Monday, January 12, 2009

ಆಟೋ ಅಣಿಮುತ್ತುಗಳು - ೫೪ - ಕನ್ನಡಮ್ಮನ ಸುಪುತ್ರ

ಸುಮಾರು ಒಂದು ವರ್ಷದಿಂದ ನಾನು ಈ ಆಟೋ ಅಣಿಮುತ್ತುಗಳ ಗೀಳು ಹಚ್ಚಿಕೊಂಡು ಎಷ್ಟೆಲ್ಲಾ ರೀತಿಯ ಫೋಟೋಗಳನ್ನು ಹಾಕಿದೀನಿ. ಆದ್ರೆ, ಮಿತ್ರ ಎಂ.ಡಿ ಅವರು ಈ ಆಟೋ ಹಾಗು ಇದರ ಮಾಲೀಕರ ಫೋಟೋ ಕೂಲಂಕುಶವಾಗಿ ತೆಗೆದು ಕಳಿಸಿದ್ದಾರೆ. ಮೊದಲನೆ ನೋಟಕ್ಕೆ ಇವರು ತಮ್ಮ ಆಟೋಗೆ ಮಾಡಿರುವ ಅಲಂಕಾರ, ಬರೆಸಿರುವುದನ್ನು ನೋಡಿದರೆ ಕೆಲವರಿಗೆ ನಗು ಬರಬಹುದು, ಕೆಲವರು ತಿಕ್ಕಲು ಅನ್ನಬಹುದು. ನನಗೆ ಮಾತ್ರ ಬಹಳ ಖುಷಿ ಮತ್ತು ಫೀಲಿಂಗ್ ಕೊಟ್ಟಿತು.
ಸ್ವಲ್ಪ ಯೋಚನೆ ಮಾಡಿ, ಈ ರೀತಿಯಾದ ಅಲಂಕಾರ, ಕನ್ನಡ ಅಣಿಮುತ್ತುಗಳನ್ನು ಅಂಟಿಸಲು ಸ್ಟಿಕ್ಕರ್ ಕಟಿಂಗ್, ಪೇಂಟಿಂಗ್, ಹಾರ ಅದೂ, ಇದೂ ಅಂತ ಸುಮಾರು ಸಾವಿರ ಖರ್ಚು ಮಾಡಿದ್ದಾರೆ. ನಮ್ಮಲ್ಲಿ ಸುಮಾರು ಜನಕ್ಕೆ ಮೂರು ನಾಲ್ಕು ಸಾವಿರ ಅಂಥದ್ದೇನು ದೊಡ್ಡ ಅಮೌಂಟು ಅನ್ನಿಸೋದಿಲ್ಲಾ ಬಿಡಿ. ಆದ್ರೆ, ಆಟೋ ಚಾಲಕನಾಗಿ, ಲಿಮಿಟೆಡ್ ವರಮಾನ ಇಟ್ಟುಕೊಂಡು, ತನ್ನ ಕನ್ನಡಾಭಿಮಾನವನ್ನು ತೋರ್ಪಡಿಸಿಕೊಂಡಿರುವ ಈ ಅಣ್ಣನಿಗೆ, ನನ್ನ ನಮಸ್ಕಾರಗಳು.
ಈ ಡ್ರೈವರ್ ಅಣ್ಣನ ಹೆಸರು "ರಾಜು". ನಿಜವಾಗಿಯೂ ಇವರು "ಕನ್ನಡಮ್ಮನ ಸುಪುತ್ರ".
ಈ ಫೋಟೋ ಕಳಿಸಿದ ಮಿತ್ರ ಎಂ.ಡಿ ಅವರಿಗೂ ಕೂಡ ಬಹಳಾ ಬಹಳಾ ಥಾಂಕ್ಸ್.

















-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

Unknown said...

ಶಂಕ್ರಣ್ಣಾ...
ನಿಜಕ್ಕೂ ಈತ ಕನ್ನಡಾಭಿಮಾನಿಯೇ ಹೌದು. ಆಗಲಿ ನಿಮ್ಮ ಮೂಲಕವಾದರೂ ಆತ ಪ್ರಪಂಚಕ್ಕೆ ಕಂಡನಲ್ಲ.

Lakshmi Shashidhar Chaitanya said...

ನಿಜ್ವಾಗ್ಲು ಸಂತೋಷ ಆಗತ್ತೆ.

Ittigecement said...

ಶಂಕರ್...

ತುಂಬಾ ಖುಷಿಯಾಯಿತು...
ಅಭಿನಂದನೆ ತಿಳಿಸಿಬಿಡಿ..
ಈ ಕನ್ನಡ ಕುವರನಿಗೆ...

Anonymous said...

Namma abhinandanle galu kooda

MD said...

ಶಂಕ್ರಣ್ಣಾ, ಆ ಡ್ರೈವರ್ ಹೆಸ್ರು 'ರಾಜು' ಅಂತ ಹೇಳಿದ್ನಲ್ಲಣ್ಣಾ....

shivu.k said...

ಶಂಕರ್ ಸಾರ್,

ನಾನು ನಿಮ್ಮ ಬ್ಲಾಗಿನ ಪ್ರತಿನಿತ್ಯದ ವ್ಯಾಪಾರಿ....ಕಾಮೆಂಟಿಸುತ್ತಿರಲಿಲ್ಲ. enjoy ಮಾಡುತ್ತಿದ್ದೆ. ಒಳ್ಳೆ ಮಸ್ತ್ ಮಜವಾದ ಫೋಟೋಗಳನ್ನು ಹಾಕುತ್ತಿರುತ್ತೀರಿ....ಇವಂತೂ ತುಂಬಾ ಚೆನ್ನಾಗಿದೆ....
ಅ ಕನ್ನಡ ಕುವರನಿಗೆ ನನ್ನ ಅಭಿನಂದನೆಗಳು....

ನನ್ನ ಬ್ಲಾಗಿಗೊಮ್ಮೆ ಬನ್ನಿ ಈಗೊಂದು ಹೊಸ ಲೇಖನವನ್ನು ಹಾಕಿದ್ದೇನೆ....ನಾನು ಬರೆದಿರುವುದರಲ್ಲಿ ಇದು ನನ್ನ ಅತ್ಯಂತ ಭಾವಪೂರ್ಣವಾದುದು....ನೀವು ಬರುತ್ತಿರಲ್ವ !

Ashok Uchangi said...

ಕಟ್ಟೆ ಶಂಕ್ರರಿಗೆ ನಮಸ್ಕಾರ.
ಆಟೊ ರಾಜನಿಗೆ ಅಭಿನಂದನೆ!
ಜರ್ಮನಿಯಲ್ಲಿ ಆಟೋ/ಕಾರುಗಳ ಮೇಲೆ ಈ ರೀತಿ ಬರಹವಿದೆಯೇ?! ಸಾಧ್ಯವಾದರೆ ಗಮನಿಸಿ ಬರೆಯಿರಿ.
ಅಂದಹಾಗೆ ಮೈಸೂರಿನಲ್ಲಿ ಯಾವ ಕಟ್ಟೆ.ಮರಿಮಲ್ಲಪ್ಪ ಹತ್ತಿರ?ವೀಣೆ ಶೇಷಣ್ಣ ಬೀದಿ?ಗಂಗೋತ್ರಿ?

ಅಶೋಕ ಉಚ್ಚಂಗಿ
http://mysoremallige01.blogspot.com/