಮ ಕನ್ನಡ ತಾಯಿಯ ಎಮ್ಮೆಯ ಮಕ್ಕಳು ಮತ್ತು ಉಟ್ಟು ಓರಾಟಗಾರರು.
ಜೊತೆಗೆ ಗೃಹಮಂತ್ರಿ ವಿ.ಎಸ್. ಆಚಾರ್ಯ ಅವರ ಖಾತೆಯನ್ನು ಏನಂತಾ ಬರೆದಿದ್ದರೆ ನೋಡಿ
"HOUSE MINISTER" ಅಂತೆ.
HOME MINISTER ಖಾತೆಗೆ ಇವರು ಕೊಟ್ಟಿರುವ ಹೆಸರು ಅನ್ಸುತ್ತೆ.
HOME ಮತ್ತು HOUSE ಅನ್ನೋದಕ್ಕೆ ಒಂದೇ ಅರ್ಥ ಆಲ್ವಾ ಇಂಗ್ಲಿಷ್ ನಲ್ಲಿ,
ಅದಕ್ಕೆ ಈ ಭೂಪರು ಈ ರೀತಿ ಕೂಡ ಬರೆಯಬಹುದು ಅಂತಾ ಅನ್ಕೊಂಡಿದಾರೆ.
ಕನ್ನಡಮ್ಮ ನೀನೆ ಧನ್ಯೆ.

ಇವರಿಗೆ ಬಿ.ಜೆ.ಪಿ ಯ ಮೇಲೆ ಪ್ರತಿಭಟನೆ ನಡೆಸಲು ಒಂದು ನೆಪ ಸಾಕು ಅಷ್ಟೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

20 comments:

Unknown said...

ಹೌದು ಕಣ್ರೀ ಹುಟ್ಟು ಹೋರಾಟಗಾರರು ಇವರು. ಹ ಹ ಹ. ಪ್ರಯೋಜನಕ್ಕೆ ಬಾರದವರು. ಮಾತೃಭಾಷೆ ಕೊಲೆ ಮಾಡ್ತಾಇದಾರೆ ಇವರು.

shivu.k said...

ಶಂಕರಣ್ಣ,

ಇವರು ನಿಜಕ್ಕೂ ಇವರು useless fellows.... ಮೊದಲಿಗೆ ನೈತಿಕತೆ ಇಲ್ಲದವರು....ಮಾತೃಭಾಷೆಯ ತುಳಿಯುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವವರು....

ಹೇಮಂತ Hemanth said...

ಇಡಿದು ಹೊಟ್ಟಿಗೆ ನಿಲ್ಲಿಸಿ ಓಡಿಬೇಕು ಇಂತ ಓರಾಟಗಾರರಿಗೆ...

Harsha Bhat said...

Ivarige "HASANADA HATTIRA ARAKALAGOODU" antha helasidre hyageirabahudu ............

Che che asayya anteera?

sandhyabhargava said...

ee bhooparige kannadadalli ondu 'crash course' kodbeeku noodu :)

Sushrutha Dodderi said...

:D :D :D

Avin Padaki said...

ಒಬ್ರಾದ್ರು ಕನ್ನದದವ್ರ್ಥರ ಇದಾರ? ಎಲಾ ಕೊಂಗ್ರು ತರ ಇದಾರೆ! ಕನ್ನಡ ಇಷ್ಟದ್ರು ಚೆನ್ನಗಿದಯಾಲ್ಲ ಅಂಥ ಸಂತೋಷ ಪಡಬೇಕು!! :) ಹಿಹಿಹಿಹಿಹಿಹಿ ..... ಕಳ ಬಡ್ದೆಥವು! ಎಲ್ದ್ರಿಗು ಒಂದು ರಾಜ ವ್ಹಿಸ್ಕಿ ಅಂಡ್ ಚಿಕನ್ ಬಿರ್ಯಾನಿ ಕೊಡ್ಸವ್ರೆ ಅನ್ಸಥೈಥೆ!!

sunaath said...

ಇವರು ಬೆಂಕಿ 'ಅಚ್ತಾ'ಇರೋದು ಕನ್ನಡಾಂಬೆಗೆ!

ತೇಜಸ್ವಿನಿ ಹೆಗಡೆ said...

hahahah :) :D ಅಯ್ಯೋ ಕನ್ನಡದಲ್ಲಿ ’ಹ’ ಕಾರ ಉಚ್ಚಾರದಲ್ಲಿಲ್ಲವಂತೆ.. ಹಾಗಂತ ಕನ್ನಡ ಭಾಷೆಯ ಉದ್ಧಾರಕರು ಹೇಳುತ್ತಾರೆ. ನಮ್ಮ ಪುಣ್ಯ.. houaw ಎಂದಾದರೂ ಕಂಗ್ಲೀಷಿನಲ್ಲಿ ಬರೆದಿದ್ದಾರೆ. 'ಹ' ಕಾರ ಬಳಸಬಾರದೆಂದು ouse ..ಎಂದು ಬರೆದಿಲ್ಲವಲ್ಲ..:)

Anveshi said...

ಹಿವರು ಅಕ್ಕಿಯ ಅಲ್ಲು ಉದುರಿಸೋದು ಏಗೆ, ಹೆಲ್ಲಿದೆ ಹದು ಹಂತ ಉಡುಕ್ತಾ ಹಿರೋರು!!!

Shankar Prasad ಶಂಕರ ಪ್ರಸಾದ said...

ತೇಜಕ್ಕ..ನಿಜಕ್ಕೂ ಸಖತ್ ನಕ್ಕಿದ್ದು ನಿಮ್ಮ ಕಮೆಂಟಿಗೆ. ದೇವ್ರಾಣೇಗ್ಲೂ..

Anonymous said...

ಶಂಕ್ರ

ಅವರು ಬರೆದಿರೋದು ಸರಿ. ಕಿಚ್ಚನ್ನು ಅಚ್ತಾನೇರೊದು :)

ಇನ್ನು ಹ ಕಾರದ ವಿಷಯ. ದೇವರಾಣೆ ಬೆಂಗಳೂರಲ್ಲಿ ೮೦% ಮಂದಿ ಹ ಹೇಳಲ್ಲ.

’ಅಲ್ಲಿಗೋಗು’, ’ಅದಕ್ಕಾಕು’, ’ಅದೆಂಗೆ’, ’ಇದೆಂಗೆ’ ಇಂಗೇ ಮಾತಾಡೋದು.

ಒಂದ್ ಸಲ ನೀವು ನಿಮ್ ಮಾತಾಡೋದನ್ನ ಗಮನಿಸಿರಿ( ಬೆಂಗಳೂರಿನವರಾದ್ರೆ ).

ಬಿಟ್ಟಾಕು, ಹೆಚ್ಚೆಚ್ಚು, ಕಿತ್ತಾಕು, ಇವೆಲ್ಲ ಬರೆವಣಿಗೆಗೂ ( ಹ ಕಾರ ಲೋಪದವು ) ಬಂದಿದೆ.

ಬೆಂಗಳೂರು ತಮಿಳ್ನಾಡಿಗೆ ’ಅತ್ರ’ಇದ್ಯಲ್ಲ ಅದಕ್ಕಿರಬೇಕು. ಹೊಸೂರ್‍ ಬಸ್ಸಗಳ ಮೇಲೆ ತಮಿಳಲ್ಲಿ ’ಹೊಸೂರು’ ಅನ್ನು ’ಒಚೂರ್‍’ ಎಂದು ಬರೆದಿರ್‍ತಾರೆ.

ಇನ್ನೂ ಮಾವಳ್ಳಿ(ಹಿಂದೆ ಮಾವಹಳ್ಳಿ), ಕುಂದನಳ್ಳಿ(ಕುಂದನಹಳ್ಳಿ) ಹೀಗೆ ಬೆಂಗಳೂರಲ್ಲಿ ಬೇಕಾದಷ್ಟು ’ಅಳ್ಳಿ’ಗಳ ’ಎಸರಲ್ಲೇ’ ’ಹ’ ಬಿದ್ದೋಗದೆ.

