Showing posts with label ಐಟಂ ಕ್ವೀನ್. Show all posts
Showing posts with label ಐಟಂ ಕ್ವೀನ್. Show all posts

Friday, May 2, 2008

ವಾರ್ತಾ ಮಾಧ್ಯಮದ ಈ ಪಾಡು - "ಐಟಂ ಕ್ವೀನ್ ಯಾರು ?"

ವಾರ್ತಾ ಮಾಧ್ಯಮ ಈ ಮಟ್ಟದ ಹಪಾಹಪಿತನ ಬರಬಾರದಿತ್ತು. ಅಲ್ಲಾ ಕಣ್ರೀ, ಬಿತ್ತರಿಸೋಕ್ಕೆ ಸುದ್ದಿ ಇಲ್ಲಾಂದ್ರೆ, ಸುಮ್ನೆ ಇರೋದನ್ನ ಬಿಟ್ಟು, ಬಾಲಿವುಡ್ಡಿನ ಮುಂದಿನ "ಐಟಂ ಕ್ವೀನ್ ಯಾರು ?" ಅನ್ನೋ ಸರ್ವೇ ಮಾಡ್ತಾರಲ್ಲಾ, ಇವರಿಗೇನು ಸ್ವಲ್ಪವಾದ್ರೂ ನೈತಿಕ ಜವಾಬ್ದಾರಿ ಅನ್ನೋದು ಇದೀಯಾ ?

ನೋಡಿ..
ಐಟಂ ಕ್ವೀನ್ ಕೌನ್ ?


ಇದು ನನ್ನ ಕಣ್ಣಿಗೆ ಬಿದ್ದಿದ್ದು ನಿನ್ನೆ ಬೆಳಿಗ್ಗೆ. ಮೇ ೧ರಂದು ಆಫೀಸಿಗೆ ರಜೆ. ಎದ್ದ ಸ್ವಲ್ಪ ಹೊತ್ತಿಗೆ ಟೀವಿ ಹಾಕಿದೆ. ಚಾನೆಲುಗಳ ಮಧ್ಯೆ ಹಂಗೇ ಓಡಾಡುತ್ತಾ ಇರಬೇಕಾದ್ರೆ, "ಆಜ್ ತಕ್" ಚಾನೆಲ್ ನಲ್ಲಿ ಕಂಡಿದ್ದು ಈ ದೃಶ್ಯ.
ತಕ್ಷಣ ಮೊಬೈಲಿಂದ ಇದರ ಒಂದು ಚಿತ್ರ ತೆಗೆದೆ.

ಕರೀಂ ತೆಲಗಿಯ (ಛಾಪಾ ಕಾಗದ ಹಗರಣದವನು) ಜೀವನ ಆಧಾರಿತ "ಮುದ್ರಾಂಕ್" ಅನ್ನೋ ಒಂದು ಫಿಲಂ ಮಾಡ್ತಾ ಇದಾರೆ, ಆ ಫಿಲಂನ ಒಂದು ಐಟಂ ಸಾಂಗಿಗಾಗಿ ರಾಖಿ ಸಾವಂತ್ ಹಾಗು ಇನ್ನೊಬ್ಳು ಯಾರೋ ಐಟಂ ಗರ್ಲ್ ಗಳ ನಡುವೆ ಪೈಪೋಟಿಯಂತೆ. ಅದನ್ನ ದೊಡ್ಡ ನ್ಯಾಷನಲ್ ಇಶ್ಯೂ ಥರ ಬಿತ್ತರಿಸುತ್ತಿದ್ರು. ನಮ್ಮ ಮಾದ್ಯಮದವರು ಈ ಥರ ಹಪಾಹಪಿತನಕ್ಕೆ ಬೀಳಬಾರದಿತ್ತು.

