ಈ ಫೋಟೋನಾ ಕಳ್ಸಿರೋದು ನನ್ನ ಸ್ನೇಹಿತ ಶ್ರೀನಿವಾಸ ಗೌತಮ್.
ಮೊನ್ನೆ ಈ-ಮೇಲಲ್ಲಿ ಕಳ್ಸಿ, ಅದರ ಜೊತೆ ಬರ್ದಿದ್ದು ಹಿಂಗೆ..
"ಕೋತಿ ತಾನ್ ಕೆಡೋದಲ್ದೆ..." ಅಂತಾರಲ್ಲಾ ಹಾಗೆ ನಿನ್ನ ಹುಚ್ಚನ್ನ ಇವಾಗ ಎಲ್ರಿಗೂ ಹರಡಿದೀಯಾ ಅನ್ಸುತ್ತೆ.
ಮೊನ್ನೆ ರಾಜಭವನ್ ರಸ್ತೆಯಲ್ಲಿ ಈ ಆಟೋ ಫೋಟೋ ತೆಗೆದೆ. ನಿನ್ನ ಆಟೋ ಗ್ಯಾಲರಿಯಲ್ಲಿ ಈ ಫೋಟೋ ಇಲ್ಲಾ ಅನ್ಸುತ್ತೆ.
ಗೌತಮ, ತುಂಬಾ ತುಂಬಾ ಥ್ಯಾಂಕ್ಸ್ ಕಣೋ, ಹೀಗೇ ಫೋಟೋ ತೆಗೆದು ಕಳುಸ್ತಾ ಇರು.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Saturday, October 18, 2008
Tuesday, October 14, 2008
ಆಟೋ ಅಣಿಮುತ್ತುಗಳು - ೪೫ - ಸಿಂಗಾರ ಈ ಥರಾ
ನಾನು ಸಧ್ಯಕ್ಕೆ ಜರ್ಮನಿಯಲ್ಲಿ ಇದೀನಿ. ಆದ್ರೆ ನಮ್ಮ ಸ್ನೇಹಿತರು, ಅಭಿಮಾನಿ ದೇವ್ರುಗಳು ಆಟೋ ಫೋಟೋ ತೆಗೆದು
"ಶಂಕ್ರ, ಇದನ್ನ ಸೋಮಾರಿ ಕಟ್ಟೆಯಲ್ಲಿ ಹಾಕೋ" ಅಂತಾ ಕಳುಸ್ತಾ ಇದಾರೆ. ತುಂಬಾ ತುಂಬಾ ಥ್ಯಾಂಕ್ಸ್.
ಈ ಫೋಟೋವನ್ನ ನನ್ನ ಸ್ನೇಹಿತ / ಸಹೋದ್ಯೋಗಿ ವೆಂಕಟಕೃಷ್ಣ ಕಳಿಸಿದ್ದು.
ನನ್ನ ಬ್ಲಾಗಿನಲ್ಲೇ ಈ ಬರಹ ಇರೋ ಆಟೋ ಫೋಟೋ ಮುಂಚೆ ಹಾಕಿದ್ದೆ. ನಾನು ಅದನ್ನು ತೆಗೆದದ್ದು ಡೈರಿ ಸರ್ಕಲ್ ನಲ್ಲಿ.
ಇವಾಗ ಹಾಕ್ತಾ ಇರೋ ಫೋಟೋ ಕೂಡಾ ಅದೇ ಆಟೋದು. ಮುಂಚೆ ಬರೆಸಿದ ಅಣಿಮುತ್ತುಗಳ ಜೊತೆ ಇನ್ನೂ ಕೆಲವನ್ನು ಸೇರಿಸಿದ್ದಾನೆ ಈ ಅಣ್ಣಾ. ಸಾಲದ್ದಕ್ಕೆ ಆಯುಧ ಪೂಜೆಯ ಅಲಂಕಾರ. ನೋಡ್ರಪ್ಪಾ..
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
"ಶಂಕ್ರ, ಇದನ್ನ ಸೋಮಾರಿ ಕಟ್ಟೆಯಲ್ಲಿ ಹಾಕೋ" ಅಂತಾ ಕಳುಸ್ತಾ ಇದಾರೆ. ತುಂಬಾ ತುಂಬಾ ಥ್ಯಾಂಕ್ಸ್.
ಈ ಫೋಟೋವನ್ನ ನನ್ನ ಸ್ನೇಹಿತ / ಸಹೋದ್ಯೋಗಿ ವೆಂಕಟಕೃಷ್ಣ ಕಳಿಸಿದ್ದು.
ನನ್ನ ಬ್ಲಾಗಿನಲ್ಲೇ ಈ ಬರಹ ಇರೋ ಆಟೋ ಫೋಟೋ ಮುಂಚೆ ಹಾಕಿದ್ದೆ. ನಾನು ಅದನ್ನು ತೆಗೆದದ್ದು ಡೈರಿ ಸರ್ಕಲ್ ನಲ್ಲಿ.
ಇವಾಗ ಹಾಕ್ತಾ ಇರೋ ಫೋಟೋ ಕೂಡಾ ಅದೇ ಆಟೋದು. ಮುಂಚೆ ಬರೆಸಿದ ಅಣಿಮುತ್ತುಗಳ ಜೊತೆ ಇನ್ನೂ ಕೆಲವನ್ನು ಸೇರಿಸಿದ್ದಾನೆ ಈ ಅಣ್ಣಾ. ಸಾಲದ್ದಕ್ಕೆ ಆಯುಧ ಪೂಜೆಯ ಅಲಂಕಾರ. ನೋಡ್ರಪ್ಪಾ..
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ಆಯುಧ ಪೂಜೆ,
ಸಿಂಗಾರ
Monday, October 13, 2008
ಆಟೋ ಅಣಿಮುತ್ತುಗಳು - ೪೪ - ಪಾಪ ಪುಣ್ಯ
ನನ್ನ ಆಟೋ ಫೋಟೋ ಹುಚ್ಚು ನನ್ನ ಮಿತ್ರರಿಗೂ ಹತ್ತಿದೆ ಅನ್ಸುತ್ತೆ.
ಅವರೂ ಕೂಡಾ ಇವಾಗಿವಾಗ ಆಟೋಗಳನ್ನು ಛೇಸ್ ಮಾಡಿ ಕ್ಲಿಕ್ಕಿಸಿ ನಂಗೆ ಕೊಡ್ತಾರೆ.
ಈ ಫೋಟೋ ನನ್ನ ಚಡ್ಡಿ ಮಿತ್ರ ಅರುಣ ಬೆಂಗಳೂರಿಗೆ ಕಳೆದ ಶುಕ್ರವಾರ ಬಂದಿದ್ದ.
ಅಲ್ಲಿ ಅವನು ಓಡಾಡುವಾಗ ಈ ಆಟೋ ಕಣ್ಣಿಗೆ ಬಿಟ್ಟಂತೆ. ತಕ್ಷಣ ನನ್ನ ಜ್ಞಾಪಕ ಬಂದು, ಅವನೇ ಫೋಟೋ ತೆಗೆದು ನಂಗೆ ಕೊಟ್ಟ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಅವರೂ ಕೂಡಾ ಇವಾಗಿವಾಗ ಆಟೋಗಳನ್ನು ಛೇಸ್ ಮಾಡಿ ಕ್ಲಿಕ್ಕಿಸಿ ನಂಗೆ ಕೊಡ್ತಾರೆ.
ಈ ಫೋಟೋ ನನ್ನ ಚಡ್ಡಿ ಮಿತ್ರ ಅರುಣ ಬೆಂಗಳೂರಿಗೆ ಕಳೆದ ಶುಕ್ರವಾರ ಬಂದಿದ್ದ.
ಅಲ್ಲಿ ಅವನು ಓಡಾಡುವಾಗ ಈ ಆಟೋ ಕಣ್ಣಿಗೆ ಬಿಟ್ಟಂತೆ. ತಕ್ಷಣ ನನ್ನ ಜ್ಞಾಪಕ ಬಂದು, ಅವನೇ ಫೋಟೋ ತೆಗೆದು ನಂಗೆ ಕೊಟ್ಟ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ಪಾಪ ಪುಣ್ಯ
Saturday, October 11, 2008
ಆಟೋ ಅಣಿಮುತ್ತುಗಳು - ೪೩ - ಏಕಾಂಗಿ
ಕಳೆದ ವಾರ 4 ದಿನ ರಜೆ ಹಾಕಿ ಮೈಸೂರಿಗೆ ಹೋಗಿದ್ದೆ.
ದಸರೆಯ ಟೈಮು ಅಲ್ಲವೇ ? ಅದಕ್ಕೆ ಸಿಟಿ ಕಡೆ ಸುಮ್ನೆ ಒಂದು ರೌಂಡ್ ಹಾಕ್ಕೊಂಡು ಬರೋಣಾ ಅಂತಾ
ನಾನು, ನನ್ನ ಚಡ್ಡಿ ಮಿತ್ರ ಅರುಣ ಹೊರಟಿದ್ವಿ. ಅವಾಗ ಕೆ.ಆರ್.ಸರ್ಕಲ್ ಬಳಿ ಕಂಡದ್ದು.
