Tuesday, January 20, 2009

ಮೊಬೈಲ್ ಸಂಸಾರ

ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ.
ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ.
ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸಾರ ಅನ್ನೋದು ಒಂಥರಾ ಬೇವು ಬೆಲ್ಲದ ಆಟ.
ಕೆಲವೊಂದು ಸಂಸಾರಗಳಲ್ಲಿ ಬೇವು ಜಾಸ್ತಿ ಆಗಿರುತ್ತೆ, ಕೆಲವು ಕಡೆ ಬೆಲ್ಲ ಜಾಸ್ತಿ ಇರುತ್ತೆ.
ಸಮವಾಗಿ ಬೇವು ಬೆಲ್ಲ ಇರೋದು ಕೂಡಾ ಸುಮಾರು ನೋಡಿದೀವಿ. ಸರಿ, ಬೇವು ಬೆಲ್ಲವನ್ನು ಬಿಟ್ಟಾಕೋಣ, ಬಹಳ ಹಳೆ ಎಕ್ಸಾಂಪಲ್ ಆಯ್ತು ಇದು.
ನಮ್ಮ ಈಗಿನ ಕಾಲಕ್ಕೆ ಅನುಗುಣವಾಗಿ ಮೊಬೈಲ್ ಭಾಷೆಯಲ್ಲಿ ಹೇಳಬಹುದು.

ಗಂಡ – ಮೊಬೈಲು
ಹೆಂಡತಿ - ಬ್ಯಾಟರಿ ಚಾರ್ಜರ್
ಮದುವೆ ಅನ್ನೋದು - ಸಿಮ್ ಕಾರ್ಡು ವಿತ್ ಲೈಫ್ ಟೈಮ್ ವ್ಯಾಲಿಡಿಟಿ (ಏರ್ಟೆಲ್ 99ರೂ ಪ್ಯಾಕ್ ಥರ)

ಚಾರ್ಜರ್ ಇಲ್ದೆ ಮೊಬೈಲು ವೇಸ್ಟು, ಮೊಬೈಲ್ ಇಲ್ದೆ ಚಾರ್ಜರ್ ವೇಸ್ಟು.
ಮೊಬೈಲ್ ಗೆ ಬೇರೆ ಚಾರ್ಜರ್ ಉಪಯೋಗಿಸ್ತೀನಿ, ಅಥವಾ ಬೇರೆ ಮೊಬೈಲ್ ಗೆ ಚಾರ್ಜ್ ಕೊಡ್ತೀನಿ ಅನ್ನೋರು ಇದಾರೆ,
ಅವರ ಕಥೆ ಸಧ್ಯಕ್ಕೆ ಅಪ್ರಸ್ತುತ.

ಕರೆಕ್ಟಾಗಿ ಗಂಡ ಹೆಂಡತಿ ಮೊಬೈಲ್ ಹಾಗು ಚಾರ್ಜರ್ ಥರ ಇರಬೇಕು.
ಅವಳಿಲ್ದೆ ಇವ್ನು ವೇಸ್ಟು, ಇವ್ನಿಲ್ದೆ ಇವ್ಳು ವೇಸ್ಟು.
ಇನ್ನು ಮದ್ವೆ ಅನ್ನೋದು, ಲೈಫ್ ಟೈಮ್ ವ್ಯಾಲಿಡಿಟಿ ಇರೋ ಪ್ರೀಪೆಯ್ಡ್ ಸಿಮ್ ಕಾರ್ಡು.
ಮದ್ವೆ ಆಗೋದು ಸಿಮ್ ಕಾರ್ಡ್ ಆಕ್ಟಿವೇಶನ್.
ಮದುವೆಯನ್ನ ನಾನು ಪ್ರೀಪೆಯ್ಡ್ ಸಿಮ್ ಅಂತಾ ಯಾಕೆ ಹೇಳಿದೆ ಅಂದ್ರೆ, ಟೈಮ್ ಟು ಟೈಮ್ ಪ್ರೀತಿ, ವಿಶ್ವಾಸ, ನಂಬಿಕೆ, ಅಕ್ಕರೆಗಳನ್ನು ರೀಚಾರ್ಜ್ ಮಾಡದೆ ಇದ್ರೆ,
ಇನ್ ಕಮಿಂಗೂ ಇರಲ್ಲ, ಔಟ್ ಗೊಯಿಂಗಂತೂ ಮೊದ್ಲೇ ಇರಲ್ಲ. ಇದೆ ರೀತಿ ಜಾಸ್ತಿ ದಿನ ಬಿಟ್ರೆ ವ್ಯಾಲಿಡಿಟಿ ಹಾಳಾಗುತ್ತೆ.

