Wednesday, March 12, 2008

ಒಂದು ಸೂಪರ್ರಾಗಿರೋ ಹಳೇ ಜೋಕು

ಇವತ್ತು ಬೆಳಿಗ್ಗೆ ನನ್ನ ಫ್ರೆಂಡ್ ಅವಿನಾಶ್ ಪದಕಿ ಒಂದು ಮೈಲ್ ಕಳ್ಸಿದ್ದ..

ಅದ್ರಲ್ಲಿ ಇದ್ದ ಜೋಕು ಓದಿ, ನಾನು ಸುಮಾರು ೪ ವರ್ಷದ ಮುಂಚೆ ನಾನಿದ್ದ ಹಳೇ ಕಂಪೆನಿಯಲ್ಲಿ ನಾನು ಮಾಡಿದ್ದ ಒಂದು ಕೆಲ್ಸ ನೆನಪಾಯ್ತು.

ಒಂದು ಒಳ್ಳೆ ಜೋಕನ್ನ ಯಾರೋ ಕಳ್ಸಿದ್ರು. ಅದು ಒಂಥರಾ ಚೆನ್ನಾಗಿರೋದೇ.

ಅವಾಗಿನ್ನು ಈ "ಔಟ್ಲುಕ್ಕು" ಅದೆಲ್ಲ ಹೊಸದು ನನಗೆ. ಹೊಸಾ ಮೇಲ್ ಬಂದ್ರೆ ಸಾಕು, ಅದನ್ನ್ ಓದಿ, "ಫಾರ್ವರ್ಡ್" ಮಾಡುದ್ರೆ ಏನೋ ಒಂದು ಕೃತಾರ್ಥ ಭಾವನೆ, ಜನ್ಮ ಸಾರ್ಥಕ ಆದ ಹಾಗೆ.

ಆ ಕಂಪನಿಯಲ್ಲಿ ಒಂದು ಈ-ಮೇಲ್ ಐಡಿ ಇತ್ತು, ಅದಕ್ಕೆ ಕಳ್ಸುದ್ರೆ, ಇಡೀ ಕಂಪನಿಯಲ್ಲಿ ಎಲ್ರಿಗೂ ತಲುಪ್ತಾ ಇತ್ತು..
"newton@ನನ್ನ ಹಳೇ ಕಂಪನಿ.com" ಇದೆ ಆ ಅಡ್ರೆಸ್ಸು.

ಆ ಜೋಕನ್ನ ಸರಿ ಎಲ್ರೂ ಓದಲಿ ಅಂತಾ ಫಾರ್ವರ್ಡ್ ಮಾಡಿದೆ... ಅದು ಏನು ಅಂಥಾ ದೊಡ್ಡ ಮೇಲ್ ಏನೂ ಅಲ್ಲಾ, ಅಬ್ಬಬ್ಬಾ ಅಂದ್ರೆ 5KB ಅಷ್ಟೇ. ಅದ್ರು ತಮ್ಮ ಅಥಾರಿಟಿ ತೋರುಸ್ಬೇಕಲ್ಲಾ, ಸಿಸ್ಟಂ ಅಡ್ಮಿನ್ನು, ಮಾರನೆ ದಿನಾ,ಅವನಿಂದ ನಂಗೆ ಒಂದು "ಎಚ್ಚರಿಕೆ ಅಂಚೆ" ಬಂತು...
"Dear Shankar, meet me at my desk by 11:00 AM" ಅಂತಾ...

ಸರಿ ಕಣಪ್ಪಾ, ಹಾಳಾಗ್ ಹೋಗ್ಲಿ ಅಂತ ಹೋದ್ರೆ, ಬಡ್ಡಿ ಮಗ, ದೊಡ್ಡ ಪುರಾಣ ಶುರು ಮಾಡಿದ..
"Network security, data transmission ಹಾಳಾ ಮೂಳಾ ಮಣ್ಣು ಮಸಿ"... ಹೊಡಿತಾನೆ ಇದಾನೆ...

