ಬೆಳಿಗ್ಗೆ ಎದ್ದು ಇಂಟರ್ನೆಟ್ ಗೆ ಕನೆಕ್ಟ್ ಆದ ಕೂಡಲೆ ಮೊದಲು ಗೊತ್ತಾದ ವಿಷಯ -
ಕೋಗಿಲೆ ಸುಮ್ಮನಾಗಿದ್ದು ಅಂದ್ರೆ ರಾಜು ಅನಂತಸ್ವಾಮಿಯ ನಿಧನ ವಾರ್ತೆ.
ರಾಜು ನಮ್ಮನ್ನು ಅಗಲಿದ್ದು, ಜನವರಿ 17, 2009 - 12:15 PM (ಭಾರತೀಯ ಕಾಲಮಾನ)
ಕನ್ನಡ ಭಾವಗೀತೆಯನ್ನು ಜನಪ್ರಿಯ ಹಾಗು ಒಂದು ಉಚ್ಛ ಸ್ಥಾನಕ್ಕೆ ಏರಿಸಿದ್ದ ಮೈಸೂರು ಅನಂತಸ್ವಾಮಿ ಅವರ ಮಗನಾದ ರಾಜು ಕೂಡಾ ತಮ್ಮ ತಂದೆಯ ಹೆಜ್ಜೆ ತುಳಿದವರು. ತಂದೆಯಂಥದ್ದೇ ಶಾರೀರ ಹೊಂದಿದ್ದ ರಾಜು, ಹಾಡುತ್ತಿದ್ದರೆ ಅನಂತಸ್ವಾಮಿಯವರೇ ಹಾಡುತ್ತಿದ್ದಹಾಗಿದೆ ಎಂದು ಬಹಳ ಹಿರಿಕರು ಹೇಳಿರುವುದನ್ನು ಮೈಸೂರಿನಲ್ಲಿ ನಡೆದ ಒಂದು ಭಾವಗೀತೆ ಸಂಜೆಯಲ್ಲಿ ಕೇಳಿದ್ದೆ.
ಭಾವಗೀತೆಯಲ್ಲದೆ ರಾಜು ಅವರು ಚಿತ್ರರಂಗದಲ್ಲಿ ಹಿನ್ನಲೆ ಗಾಯನ, ಸಣ್ಣ ಪ್ರಮಾಣದ ನಟನೆ ಮಾಡುತ್ತಿದ್ದರು. ಇವರು ಮಾತಾಡೋ ಶೈಲಿ, ಮುಖದಲ್ಲಿನ ತುಂಟ ಕಳೆ ಬಹಳ ಅಪೀಲಿಂಗ್ ಆಗಿ ಇದ್ದವು. ಇವುಗಳಲ್ಲದೆ, ಕನ್ನಡ ಟಿ.ವಿ ವಾಹಿನಿಯಲ್ಲಿ ಸಂಗೀತ ಸ್ಪರ್ಧೆಯೊಂದಕ್ಕೆ ತೀರ್ಪುಗಾರರಾಗಿಯೂ ಇದ್ದರು.
ಬಹಳ ಚಿಕ್ಕ ವಯಸ್ಸಲ್ಲಿ ಬಹಳಷ್ಟು ಭರವಸೆ ಮೂಡಿಸಿ, ಕೋಗಿಲೆ ಮರೆಯಾಯಿತು.
ರಾಜು ಅನಂತಸ್ವಾಮಿಯವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Saturday, January 17, 2009
Subscribe to:
Post Comments (Atom)
7 comments:
:(
:( :( :(
ಶಂಕರ್ ಸಾರ್,
ನನಗೂ ಇವತ್ತು ಈ ಸುದ್ಧಿ ತಿಳಿದು ತುಂಬಾ ದುಃಖವಾಯಿತು....
ಅವರು ಯಾವುದೊ ಒಂದು ಪ್ರೊಗ್ರಾಮಿನಲ್ಲಿ ಹಾಡಿದ "ಯಾವ ಮೋಹನ ಮುರಳಿ ಕರೆಯಿತೊ ದೂರಲೊಕಕೆ ನಿನ್ನನು..." ಹಾಡು ಮತ್ತೆ ನೆನಪಾಯಿತು... ಜೀ ವೀ ಅತ್ರಿ ಯವರನ್ನು ಕಳೆದುಕೊಂಡಾದ ಮೇಲೆ ಅತೀ ಚಿಕ್ಕ ವಯಸ್ಸಿನಲ್ಲಿ ಹೀಗೆ ನಾವು ಕಳೆದುಕೊಂಡ ಮತ್ತೊಬ್ಬ ಪ್ರತಿಭಾನ್ವಿತ ಹಾಡುಗಾರ.
ರಾಜು ಅನಂತ ಸ್ವಾಮಿಯ ನಿಧನ ವಾರ್ತೆಯನ್ನು ನಂಬಲಾಗಲಿಲ್ಲ...ರಾಜು ಹಾಡುವಾಗ ನಗುವ ತುಂಟ ನಗೆಯನ್ನು ಮರೆಯಲು ಸಾಧ್ಯವಾಗುವುದಿಲ್ಲ... ರಾಜು ಅನಂತ ಸ್ವಾಮಿ ತನ್ನ ಕಛೇರಿಯ ಆರಂಭಕ್ಕೆ ಮುನ್ನ ತನ್ನ ತಂದೆಯವರಾದ ಮೈಸೂರು ಅನಂತ ಸ್ವಾಮಿ ಮೇಲೆ ರಚಿಸಿದ ಹಾಡು ಹಾಡುತ್ತಿದ್ದರು.. ಅದು ನನಗಿಂದು ನೆನಪಿಗೆ ಬರುತ್ತಿಲ್ಲ :(, ರಾಜು ಅನಂತ ಸ್ವಾಮಿಯವರಿಗೆ ನನ್ನದು ಭಾವ ಪೂರ್ಣ ಶ್ರಧ್ಧಾಂಜಲಿ.. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆರೋಗ್ಯ ಹದಗೆಟ್ಟಾಗಲೂ ಮಾಸದ ಅದೇ ನಗು ಮುಖ ಮತ್ತೆ ಮತ್ತೆ ಕಾಡುತ್ತಿದೆ, ಕಣ್ಣಾಲಿಗಳು ತುಂಬಿ ಬರುತ್ತಿದೆ.
:( i really felt very sad seeing this shankara,he was my classmate in vijaya high school......
he was very good singer,!
ಮೋಹನ ಮುರುಳಿ ವಿಧಿವಶವಾಗಿ ಮುರಿದೋಯ್ತು.
:(
Post a Comment