ಇನ್ನೊಂದು ರೀತಿ ಹೇಳ್ಬೇಕು ಅಂದ್ರೆ ಗಂಡ ಹೆಂಡತಿ ೨ ಮೊಬೈಲ್ ಥರ ಇರುತ್ತಾರೆ.
ಇವರಿಬ್ಬರ ನಡುವಿನ ಪ್ರೀತಿ, ವಿಶ್ವಾಸ, ಅಕ್ಕರೆ, ಒಲವು - ಇವುಗಳು ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ಕಾಲ್ ಗಳಿದ್ದ ಹಾಗೆ.
ಒಂದೇ ಕಡೆಯಿಂದ ಕಾಲ್ ಬರಬಾರದು. ಒಮ್ಮೆ ಈ ಮೊಬೈಲಿಂದ ಕಾಲ್ ಬರಬೇಕು, ಮಗದೊಮ್ಮೆ ಆ ಮೊಬೈಲಿಂದ ಕಾಲ್ ಬರಬೇಕು. ಅವಾಗ್ಲೇ ಕನೆಕ್ಷನ್ ಸರಿಯಾಗಿ ಇರುತ್ತದೆ.
ಬರೀ ಒಂದೇ ಕಡೆಯಿಂದ ಕಾಲ್ ಬರ್ತಾ ಇದ್ದು, ಇನ್ನೊಂದು ಕಡೆಯಿಂದ ಏನೂ ಇಲ್ದೆ ಇದ್ರೆ, ಸದಾ ಕಾಲ್
ಮಾಡುತ್ತಿರುವವರ ಕರೆನ್ಸಿ (ಪ್ರೀತಿ, ಅಕ್ಕರೆ, ಒಲವು, ಎಲ್ಲಕಿಂತ ಹೆಚ್ಚಾಗಿ ವಿಶ್ವಾಸ) ಕಮ್ಮಿ ಆಗ್ತಾ ಹೋಗುತ್ತದೆ.
ಹೀಗೆಯೇ ಆಗ್ತಾ ಇದ್ರೆ, ಕೊನೆಗೆ ಈ ಕಡೆಯ ಮೊಬೈಲ್ ನಲ್ಲಿ ಕರೆನ್ಸಿ ಫುಲ್ ಕಮ್ಮಿ ಆಗುತ್ತೆ.
ಔಟ್ ಗೋಯಿಂಗ್ ಇರಲ್ಲ, ಕೊನೆಗೆ ಇನ್ಕಮಿಂಗ್ ಕೂಡಾ ಇರೋದಿಲ್ಲ.

ಆ ಕಡೆಯವರು ಇದನ್ನು ಬಹಳ ತಡವಾಗಿ ತಿಳಿದುಕೊಂಡು ಕಾಲ್ ಮಾಡಲು ಪ್ರಯತ್ನ ಪಟ್ಟರೂ, ಈ ಕಡೆಗೆ ಕನೆಕ್ಟ್ ಆಗಲ್ಲ.
ಕಾಲ್ ಮಾಡಿದಾಗ ಆ ಕಡೆಯಿಂದ ರಿಸೀವ್ ಮಾಡಿದರೆ ಓಕೆ, ರಿಸೀವ್ ಮಾಡ್ಲಿಲ್ಲ ಅಂದ್ರೆ ಬರೀ ಮಿಸ್ಡ್ ಕಾಲ್ ಆಗುತ್ತೆ.
ಬರೀ ಮಿಸ್ಡ್ ಕಾಲುಗಳು ಆದ್ರೆ ಸಖತ್ ಡೇಂಜರ್. ಸಂಬಂಧ ಕೆಡುತ್ತಾ ಹೋಗುತ್ತೆ. ಇಲ್ಲದ ಅನುಮಾನ, ಸಂಶಯಗಳಿಗೆ ಆಸ್ಪದ ಕೊಡುತ್ತೆ.
ಆದ್ದರಿಂದ, ಎರಡೂ ಮೊಬೈಲ್ಗಳ ನಡುವೆ ನಿರಂತರವಾಗಿ ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ನಡೀತಾ ಇರಬೇಕು.

ಏನಂತೀರಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

ಸುಶ್ರುತ ದೊಡ್ಡೇರಿ said...

ತರ್ಲೆ!

gnanamurthy said...

ಸಂಸಾರದ ಗುಟ್ಟನು ಮೊಬೈಲ್ ನಲಿ ಓದಿ ತುಂಬಾನೇ ಸಂತೋಷ ಆಯಿತು ಸರ್ .:-)

shreeshum said...

bahala kasarattina baraha

ಮಾಯ್ಸ said...

ಪಾಪಾ ಏನೇನೋ ತಲೆ ಕೆಡೆಸಿಕೊಂಡಿದ್ದೀರಿ...

:)

ಚಿತ್ರಾ said...

ಒಳ್ಳೇ ಹೋಲಿಕೆ ಸರ್ !
ಚೆನ್ನಾಗಿದೆ !

"ಟೈಮ್ ಟು ಟೈಮ್ ಪ್ರೀತಿ, ವಿಶ್ವಾಸ, ನಂಬಿಕೆ, ಅಕ್ಕರೆಗಳನ್ನು ರೀಚಾರ್ಜ್ ಮಾಡದೆ ಇದ್ರೆ,
ಇನ್ ಕಮಿಂಗೂ ಇರಲ್ಲ, ಔಟ್ ಗೊಯಿಂಗಂತೂ ಮೊದ್ಲೇ ಇರಲ್ಲ. ಇದೆ ರೀತಿ ಜಾಸ್ತಿ ದಿನ ಬಿಟ್ರೆ ವ್ಯಾಲಿಡಿಟಿ ಹಾಳಾಗುತ್ತೆ." ಚಿಕ್ಕ ಪುಟ್ಟದಕ್ಕೂ ’ ಡೈವೋರ್ಸ್’ ಅನ್ನೋ ಈಗಿನ ಕಂಡಿಶನ್ ಗೆ ತುಂಬಾ ಹೊಂದಿಕೊಳ್ಳತ್ತೆ!

ವಿಕಾಸ್ ಹೆಗಡೆ said...

ಹ್ಮ್.. ನಿಜ ಕಣ್ರೀ...

shivu said...

ಶಂಕರ್ ಸಾರ್,

ಫೋಟೊ ಬದಲು ಒಂದು ಸೀರಿಯಸ್ ಲೇಖನವಿದೆಯಲ್ಲ ಅಂತ ಓದಲೂ ಬಂದರೆ ಇಲ್ಲೂ ಕಾಮಿಡಿನಾ ! ಸಂಸಾರದ ತಾಪತ್ರಯವನ್ನು ಮೊಬೈಲಿಗೆ ಚೆನ್ನಾಗಿ ಹೋಲಿಸಿದ್ದೀರಿ.....ಮುಂದುವರಿಸಿ........

Harish - ಹರೀಶ said...

ಎಲ್ಲ ಓಕೆ .. ಆದ್ರೆ

ಗಂಡ - ಬ್ಯಾಟರಿ ಚಾರ್ಜರ್
ಹೆಂಡತಿ – ಮೊಬೈಲು

ಆಗಿದ್ರೆ ಚೆನ್ನಾಗಿರ್ತಿತ್ತು ;-) ಯಾವ ಅರ್ಥದಲ್ಲಾದ್ರೂ ತಿಳ್ಕೊಳ್ಳಿ..

