ಪ್ರಿಯ ಸ್ನೇಹಿತರೆ.
ಬದಲಾವಣೆಯೇ ಜೀವನ ಅಂತಾ ಹಿರಿಯರು ಹೇಳಿದ್ದಾರೆ. ಆದ್ರೆ, ಯಕಃಶ್ಚಿತ್ ಒಂದು ಆರ್ಕುಟ್ ಪ್ರೊಫೈಲ್ ಬದಲಾಯಿಸೋದು ಇಷ್ಟು ಕಷ್ಟ ಅಂತಾ ಗೊತ್ತಿರ್ಲಿಲ್ಲಾ ಕಣ್ರೀ. ಬದಲಾಯಿಸೋಕ್ಕೆ ಇವನಿಗೇನು ಬಂತು ಅನ್ಕೋಬೇಡಿ. ಓದಿ....
ಇಲ್ಲೀ ತನಕ ಅವರ ಆರ್ಕುಟ್ ಪಾಸ್ವರ್ಡ್ ಯಾರೊ ಎತ್ತಿ ಅವರ ಪ್ರೊಫೈಲನ್ನೇ ಪೂರ್ತಿ ಹಾಳು ಮಾಡಿದರು ಅಂತ ಕೇಳಿದ್ದೆ.
ಆದ್ರೆ ಈಗ ನನಗೇ ಈ ರೀತಿ ಆಯ್ತು. ನಾನು ತಕ್ಷಣ ಗೂಗಲ್ ಟೀಮಿಗೆ ಹೇಳಿದೆ. ಅದಕ್ಕೆ ಅವರು, ನನ್ನ ಪ್ರೊಫೈಲನ್ನೇ ಡಿಲೀಟ್ ಮಾಡಿದರು. ಯಾಕೆ ಏನು ಅಂತಾ ನಂಗೂ ಗೊತ್ತಿಲ್ಲಾ, ಆದ್ರೆ ಬಹಳ ವ್ಯಥೆ ಪಡ್ತಾ ಇದೀನಿ :(
3500+ Scraps, 227 Friends, 40+ Communities, 500 Photos, ಎಲ್ಲಕಿಂತಾ ದುಖ ಆಗ್ತಾ ಇರೋ ಸಂಗತಿ ಅಂದ್ರೆ, ನನ್ನ ಮೂತಿಗೂ 30 ಜನ FANS ಇದ್ರು ಕಣ್ರೀ. ಈ Scrap ಗಳ ಮೂಲಕ ಎಷ್ಟೊಂದು ಹೊಸಾ ಮಿತ್ರರು ಸಿಕ್ಕಿದ್ರು, ಎಷ್ಟು ಜನ ಹುಡುಗಿಯರ ಜೊತೆ ಫ್ಲರ್ಟ್ ಮಾಡಿದ್ದು, ಎಷ್ಟು ಜನರ ಜೊತೆ ನಾಯಿಗಳ ಥರ ಕಿತ್ತಾಡಿದ್ದು ಇತ್ತು ಗೊತ್ತಾ ?
ಸಿಕ್ಕಾಪಟ್ಟೆ ಬೇಜಾರ್ ಆಗ್ತಾ ಇದೆ.
ಆದ್ರೆ ಯಾಕೋ ಕಳೆದ ೩ ವರ್ಷಗಳಿಂದ ಈ ಆರ್ಕುಟ್ ಅನ್ನೋದು ಅಂಥರಾ ಚಟ ಆಗಿತ್ತು. ಬಿಟ್ಟಿರೋಕ್ಕೆ ಆಗ್ತಾ ಇಲ್ಲ.
ಅದಕ್ಕೆ ಆಗ್ಲೇ ಹೊಸಾ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡೆ.
ದಯವಿಟ್ಟು : mandagere.shankar@gmail.com ನ ಆರ್ಕುಟ್ ನಲ್ಲಿ ಹುಡುಕಿ ಮಿತ್ರರಾಗಿ, ಅಥವಾ ಈ ಪ್ರೊಫೈಲ್ ಲಿಂಕಿಗೆ ಭೇಟಿ ಕೊಟ್ಟು ಮಿತ್ರರಾಗಿ :
http://www.orkut.com/Main#Profile.aspx?rl=mp&uid=15284715633000869506
ಹಾಗೆ, ಈಗಾಗ್ಲೇ ನನ್ನ ಫ್ಯಾನ್ಸ್ ಆಗಿದ್ದೋರು, ಮತ್ತೆ ಆಗಿ ಅಂತಾ ನಾಚ್ಕೆ, ಮಾನ, ಮರ್ಯಾದೆ ಬಿಟ್ಟು ಕೇಳ್ಕೊತಾ ಇದೀನಿ.
ಏನೂ ಪರ್ವಾಗಿಲ್ಲಾ ಅಲ್ವ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, January 5, 2009
Subscribe to:
Post Comments (Atom)
4 comments:
ನಾವೇನು ಹೇಳೊ ಹಾಗಿಲ್ಲ, ಎಲ್ಲ ನೀವೆ ಹೇಳಿದ್ಹಿರ ಸರ್!!!
"ಹಾಗೆ, ಈಗಾಗ್ಲೇ ನನ್ನ ಫ್ಯಾನ್ಸ್ ಆಗಿದ್ದೋರು, ಮತ್ತೆ ಆಗಿ ಅಂತಾ ನಾಚ್ಕೆ, ಮಾನ, ಮರ್ಯಾದೆ ಬಿಟ್ಟು ಕೇಳ್ಕೊತಾ ಇದೀನಿ.
ಏನೂ ಪರ್ವಾಗಿಲ್ಲಾ ಅಲ್ವ ?"
ha ha ha,....kakAMpa
(karma kAMDada paramAvadhi)
:-) ಸರಿ ಸಾರ್...
ಏನಾಯ್ತು ಅಂತ ಸ್ವಲ್ಪ ವಿವರಿಸೋದಲ್ವಾ?
Post a Comment