ಇನ್ನೂ ಹೊಲಸು ಅಂದ್ರೆ, ಹಾಲಿವುಡ್ ನ ಕೆಲವು ನಟಿ ನಟರು, ಅವರ ತೆವಲು / ತೀಟೆ ತೀರಿಸ್ಕೊಳ್ಳೋಕ್ಕೆ, ತಮ್ಮ ಅತ್ಯಂತ ಪ್ರೈವೇಟ್ ಕ್ಷಣಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ಕೆಲವರು ಅಂದ್ರೆ ಹೊಟೇಲ್ ಉದ್ಯಮಿ ಹಾಗು ಬಿಲಿಯನೇರ್ ಪ್ಯಾರಿಸ್ ಹಿಲ್ಟನ್, ಪ್ಲೇಬಾಯ್ ಹಾಗು ಬೇವಾಚ್ ಖ್ಯಾತಿಯ ಪಮೇಲಾ ಆಂಡರ್ಸನ್, WWF ಕುಸ್ತಿಯ ಮಹಿಳಾ ಕುಸ್ತಿ ಪಟು ಚೈನಾ ಇತ್ಯಾದಿ.

ಇದನ್ನೂ ಕೂಡಾ ಆಜ್ ತಕ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾರೆ. ಈ ತೆರನಾದ, ನಮಗೆ ಯಾವ್ದೇ ರೀತಿ ಪ್ರಯೋಜನವಿಲ್ಲದ, ಮೂರು ಕಾಸಿನ ಅರಿವು ಮೂಡಿಸದ ಇಂಥ ವಾರ್ತೆಗಳನ್ನು ಪ್ರಸಾರ ಮಾಡಿದ್ರೆಷ್ಟು, ಬಿಟ್ರೆಷ್ಟು ?

ಬೆಳಿಗ್ಗೆ ಬೆಳಿಗ್ಗೆ ಇಂಥದ್ದನ್ನು ನೋಡಿ, ಮೂಡ್ ಆಫ್. ಅಂದ್ರೆ ನಾನೇನು ಫುಲ್ಲ್ ಬೇಜಾರಾಗಿ ಕೂತಿದ್ದೆ ಅಂತ ಅಲ್ಲಾ, ಅದ್ರೂ ಏನೋ ಒಂಥರಾ ಮುಜುಗರ.

ಸಂಜೆ ನಮ್ಮ ಅನಂತನಾಗ್, ಗೋಲ್ಡನ್ ಸ್ಟಾರ್ ಗಣೇಶ ನಟಿಸಿರುವ "ಅರಮನೆ" ಚಿತ್ರಕ್ಕೆ ನಾನು ನನ್ನ ಹಾಫ್ ಶರ್ಟ್ (ಅರ್ಧಾಂಗಿ) ಹೋದ್ವಿ ಕಣ್ರೀ.... ಫುಲ್ಲ್ ಮೂಡ್ ವಾಪಸ್ ಬಂತು. ಬಹಳ ಚೆನ್ನಾಗಿದೆ ಈ ಚಿತ್ರ. A Pure Family Entertainer.


ಅನಂತನಾಗ್ ಅವರ ಪ್ರಬುದ್ಧ ಅಭಿನಯ, ಗಣೇಶನ ಮಾಮೂಲ್ ಲವಲವಿಕೆಯ ಆಕ್ಟಿಂಗ್, ಹೊಸಾ ನಾಯಕಿ ರೋಮಾ.... ಸೊಗಸಾಗಿದೆ ಕಣ್ರೀ.. ಇನ್ನೂ ಸ್ವಲ್ಪ ಹೊಗಳಬೇಕು ಅನ್ನುಸ್ತಾ ಇದೆ, ಯಾಕಂದ್ರೆ, ನಮ್ಮ ಮೈಸೂರಲ್ಲಿ ಮ್ಯಾಕ್ಸಿಮಂ ಶೂಟಿಂಗ್ ನಡೆದಿರೋದು... ಅದಕ್ಕೆ.

ಮಿಸ್ ಮಾಡ್ಕೋಬೇಡ್ರೀ, ಚಿತ್ರ ಬಹಳಾ ಚೆನ್ನಾಗಿದೆ. ನೋಡಿ.

-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