ಕಟ್ಟೆ ಶಂಕ್ರ said...

ಸುಶ್ರುತ - ಅದ್ಯಾವ ಅರ್ಥದಲ್ಲಿ ತರ್ಲೆ ಅಂದ್ಯೋ ಗೊತ್ತಾಗಿಲ್ಲ ಮಾರಾಯ. ಯಾವ್ದುಕ್ಕೂ ಒಂದು ಥ್ಯಾಂಕ್ಸ್ ಮಡೀಕ್ಕೋ.
ಮೂರ್ತಿಗಳೇ - ಇದು ಗುಟ್ಟಲ್ಲ, ಸಮಾನ್ಯ ತಿಳುವಳಿಕೆ, ಅಷ್ಟೆ
ಶ್ರೀಶಂ - ಸಂಸಾರದ ಕಸರತ್ತಿಗೆ ಹೋಲಿಸಿದರೆ, ಇದೇನು ಅಲ್ಲ ಸ್ವಾಮಿ
ಮಾಯ್ಸಾ - ತಲೆ ಕೆಡಿಸಿಕೊಂಡು ಬರೆದಿಲ್ಲಪ್ಪ, ಸ್ವಲ್ಪ.. ಅಂದ್ರೆ ಚೂರು ತಲೆ ಓಡ್ಸಿ ಬರೆದಿರೋದು
ಚಿತ್ರಕ್ಕ - ತುಂಬ ಥ್ಯಾಂಕ್ಸ್, ನಿಮ್ಮಂಥವರ ಪ್ರೋತ್ಸಾಹದಿಂದ, ಆಟೋ ಫೋಟೋ ಮಾತ್ರವಲ್ಲದೆ ಈ ಥರ ಅಪರೂಪಕ್ಕೊಮ್ಮೆ ಬರೀತೀನಿ
ವಿಕಾಸ - ಯಾಕಪ್ಪಾ "ಒಂದೇ ಒಂದು ನಿಟ್ಟುಸಿರು" ಕೊಟ್ಟು ನಿಜ ಅಂತಾ ಇದ್ದೀಯ ?
ಶಿವಣ್ಣ - ಲೇಖನದಲ್ಲಿ ಹಾಸ್ಯ, ಸ್ವಲ್ಪ ಸೀರಿಯಸ್ನೆಸ್ ಎಲ್ಲ ಇಲ್ದೆ ಇದ್ರೆ, ಸಪ್ಪೆ ಗಂಜಿ ಕುಡಿದ ಹಾಗೆ. ಎಲ್ಲ ಇದ್ರೆ, ಒಳ್ಳೆ ಮದ್ವೆ ಊಟ ಥರ ಇರತ್ತೆ. ಅಲ್ವೇ ? Mixture of Beauty and Intelligence ಅಂತಾರಲ್ಲ, ಹಂಗೆ
ಹರೀಶ - ಎಲ್ಲೆಲ್ಲೊ ಹೋಗ್ತಾ ಇದ್ದೀಯ..ನಿಮ್ಮಪ್ಪನ ಫೋನ್ ನಂಬರ್ ಕೊಡು, ಬೇಗ ನಿನಗೊಂದು ಲೈಫ್ ಟೈಮ್ ಕನೆಕ್ಷನ್ ಕೊಡ್ಸಕ್ಕೆ ಹೇಳ್ತೀನಿ.

ಈ ಬರಹ ಮೆಚ್ಚಿಕೊಂಡು ಬಹಳಷ್ಟು ಮಂದಿ ಈ ಮೇಲ್ ಮುಖೇನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಸಂಬಂಧದ ವ್ಯಾಲಿಡಿಟಿಯನ್ನು ದೇವರು ಆದಷ್ಟು ಜಾಸ್ತಿ ಮಾಡಲಿ.

ಕಟ್ಟೆ ಶಂಕ್ರ

Swetha said...

hmmm., thumba yochne maadi athryso vishya.. bahala chennagi moodibandidhe :)