Tuesday, April 5, 2011

ಆಟೋ ಅಣಿಮುತ್ತುಗಳು - ೯೯ - ದುಡ್ಡೇ ದೊಡ್ಡಪ್ಪ ಅಲ್ಲ

ಕಳೆದ ವಾರ ನನ್ನಾಕೆಯ ಜೊತೆ ಎಂ.ಜಿ. ರಸ್ತೆಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ, ಹಲಸೂರಿನ ಲಿಡೋ ಮಾಲ್ ಎದುರು ಕಂದ ಆಟೋ ಇದು. ಕಂಡ ಕೂಡಲೇ ಬೈಕನ್ನು ಸೈಡಿಗೆ ಹಾಕಿದೆ, ತಕ್ಷಣ ನನ್ನಾಕೆ "ಗೊತ್ತಾಯ್ತು, ಅಷ್ಟೊಂದು ಎಕ್ಸೈಟ್ ಆಗೋದು ಬೇಡಾ, ಆ ಆಟೋ ಇಲ್ಲೇ ನಿಲ್ತಾ ಇದೆ, ಆರಾಮಾಗಿ ಫೋಟೋ ತೆಗೀಬೋದು" ಎಂದಳು. ನನ್ನ ಈ ಹುಚ್ಚನ್ನು ಸರಿಯಾಗಿ ಅರ್ಥ ಮಾಡ್ಕೊಂಡು ಒಪ್ಕೊಂಡಿದಾಳೆ ಅಂದ್ಕೊಂಡು ನಗುತ್ತಾ ಫೋಟೋ ತೆಕ್ಕೊಂಡೆ.

ದುಡ್ಡಿನ ಹಿಂದೆ ಹೋಗಿ ಮನುಷ್ಯತ್ವ ಮರೆವ ಜನರಿಗೆ ಈ ಆಟೋ ಅಣ್ಣ ಹೇಳೋ ಪಾಠ ಅರ್ಥ ಆಗಲಿ.

ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ
---------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

3 comments:

Dr.D.T.Krishna Murthy. said...

ಸೂಪರ್!ಹೊಸ ವರ್ಷದ ಶುಭಾಶಯಗಳು.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

Krishnaprasad Hande said...

ಶಂಕ್ರ ಅವರೇ ಇದನ್ನೂ ಒಮ್ಮೆ ಗಮನಿಸಿ
http://padasankalana.blogspot.com/2011/04/blog-post.html

sunaath said...

ಆಟೋ ಅಣ್ಣಂದಿರೂ ಸಹ ಉದಾತ್ತ ವಿಚಾರಗಳನ್ನು ಮೆರೆಸುತ್ತಾರೆ ಎನ್ನುವದಕ್ಕೆ ಇದು ಉತ್ತಮ ನಿದರ್ಶನ!