ಏಕಾಂಗಿ, Leave Me Alone ಅಂತಾ ಬರೆದು, ಕೆಳಗೆ "ಬೆಳದಿಂಗಳಾಗಿ ಬಾ" ಅಂತಾ ಹಾಕಿದಾನೆ.
ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದೀನಿ. ಅರ್ಥ ಆಗ್ತಾ ಇಲ್ಲಾ. ನಿಮಗೆ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ದಸರೆಯ ಟೈಮು ಅಲ್ಲವೇ ? ಅದಕ್ಕೆ ಸಿಟಿ ಕಡೆ ಸುಮ್ನೆ ಒಂದು ರೌಂಡ್ ಹಾಕ್ಕೊಂಡು ಬರೋಣಾ ಅಂತಾ
ನಾನು, ನನ್ನ ಚಡ್ಡಿ ಮಿತ್ರ ಅರುಣ ಹೊರಟಿದ್ವಿ. ಅವಾಗ ಕೆ.ಆರ್.ಸರ್ಕಲ್ ಬಳಿ ಕಂಡದ್ದು.
ಏಕಾಂಗಿ, Leave Me Alone ಅಂತಾ ಬರೆದು, ಕೆಳಗೆ "ಬೆಳದಿಂಗಳಾಗಿ ಬಾ" ಅಂತಾ ಹಾಕಿದಾನೆ.
ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದೀನಿ. ಅರ್ಥ ಆಗ್ತಾ ಇಲ್ಲಾ. ನಿಮಗೆ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ಏಕಾಂಗಿ,
ಬೆಳದಿಂಗಳಾಗಿ ಬಾ
Tuesday, October 7, 2008
ಆಟೋ ಅಣಿಮುತ್ತುಗಳು - ೪೨ - ಕನಸುಗಾರನ ಕನಸು
ಮೈಸೂರಿನ ನಮ್ಮ ಕಟ್ಟೆಯಲ್ಲಿ ಕೂತು ಟೀ ಹೀರಬೇಕಾದ್ರೆ ಅಲ್ಲೇ ನಿಂತಿತ್ತು ಈ
"ಕನಸುಗಾರನ ಒಂದು ಕನಸು".
ಅಷ್ಟೊಂದು ಇಂಟರೆಸ್ಟಿಂಗ್ ಆಗಿ ಏನಿಲ್ಲಾ, ಆದರೂ ಸುಮ್ನೆ ಏನೋ ಫೋಟೋ ತೆಗೀಬೇಕು ಅನ್ನುಸ್ತು. ಅದಕ್ಕೆ ತೆಕ್ಕೊಂಡೆ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
"ಕನಸುಗಾರನ ಒಂದು ಕನಸು".
ಅಷ್ಟೊಂದು ಇಂಟರೆಸ್ಟಿಂಗ್ ಆಗಿ ಏನಿಲ್ಲಾ, ಆದರೂ ಸುಮ್ನೆ ಏನೋ ಫೋಟೋ ತೆಗೀಬೇಕು ಅನ್ನುಸ್ತು. ಅದಕ್ಕೆ ತೆಕ್ಕೊಂಡೆ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಆಟೋ ಅಣಿಮುತ್ತುಗಳು,
ಕನಸುಗಾರನ ಒಂದು ಕನಸು
Monday, October 6, 2008
ಮೈಸೂರಿನ ಕೆಲವು ಫೋಟೋಗಳು
ಕಳೆದ ವಾರ ೪ ದಿನ ಮೈಸೂರಲ್ಲಿ ಇದ್ದೆ. ದಸರಾ ಹಬ್ಬ ಬಂತು ಅಂದ್ರೆ ಸಾಕು, ಇಡೀ ಮೈಸೂರೆ ಸಿಂಗರಿಸಿಕೊಂಡು ಬಿಡುತ್ತೆ. ಮುಂಚಿನ ಥರ ಇಲ್ಲ, ಆದರೂ ಕೂಡ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಕಾಣಬಹುದು. ಹಾಗೆ ಮೈಸೂರಿನಲ್ಲಿ ಬೀಟ್ ಹಾಕಬೇಕಾದರೆ ತೆಗೆದ ಕೆಲವು ಫೋಟೋಗಳು.
ಪ್ರತೀ ಫೋಟೋ ಮೇಲೂ ಎಲ್ಲಿ ತೆಗೆದದ್ದು ಅಂತಾ ಹಾಕಿದೀನಿ, ನಿಮ್ಮ ಅನುಕೂಲಕ್ಕೆ.
ದಸರಾ ಹಬ್ಬದ ಶುಭಾಶಯಗಳು ಎಲ್ಲರಿಗೂ. ತಾಯಿ ಚಾಮುಂಡಿಯ ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾಕಾಲವಿರಲಿ.
ಗನ್ ಹೌಸ್ ಪಕ್ಕದಲ್ಲಿ ಹಾಕಿರುವ ಜಯಚಾಮರಾಜೇಂದ್ರ ಒಡೆಯರ್ ಅವರ ವಿದ್ಯುತ್ ಅಲಂಕೃತ ಚಿತ್ರ. ಇದರ ಮುಂಭಾಗದಿಂದ ಹೋದರೆ ಮೈಸೂರು ಅರಮನೆಯ ದಕ್ಷಿಣ ದ್ವಾರ ಸಿಗುತ್ತದೆ.
ಮೈಸೂರು ಅರಮನೆಯ ಪೂರ್ವ ದ್ವಾರ. ದಸರಾ ವಸ್ತು ಪ್ರದರ್ಶನ ನಡೆಯುವ ಮೈದಾನ ಇದರ ಮುಂದೆಯೇ ಇರೋದು. ಈ ದ್ವಾರದ ಮುಂದೆ ನೆಟ್ಟಗೆ ಹೋದ್ರೆ, ಹಾರ್ಡಿಂಗ್ ಸರ್ಕಲ್ಲು, ಇನ್ನೂ ಮುಂದಕ್ಕೆ ಹೋದ್ರೆ ಸಬರ್ಬನ್ ಬಸ್ ಸ್ಟಾಂಡ್ ಸಿಗುತ್ತೆ.
ಇದು ಕಣಪ್ಪ ನಮ್ಮ ಫೇವರಿಟ್ ಜಾಗ. ರಾತ್ರಿ ಹೊತ್ತು ನಾಯಿ ಥರ ಬೀದಿ ಬೀದಿ ಸುತ್ತಾಡಿ, ಮನೆಗೆ ಹೋಗಿ ಅಮ್ಮಾ, ಊಟ ಹಾಕು ಅಂತಾ ಕೇಳುದ್ರೆ ಎಕ್ಕಡದೇಟು ಗ್ಯಾರಂಟಿ. ನಮ್ಮಂಥ ತಿರುಕರಿಗೆ ಇರೋದೇ ಈ ಅಗ್ರಹಾರದ ನೈಟ್ ಹೋಟಲ್ಲು. ಸಂಜೆ 7 ರಿಂದ ಶುರುವಾಗಿ ರಾತ್ರಿ ಸುಮಾರು 12 ರ ವರೆಗೂ ತೆಗೆದಿರುತ್ತೆ.ಇವತ್ತಿನದಲ್ಲ, ನಮ್ಮಪ್ಪ ಮೈಸೂರಿಗೆ ಬಂದಾಗಿನಿಂದಾ ಇದೆಯಂತೆ. ಈ ಹೋಟ್ಲು, ಚಿಕ್ ಮಾರ್ಕೆಟ್ ಸರ್ಕಲ್ ಉರುಫ್ ಅಗ್ರಹಾರ ಸರ್ಕಲ್ಲಲ್ಲಿ ಇರೋ ಜಟಕಾ ಸ್ಟಾಂಡಿನ ಹಿಂದೆ ಇದೆ. ಇಲ್ಲಿ ಸಿಗೋ ಎಲ್ಲಾ ಐಟಂ ಮಸ್ತಾಗಿ ಇರತ್ತೆ. ಪೂರಿ ಸಾಗು, ಇಡ್ಲಿ ವಡೆ, ರೈಸ್ ಬಾತ್, ಚಿತ್ರಾನ್ನ. ಸಖತ್ ಕಣ್ರೀ.

ಅಗ್ರಹಾರ,
ಅರಮನೆ,
ಗನ್ ಹೌಸ್,
ಜಟಕಾ ಸ್ಟ್ಯಾಂಡ್,
ದಸರಾ,
ನೈಟ್ ಹೋಟ್ಲು,
ಮೈಸೂರು
ಗೊಂಬೆ ಹಬ್ಬ
ನಾವು ಚಿಕ್ಕವ್ರಿದಾಗ ದಸರಾ ಹಬ್ಬ ಅಂದ್ರೆ ಸ್ಕೂಲ್ಗೆ ಒಂದು ತಿಂಗಳು ರಾಜ ಕೊಡವರು. ಫುಲ್ಲು ಮಜಾ ಮಾಡ್ತಿದ್ವಿ. ಆದ್ರೆ ಆ mid-term examದು question papersನ answer ಮಾಡ್ಕೊಂಡು ವಾಪಸ್ ಸ್ಕೂಲ್ಗೆ ಹೋಗ್ಬೇಕಿತು... ಅದು ಒಂದು ತಲೆ ನೋವ ಬಿಟ್ಟರೆ.. ಮೈಸೂರ್ ಅರಮನೆ, ಎಕ್ಷ್ಹಿಬಿಶನ, ಬೆಟ್ಟ... ಮತ್ತೆ zoo.. ಇವೆಲ್ಲ ನಮ್ಮ itineraryಲಿ ಇದ್ಧೆ ಇರೋದು.