ಇನ್ನು ನಿಮ್ ಬರಹದಲ್ಲಿ ’ಪ್ರಕತ’ಅಲ್ಲ ಅದು ’ಪ್ರಕಟ’.

ಏನೋ ಟೈಪೋ ಇರಬೇಕು ಅಲ್ವ!

Prabhuraj Moogi said...

ಸಾರ್ ಅವರು "ಹಾ"ರಾಟಗಾರರು... ಬೀದೀಲಿ ನಿಂತು ಹಾರಾಡಿದ್ದೆ ಬಂತು... ಅಷ್ಟೇ...

prasca said...

ಹ ಹ ಹ ಏನ್ ಸಾರ್, ನಿಮ್ಗೆ ಇಂಥಹ ಸಂಗತಿಗಳು ಎಷ್ಟು ಸುಲಭವಾಗಿ ಕಾಣಿಸುತ್ವೆ. ನಿಮ ಕನ್ನಡಕ ನಮ್ಗೂ ಸ್ವಲ್ಪ ಕೊಡಿ.
ನಗಬೇಕು ಎಂದಾಗಲೆಲ್ಲ ನಿಮ್ಮ ಬ್ಲಾಗಿಗೆ ಬಂದ್ರೆ ಸಾಕು ಹಾಸ್ಯ ವಿಡಂಬನೆ ಎರಡೂ ಸಕತ್ತಾಗಿ ಸಿಗುತ್ತೆ.

Shankar Prasad ಶಂಕರ ಪ್ರಸಾದ said...

ಮಿ|ಅಲೆಮಾರಿ,
ಕನ್ನಡಕ ಹಾಕ್ಕಳಲ್ಲಾ ಸಾ ನಾನು. ಕಣ್ಣು ಚೆನ್ನಾಗಿದೆ ದೇವರ ದಯೆಯಿಂದ.
ಇನ್ನೊಮ್ಮೆ ಈ ಥರ ಕಂಡಾಗ ನಿಮ್ಗೆ ಇನ್ಫಾರ್ಮ್ ಮಾಡ್ತೀನಿ. ಸರಿ ನಾ ?

ಕಟ್ಟೆ ಶಂಕ್ರ

Lakshmi Shashidhar Chaitanya said...

"ಅದು ಶಾಂತಿಗೆ ಎಸರಾದ ಖರ್ನಾಟಕದಲ್ಲಿ ಹಶಾಂತಿಯ ಕಿಚ್ಚು..." ಅಂತ ಇರ್ಬೇಕಿತ್ತು ಶಂಕ್ರಣ್ಣಾ...;-) ಸ್ಪೆಲ್ಲಿಂಗ್ ಮಿಸ್ಟೀಕ್ [uhahahahaa] ಆಗೋಗಿದೆ !

NiTiN Muttige said...

ಪಾಪಾ,ಉಟ್ಟು ಓರಾಟಗಾರರಿಗೆ ದಿನಂಪ್ರತಿ ಓರಾಟದ ಕೆಲಸವೇ ಇದ್ದರೇ ಮತ್ತೇನು ಆಗತ್ತೆ!!
ಓರಾಟ ಮಾಡೋದಕ್ಕೆ ಮಾಡಿದ್ರೆ ಚೆಂದ ಇತ್ತು

Anonymous said...

sankranna...check this link

http://www.daijiworld.com/chan/view_img1.asp?cid=2453

Anonymous said...

ಹೋಮ್ ಮಿನಿಸ್ಟರುಗಳೆಲ್ಲಾ ಕೆಲಸಕ್ಕೆ ಬಾರದವರಾದ್ದರಿಂದ ಹೌಸ್ ಮಿನಿಸ್ಟರ್ ಅಂದಿರ್ಬೇಕು ಕಣ್ರೀ...

ಅದಕ್ಕೆ ನೀವು ಹವರನ್ನ ಹೀ ರೀತಿ ಹವಾಮಾನ ಮಾಡ್ಬಾರ್ದಪ್ಪ!:)

-ರಂಜಿತ್

Santhosh Rao said...

:) :(