Monday, November 9, 2009

ಆಟೋ ಅಣಿಮುತ್ತುಗಳು - ೭೮ - ಅಲಂಕಾರ, ಅಹಂಕಾರ

ಈ ಫೋಟೋ ತೆಗೆದದ್ದು ಸುಮಾರು ೪ ತಿಂಗಳ ಹಿಂದೆ, ಎಂ.ಜಿ. ರೋಡಿನಲ್ಲಿ.
ಹಾರೋ ಹಕ್ಕಿಗೆ ಅದೇನು ಅಲಂಕಾರವೋ ಗೊತ್ತಿಲ್ಲ.. ಆದ್ರೆ ಈ ಅಣ್ಣ ಪ್ರೀತಿಸಿದ ಹುಡುಗಿಗೆ ದುರಹಂಕಾರ ಅನ್ಸುತ್ತೆ.
ಈ ಅಣಿಮುತ್ತನ್ನು ಬರೆಸಿದ ಮೊದಲ ಆಟೋ ಇದು ಇರಬೇಕು. ಏಕೆಂದರೆ ಇದಾದ ಸುಮಾರು ಒಂದು ತಿಂಗಳ ನಂತರ ಸುಮಾರು ಆಟೋಗಳ, ಟಾಟಾ ಇಂಡಿಕಾ ಕ್ಯಾಬುಗಳ, ಟೆಂಪೋ ಟ್ರಾವೆಲರುಗಳ ಹಿಂದೆ ಇದೆ ಹಾಗು ಇದೆ ರೀತಿಯ ಸ್ಲೋಗನ್ನುಗಳು ಕಾಣಿಸತೊಡಗಿದವು. ಬರೀ ಸಾಹಿತ್ಯದಲ್ಲಿ ಕೃತಿಚೌರ್ಯ ನಡೀತಾ ಇತ್ತು, ಇಲ್ಲಿ ಕೂಡಾ ಶುರುವಾಗಿದೆ.

ದುರಹಂಕಾರ ಅನ್ನೋದನ್ನ ಬರೆದಿರುವ ಪರಿ.. ಛೆ..ಮುದ್ರಾ ರಾಕ್ಷಸನ ಹಾವಳಿಯೋ, ಅಥವಾ ಬರೆದಿರೋ ರಾಕ್ಷಸನ ಹಾವಳಿಯೋ ?

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸೋ ಹುಡುಗಿಗೆ ದುರಂಕಾರ

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

4 comments:

ಸವಿಗನಸು said...

ಸ್ವಲ್ಪ ಅಹಂಕಾರವಿದ್ದಿದರೆ ಸಹಿಸುತ್ತಿದ್ದ...
ಅದ್ರೆ ದುರಹಂಕಾರ ಅಲ್ವ ಅದಕ್ಕೆ ಪಾಪ.....

sunaath said...

ಪಾಪ, ಪಾಪ! ತನ್ನ ಮನದ ಬೇಗುದಿಯನ್ನ ಎಲ್ಲರೆದುರಿಗೂ ತೋಡಿಕೊಳ್ತಾ ಇದ್ದಾನೆ!

ಗೌತಮ್ ಹೆಗಡೆ said...

ayyo papa;)

Kiran Kumar said...

idu ondu svalpa famous "auto aNi muthu" annisuthe. nanu kooda nodiddene. nan blog nalli "auto suggestion" emba thale barahadalli kelavanna post madiddene, dayavittu nodi...

http://kirankicking.blogspot.com/2009/08/auto-suggestion.html