ಏಳದಿಕಿಂಥ ಸಕ್ಕತ್ ಮಜಾ ಅಂದ್ರೆ ಗೊಂಬೆ ಕೂದ್ಸೋದು! ಗೊಂಬೆಗಳ್ನ ಇಡಧೆ ಇದ್ರೆ.. ದಸರಾ complete ಅಗೋ chance ಎ ಇರ್ಲಿಲ್ಲ ಆವಾಗ... ಹಬ್ಬದ ಒಂದು ವಾರದ ಮುಂಚೆ ನೆ ಸ್ವಲ್ಪ ರಾಗಿನ ಮೊಣ್ನಲ್ಲಿ ಹಾಕಿ ದಿನ ನೀರ್ ಚುಮ್ಕ್ಸಿ ಚುಮ್ಕ್ಸಿ ಆ ಗಿಡಗಳು ಹೇಗೆ ಬೆಳಿತಿಧೆ ಅಂಥ ದಿನ ಬೆಳಿಗೆ ಎಧ ಹಾಸಿಗೆ ಗೆ ಹೋಗಿ check ಮಾಡ್ತಿದ್ವಿ. ಗಿಡಗಳು ಒಂದು ಮಟ್ಟಕ್ಕೆ ಬಂಧ್ಮೇಲೆ ಅದರ ಮದ್ಯ ಕಾಡು ಪ್ರಾಣಿಗಳು, ಒಂದು ಚಿಕ್ಕ ಹಾಗು ಚೊಕ್ಕ ಮನೆ ಮತ್ತೆ ಕಾರ್ಗಳು ಬಸ್ಸು ಮುಂಥದವುನ್ನ ಇಟ್ಟು decorate ಮಡ್ತಿದ್ವೀ.
ಸುಮಾರು 15 ವರ್ಷ ಆದ್ಮೇಲೆ ಈ ದಸರಾ ಹಬ್ಬಕ್ಕೆ ಮತ್ತೆ ನಾವು ಮನೇಲಿ ಗೊಂಬೆ ಕೋಡ್ಸಿದಿವಿ. ಬೆಂಗಳೂರಲಿ... ಇಲ್ಲಿ ಇರೋ 80% ಗೊಂಬೆ ಗಲ್ಲು ನನ್ನ ಅರ್ಧಾಂಗಿ ಶ್ರುತಿ ಕುಡ್ಸಿರೋದು. 'ದಸರಾ' ರೈಲು ನಿಲ್ಧಾಣ ನನ್ನ ಕೈ ಕುಸುರಿ. ಹ್ಯಾಂಡ್ made by me.

ಗೊಂಬೆ ಹಬ್ಬ,
ದಸರಾ,
ಬೆಂಗಳೂರು,
ಮೈಸೂರು
ಆಟೋ ಅಣಿಮುತ್ತುಗಳು - ೪೧ - ಅಮ್ಮನ ಮಾತು ತಮ್ಮನ ದುಡ್ಡು
ಕಂಟೋನ್ಮೆಂಟ್ ರೈಲ್ವೆ ಸ್ಟೇಶನ್ ಮುಂದೆ ಕಂಡಿದ್ದು. .
ಅಮ್ಮನ ಮಾತು, ತಮ್ಮನ ದುಡ್ಡು
ಏನೆಲ್ಲಾ ಬರೀತಾರಪ್ಪ ಆಟೋ ಹಿಂದೆ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಅಮ್ಮನ ಮಾತು, ತಮ್ಮನ ದುಡ್ಡು
ಏನೆಲ್ಲಾ ಬರೀತಾರಪ್ಪ ಆಟೋ ಹಿಂದೆ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Labels:
ಅಮ್ಮನ ಮಾತು,
ಆಟೋ ಅಣಿಮುತ್ತುಗಳು,
ತಮ್ಮನ ದುಡ್ಡು
Subscribe to:
Posts (Atom)