Monday, April 11, 2011

ಆಟೋ ಅಣಿಮುತ್ತುಗಳು - ೧೦೦ - ಕನ್ನಡಾನ ಬೈಬ್ಯಾಡ

ಸೋಮಾರಿ ಕಟ್ಟೆಯ ನೂರನೆಯ ಆಟೋ ಅಣಿಮುತ್ತು ನಿಮ್ಮ ಮುಂದೆ ಇಡ್ತಾ ಇದ್ದೀನಿ. ನೂರನೆಯ ಅಣಿಮುತ್ತು ಬ್ಲಾಗಿನಲ್ಲಿ ಹಾಕಿದ ಮೇಲೆ "ಆಟೋ ಅಣಿಮುತ್ತುಗಳು" ಅನ್ನೋ ಪುಸ್ತಕ ಹೊರತರಬೇಕೆಂಬ ಆಸೆ ಇದೆ. ಇದಕ್ಕೆ ನಿಮ್ಮ ಅನಿಸಿಕೆ ?

ಕಟ್ಟೆ ಬಳಗದ ಸದಸ್ಯರೆ, ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ಹೀಗೆಯೇ ಇರಲಿ.

ಕಳೆದ ಭಾನುವಾರ ಹೊರಗೆ ಹೊರಟಿದ್ದೆ. ಇಂದಿರಾನಗರದ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಕಂಡ ಆಟೋ ಇದು. 1994 ರಲ್ಲಿ ತೆರೆಕಂಡಿದ್ದ ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್ ಅಭಿನಯದ "ಕರುಳಿನ ಕೂಗು" ಚಿತ್ರದ ಹಾಡು ಇದು. ಕನ್ನಡಾನ ಬೈಬ್ಯಾಡ ಎಂದು ಹೇಳುತ್ತಾ ಈ ಅಣ್ಣ, ಅಣಿಮುತ್ತನ್ನು ಬರೆಸಿರುವ ಈ ಪರಿ ನೋಡಿ, ಕನ್ನಡಾನ ಸಾಯಿಸ ಬ್ಯಾಡ ಎಂದು ಹೇಳೋಕ್ಕೆ ಹೊರಟೆ. ಮಿಷ್ಟೇಕ್ ಆದರೂ ಪರವಾಗಿಲ್ಲ, ಒಳ್ಳೆ ಸಂದೇಶ ಕೊಡ್ತಾ ಇದಾನೆ ಈ ಅಣ್ಣ ಎಂದುಕೊಂಡು ಸುಮ್ಮನಾದೆ.



ನನ್ನಂದ್ರು ಪರವಗಿಲ್ಲ

ನನ್ನ ಕೊಂದ್ರು ಚಿಂತೆಯಿಲ್ಲ

ಕನ್ನಡನ ಬೈಬ್ಯಾಡ ಕಟ್ಕೊಂಡ

ಹೆಂಡತಿನ ಬಿಡಬ್ಯಾಡ
------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

ಗಿರೀಶ್.ಎಸ್ said...

the lines in red are ultimate...

ಉಷಾ said...

100ಕ್ಕೆ ಶುಭಾಶಯಗಳು.ಪುಸ್ತಕ ಆದಷ್ಟು ಬೇಗ ಬರಲಿ.

ಉಷಾ said...

100ರ ಸಂಭ್ರಮಕ್ಕೆ ಶುಭಾಶಯಗಳು.ಪುಸ್ತಕ ಆದಷ್ಟು ಬೇಗ ಹೊರಬರಲಿ.

sunaath said...

ಆಟೊ ಅಣಿಮುತ್ತುಗಳ ಶತಕವನ್ನು ಪೂರೈಸಿದಿರಿ. ಹಳೆಗನ್ನಡದ ಸೋಮೇಶ್ವರ ಶತಕ ಅಥವಾ ಸಂಸ್ಕೃತದ ಭರ್ತೃಹರಿ ಶತಕದಂತೆ, ನಿಮ್ಮ ಶತಕವೂ ಸಹ ವಿನೋದವನ್ನು ಹಾಗು ಸಮಾಧಾನವನ್ನು ನೀಡಿದೆ. ಈ ಶತಕಕ್ಕೆ ಪ್ರೇರಣೆ ನೀಡಿದ ಆಟೋರಾಜರಿಗೂ ಸಹ ನನ್ನ ಕೃತಜ್ಞತೆಗಳು ಸಲ್ಲಲೇ ಬೇಕು!

Hukunda said...

soooper magaa!

ವಿ.ರಾ.ಹೆ. said...

ಶಂಕ್ರಣ್ಣಾ, ನೂರಕ್ಕೆ ಅಭಿನಂದನೆಗಳು. ಕೀಪ್ ಗೋಯಿಂಗ್... ವಿತ್ ಆಟೋ.. :)

ಗುರುರಾಜ said...

ಖಂಡಿತಾ ಪುಸ್ತಕ ಹೊರತನ್ನಿ... ಆಟೋ ಅಣ್ಣಂದಿರಿಗೆ ಮಾರ್ಗದರ್ಶಿಆಗಿರುತ್ತೆ. ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ..