Monday, March 31, 2008

ಆಟೋ ಅಣಿಮುತ್ತುಗಳು - ೨

ಆಟೋ ಅಣಿಮುತ್ತುಗಳು, ಇನ್ನೂ ಕೆಲವು. ನೋಡಿ.

ನಿನ್ನೆ, ಭಾನುವಾರ ಸಂಜೆ ನಾನು ನನ್ನ ಹಾಫ್ ಶರ್ಟ್ (ಅರ್ಧಾಂಗಿ) ಮಲ್ಲೇಶ್ವರಂ ಕಡೆ ಹೊರಟಿದ್ವಿ, ದಾರಿಯಲ್ಲಿ ಈ ಆಟೋ ನಿಂತಿತ್ತು. ಲಿರಿಕ್ಸು ನೋಡಿ ನಾನಂತೂ ಫುಲ್ಲ್ ಫಿದಾ ಆಗೋದೆ. ಗಾಡಿ ತಕ್ಷಣ ನಿಲ್ಸಿ, ನಮ್ಮ ಹಾಫ್ ಶರ್ಟನ್ನು ಗಾಡಿ ಹಿಡ್ಕೊ ಅಂತ ಹೇಳಿ, ಹೋಗಿ ಕ್ಲಿಕ್ಕಿಸಿಕೊಂಡು ಬಂದೆ. ನೋಡಿ, ಎಂಜಾಯ್ ಮಾಡಿ.

ಸರಿಯಾಗಿ ಕಾಣದಿದ್ರೆ ಇಲ್ಲಿ ಓದಿ

"ಲವ್ ಮಾಡಿದ್ರೆ ರೊಮಾನ್ಸ್, ಕೈ ಕೊಟ್ರೆ ನಿಮಾನ್ಸ್"
--------------------------------------------------------

ಇನ್ನೊಂದು ನೋಡಿ.. ಯಾರೋ ಭಯಂಕರ ದರ್ಶನ್ ಫ್ಯಾನ್ ಇರಬೇಕು. ವರ, ಶಾಪ ಎಲ್ಲಾ ಕೊಟ್ಟು ಇಟ್ಟಿದಾನೆ, ಆಟೋ ಹಿಂದೆ.
ಇದು ನನ್ನ ಕಣ್ಣಿಗೆ ಬಿದ್ದದ್ದು, ರೆಸಿಡೆನ್ಸಿ ರೋಡಿನ ಬಳಿ. ಟ್ರಾಫಿಕ್ ಸಿಗ್ನಲ್ಲಲ್ಲಿ ಕಾಯ್ತಾ ಇರಬೇಕಾದ್ರೆ, ಕಣ್ಣಿಗೆ ಬಿತ್ತು, ಯಥಾ ಪ್ರಕಾರ ಓಡಿ ಹೋಗಿ ಕ್ಲಿಕ್ಕಿಸಿಕೊಂಡು ಬಂದೆ. ಹೆಂಗಿದೆ ?

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

No comments: