ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ.
ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ.
ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸಾರ ಅನ್ನೋದು ಒಂಥರಾ ಬೇವು ಬೆಲ್ಲದ ಆಟ.
ಕೆಲವೊಂದು ಸಂಸಾರಗಳಲ್ಲಿ ಬೇವು ಜಾಸ್ತಿ ಆಗಿರುತ್ತೆ, ಕೆಲವು ಕಡೆ ಬೆಲ್ಲ ಜಾಸ್ತಿ ಇರುತ್ತೆ.
ಸಮವಾಗಿ ಬೇವು ಬೆಲ್ಲ ಇರೋದು ಕೂಡಾ ಸುಮಾರು ನೋಡಿದೀವಿ. ಸರಿ, ಬೇವು ಬೆಲ್ಲವನ್ನು ಬಿಟ್ಟಾಕೋಣ, ಬಹಳ ಹಳೆ ಎಕ್ಸಾಂಪಲ್ ಆಯ್ತು ಇದು.
ನಮ್ಮ ಈಗಿನ ಕಾಲಕ್ಕೆ ಅನುಗುಣವಾಗಿ ಮೊಬೈಲ್ ಭಾಷೆಯಲ್ಲಿ ಹೇಳಬಹುದು.
ಗಂಡ – ಮೊಬೈಲು
ಹೆಂಡತಿ - ಬ್ಯಾಟರಿ ಚಾರ್ಜರ್
ಮದುವೆ ಅನ್ನೋದು - ಸಿಮ್ ಕಾರ್ಡು ವಿತ್ ಲೈಫ್ ಟೈಮ್ ವ್ಯಾಲಿಡಿಟಿ (ಏರ್ಟೆಲ್ 99ರೂ ಪ್ಯಾಕ್ ಥರ)
ಚಾರ್ಜರ್ ಇಲ್ದೆ ಮೊಬೈಲು ವೇಸ್ಟು, ಮೊಬೈಲ್ ಇಲ್ದೆ ಚಾರ್ಜರ್ ವೇಸ್ಟು.
ಮೊಬೈಲ್ ಗೆ ಬೇರೆ ಚಾರ್ಜರ್ ಉಪಯೋಗಿಸ್ತೀನಿ, ಅಥವಾ ಬೇರೆ ಮೊಬೈಲ್ ಗೆ ಚಾರ್ಜ್ ಕೊಡ್ತೀನಿ ಅನ್ನೋರು ಇದಾರೆ,
ಅವರ ಕಥೆ ಸಧ್ಯಕ್ಕೆ ಅಪ್ರಸ್ತುತ.
ಕರೆಕ್ಟಾಗಿ ಗಂಡ ಹೆಂಡತಿ ಮೊಬೈಲ್ ಹಾಗು ಚಾರ್ಜರ್ ಥರ ಇರಬೇಕು.
ಅವಳಿಲ್ದೆ ಇವ್ನು ವೇಸ್ಟು, ಇವ್ನಿಲ್ದೆ ಇವ್ಳು ವೇಸ್ಟು.
ಇನ್ನು ಮದ್ವೆ ಅನ್ನೋದು, ಲೈಫ್ ಟೈಮ್ ವ್ಯಾಲಿಡಿಟಿ ಇರೋ ಪ್ರೀಪೆಯ್ಡ್ ಸಿಮ್ ಕಾರ್ಡು.
ಮದ್ವೆ ಆಗೋದು ಸಿಮ್ ಕಾರ್ಡ್ ಆಕ್ಟಿವೇಶನ್.
ಮದುವೆಯನ್ನ ನಾನು ಪ್ರೀಪೆಯ್ಡ್ ಸಿಮ್ ಅಂತಾ ಯಾಕೆ ಹೇಳಿದೆ ಅಂದ್ರೆ, ಟೈಮ್ ಟು ಟೈಮ್ ಪ್ರೀತಿ, ವಿಶ್ವಾಸ, ನಂಬಿಕೆ, ಅಕ್ಕರೆಗಳನ್ನು ರೀಚಾರ್ಜ್ ಮಾಡದೆ ಇದ್ರೆ,
ಇನ್ ಕಮಿಂಗೂ ಇರಲ್ಲ, ಔಟ್ ಗೊಯಿಂಗಂತೂ ಮೊದ್ಲೇ ಇರಲ್ಲ. ಇದೆ ರೀತಿ ಜಾಸ್ತಿ ದಿನ ಬಿಟ್ರೆ ವ್ಯಾಲಿಡಿಟಿ ಹಾಳಾಗುತ್ತೆ.
ಇನ್ನೊಂದು ರೀತಿ ಹೇಳ್ಬೇಕು ಅಂದ್ರೆ ಗಂಡ ಹೆಂಡತಿ ೨ ಮೊಬೈಲ್ ಥರ ಇರುತ್ತಾರೆ.
ಇವರಿಬ್ಬರ ನಡುವಿನ ಪ್ರೀತಿ, ವಿಶ್ವಾಸ, ಅಕ್ಕರೆ, ಒಲವು - ಇವುಗಳು ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ಕಾಲ್ ಗಳಿದ್ದ ಹಾಗೆ.
ಒಂದೇ ಕಡೆಯಿಂದ ಕಾಲ್ ಬರಬಾರದು. ಒಮ್ಮೆ ಈ ಮೊಬೈಲಿಂದ ಕಾಲ್ ಬರಬೇಕು, ಮಗದೊಮ್ಮೆ ಆ ಮೊಬೈಲಿಂದ ಕಾಲ್ ಬರಬೇಕು. ಅವಾಗ್ಲೇ ಕನೆಕ್ಷನ್ ಸರಿಯಾಗಿ ಇರುತ್ತದೆ.
ಬರೀ ಒಂದೇ ಕಡೆಯಿಂದ ಕಾಲ್ ಬರ್ತಾ ಇದ್ದು, ಇನ್ನೊಂದು ಕಡೆಯಿಂದ ಏನೂ ಇಲ್ದೆ ಇದ್ರೆ, ಸದಾ ಕಾಲ್
ಮಾಡುತ್ತಿರುವವರ ಕರೆನ್ಸಿ (ಪ್ರೀತಿ, ಅಕ್ಕರೆ, ಒಲವು, ಎಲ್ಲಕಿಂತ ಹೆಚ್ಚಾಗಿ ವಿಶ್ವಾಸ) ಕಮ್ಮಿ ಆಗ್ತಾ ಹೋಗುತ್ತದೆ.
ಹೀಗೆಯೇ ಆಗ್ತಾ ಇದ್ರೆ, ಕೊನೆಗೆ ಈ ಕಡೆಯ ಮೊಬೈಲ್ ನಲ್ಲಿ ಕರೆನ್ಸಿ ಫುಲ್ ಕಮ್ಮಿ ಆಗುತ್ತೆ.
ಔಟ್ ಗೋಯಿಂಗ್ ಇರಲ್ಲ, ಕೊನೆಗೆ ಇನ್ಕಮಿಂಗ್ ಕೂಡಾ ಇರೋದಿಲ್ಲ.
ಆ ಕಡೆಯವರು ಇದನ್ನು ಬಹಳ ತಡವಾಗಿ ತಿಳಿದುಕೊಂಡು ಕಾಲ್ ಮಾಡಲು ಪ್ರಯತ್ನ ಪಟ್ಟರೂ, ಈ ಕಡೆಗೆ ಕನೆಕ್ಟ್ ಆಗಲ್ಲ.
ಕಾಲ್ ಮಾಡಿದಾಗ ಆ ಕಡೆಯಿಂದ ರಿಸೀವ್ ಮಾಡಿದರೆ ಓಕೆ, ರಿಸೀವ್ ಮಾಡ್ಲಿಲ್ಲ ಅಂದ್ರೆ ಬರೀ ಮಿಸ್ಡ್ ಕಾಲ್ ಆಗುತ್ತೆ.
ಬರೀ ಮಿಸ್ಡ್ ಕಾಲುಗಳು ಆದ್ರೆ ಸಖತ್ ಡೇಂಜರ್. ಸಂಬಂಧ ಕೆಡುತ್ತಾ ಹೋಗುತ್ತೆ. ಇಲ್ಲದ ಅನುಮಾನ, ಸಂಶಯಗಳಿಗೆ ಆಸ್ಪದ ಕೊಡುತ್ತೆ.
ಆದ್ದರಿಂದ, ಎರಡೂ ಮೊಬೈಲ್ಗಳ ನಡುವೆ ನಿರಂತರವಾಗಿ ಇನ್ಕಮಿಂಗ್ ಹಾಗು ಔಟ್ ಗೋಯಿಂಗ್ ನಡೀತಾ ಇರಬೇಕು.
ಏನಂತೀರಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