ಅದರ ಜೊತೆ, ಕಂಪನಿ MD ಹತ್ರ ಕೂಡಾ ಕರ್ಕೊಂಡು ಹೋದಾ..
ಅವರು ಕೂಡಾ ಕೇಳಿ, ವಾರ್ನಿಂಗ್ ಕೊಟ್ರು.. ಅವರ ಕ್ಯಾಬಿನ್ ಇಂದ ಹೊರದಬೇಕಾದ್ರೆ,
"Shankar, don't send mails to 'newton@ನನ್ನ ಹಳೇ ಕಂಪನಿ.com', in future..
by the way, i liked the one which u sent..." ಅನ್ನೋದೇ ???

ಮೈ ಎಲ್ಲಾ ಉರಿದುಹೊಯ್ತು...ಸರಿ.. ಪುರಾಣ ಜಾಸ್ತಿ ಆಯ್ತು ಅನ್ಸುತ್ತೆ... ಆ ಜೋಕನ್ನ ಓದಿ ಇಲ್ಲಿ...

-------------------------------------------------------------

ಸ್ವರ್ಗದಲ್ಲಿ ಎಲ್ಲಾ ಹಳೇ ವಿಜ್ಞಾನಿಗಳು "ಐಸ್ ಪೈಸ್" ಆಡ್ತಾ ಇದ್ರು..

EINSTEIN ಪಾಪ ಔಟ್ ಆಗಿ, ಒಂದರಿಂದ ನೂರು ಎಣಿಸುತ್ತಾ ಇದ್ದ...

ನೂರಾದ ಮೇಲೆ, ಹಿಂದೆ ತಿರುಗಿ ಹುಡುಕಕ್ಕೆ ಸ್ಟಾರ್ಟ್ ಮಾಡಬೇಕು ಅನ್ನೋ ಅಷ್ಟರಲ್ಲೇ,

ಎದುರು NEWTON ನಿಂತಿದಾನೆ.. ಅದೂ 1x1 ಮೀಟರ್ ನ ಒಂದು ಚೌಕ ನೆಲದ ಮೇಲೆ ಬರೆದು, ಅದರ ಒಳಗೆ ಆರಾಮಾಗಿ ನಿಂತಿದಾನೆ..

EINSTEIN ಓದಿ ಹೋಗಿ ಅವನನ್ನು ಮುಟ್ಟಿ, NEWTON ಔಟು, NEWTON ಔಟು ಅಂತ ಕುಣಿದ..

ಆದ್ರೆ NEWTON "ನಾನು ಔಟ್ ಆಗೇ ಇಲ್ಲ" ಅಂದ...

EINSTEIN "ಹೆಂಗಪ್ಪಾ ? ನಾನೇ ನಿನ್ನ ಔಟ್ ಮಾಡಿದಿನಿ, ಸಾಧ್ಯಾನೆ ಇಲ್ಲ.. ಸುಮ್ನೆ ಮೋಸ ಮಾಡಬೇಡ ಗುರೂ ನೀನು, ಸರಿ ಇರಲ್ಲ.." ಅಂತಾ ಜಗಳ ಶುರು ಮಾಡಿದ..

ಅದಕ್ಕೆ NEWTON ಹೇಳಿದ "ನೋಡು ಗುರು, ನನು ಇವಾಗ 1x1 ಮೀಟರ್ ನ ಒಂದು ಚೌಕ (square) ನಲ್ಲಿ ನಿಂತಿದಿನಿ... So, ನಾನು ಇವಾಗ NEWTON per Square Metre...ನಿಂಗೆ PHYSICS ಗೊತ್ತಿಲ್ವಾ ?? Newton / Metre^2 = PASCAL ತಾನೆ ?
ಹಂಗಾದ್ರೆ, ನೀನು ಇವಾಗ ಔಟ್ ಮಾಡಿದ್ದು PASCAL ನ, NEWTON ನ ಅಲ್ಲಾ...ಸುಮ್ನೆ ಒಯ್ತಾ ಇರು"


----------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

No comments: