Tuesday, May 27, 2008

ಹಳೇ ಚಂದಮಾಮ ಇಲ್ಲಿದ್ದಾನೆ

ಶಾಲೆಗೆ ರಜೆ ಬಂದ್ರೆ ಸಾಕು, ಆಟ ಆಟ ಆಟ... ಸಂಜೆ ಕತ್ತಲಾದ ಮೇಲೆ ಮನೆಗೆ ಬಂದು, ಟೈಂಪಾಸ್ ಗೆ ಮೊರೆ ಹೋಗ್ತಾ ಇದ್ದದ್ದು "ಚಂದಮಾಮ"ನ ಬಳಿ.
ಸನ್ 1947 ರ ಜುಲೈ ತಿಂಗಳಲ್ಲಿ ಬಿ. ನಾಗಿರೆಡ್ಡಿ ಯವರು ಸ್ವಾತಂತ್ರ್ಯಾನಂತರದ ಪೀಳಿಗೆಗೆ ಭಾರತದ ಸಂಸ್ಕೃತಿ, ಸಾಹಿತ್ಯ, ಕಲೆ, ಪುರಾಣಗಳನ್ನು ಅತ್ಯಂತ ಸರಳವಾದ ಕಥೆಗಳ ಮೂಲಕ ಹೇಳಿಕೊಡುವ ಹಾಗು ಅರಿವು ಮೂಡಿಸುವ ಸಲುವಾಗಿ "ಚಂದಮಾಮ"ನನ್ನು ಭೂಮಿ ಮೇಲೆ ತಂದರು. ಆ ಹಳೆಯ ಸುಮಾರು ಅಷ್ಟೂ ಸಂಚಿಕೆಗಳು ನಮಗೆ ಇವಾಗ ಮತ್ತೆ ದೊರಕಿಸುವ ನಿಟ್ಟಿನಲ್ಲಿ "ಚಂದಮಾಮ"ನನ್ನು ಅಂತರ್ಜಾಲಕ್ಕೆ ತಂದಿದ್ದಾರೆ. ಇದರಲ್ಲಿ 1949ರ ಜುಲೈನಿಂದ, 1958ರ ಡಿಸೆಂಬರ್ ವರೆಗಿನ ಸಂಚಿಕೆಗಳನ್ನು PDF ರೂಪದಲ್ಲಿ ಲಭ್ಯವಿದೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಇಂಗ್ಲಿಷ್ ಹಾಗು ಹಿಂದಿಯಲ್ಲಿ ಹಳೆಯ ಸಂಚಿಕೆಗಳು ಫ್ರೀ ಡೌನ್ಲೋಡಿಗೆ (Free Download) ಇದೆ. ಹಳೆಯ ಎಲ್ಲಾ ಸಂಚಿಕೆಗಳೂ ಸಧ್ಯಕ್ಕೆ ಇಲ್ಲವಾದರೂ, ಇನ್ನು ಕೆಲವು ತಿಂಗಳುಗಳಲ್ಲಿ ದೊರೆಯಬಹುದು. ಮತ್ತೆ ನಮ್ಮೆಲ್ಲರ ಪ್ರೀತಿಯ ಮಾಮನನ್ನು ನೋಡುವ ಬನ್ನಿ.
ಅಂತರ್ಜಾಲದಲ್ಲಿ ಹಳೆಯ "ಚಂದಮಾಮ"ನನ್ನು ಇಲ್ಲಿ ನೋಡಿರಿ.

---------------------------------------------




-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

6 comments:

ವಿ.ರಾ.ಹೆ. said...

ಶಂಕ್ರಣ್ಣ, ಬಾಲ್ಯ ಮರುಕಳಿಸುವಂತೆ ಮಾಡಿದ್ದಕ್ಕೆ ಥ್ಯಾಂಕ್ಸು.... ನನ್ನ ಹತ್ತಿರ ಹಳೇ ಚಂದಮಾಮಗಳೆಲ್ಲ ಹಾಗೇ ಇದೆ. ಯಾಕೋ ಅದನ್ನೆಲ್ಲಾ dispose ಮಾಡಲು ಮನಸ್ಸೇ ಬರುವುದಿಲ್ಲ. ! ಈಗ ಕಂಪ್ಯೂಟರ್ ಮುಂದೆ ಕೂತ್ಕೊಂಡು ಹಳೇ ಚಂದ ಮಾಮಗಳನ್ನ ನೋಡ್ತಾ ಇದ್ರೆ........ ಹ್ಮ್....

Shankar Prasad ಶಂಕರ ಪ್ರಸಾದ said...

ಧನ್ಯವಾದ ವಿಕಾಸ್.
ನನ್ನ ಬಳಿ ಕೂಡಾ 1980ರ ದಶಕದ ಚಂದಮಾಮ ಬಹಳಷ್ಟು ಇವೆ. ನಮ್ಮಪ್ಪ ಸುಮಾರು 10-15 ಸಂಚಿಕೆಗಳನ್ನು ಒಟ್ಟಿಗೆ ಕೂಡಿಸಿ, ಹೋಲಿಸಿ, ಬೈನ್ಡಿಂಗ್ (BINDING) ಮಾಡಿಸಿದ್ದಾರೆ. ಅದಕ್ಕೆ ಇನ್ನೂ ಜೀವಂತವಾಗಿದೆ. ಆದರೂ ಕೂಡಾ ಬಹಳಷ್ಟು ಜನ ಅದನ್ನು ತಗೊಂಡು ಹೋದವರು, ವಾಪಸು ತಂದು ಕೊಟ್ಟಿಲ್ಲ. ಮೈಎಲ್ಲಾ ಉರಿಯುತ್ತೆ.
ಅಂದ ಹಾಗೆ, ನಿನ್ನ ಬಳಿ ಇರುವ ಕೆಲವನ್ನು ನನಗೆ ಓದಲು ಕೊಡ್ತಿಯಾ ?

----------------------------------
ಕಟ್ಟೆ ಶಂಕ್ರ

ವಿ.ರಾ.ಹೆ. said...

ಖಂಡಿತಾ . ಮನೆಗೆ ಬಂದು ತಗೊಂಡು ಹೋಗಿ. ಓದಿ ವಾಪಸ್ ಕೊಡುವಾಗ ಬೈಂಡಿಂಗ್ ಮಾಡಿಸಿ ಕೊಟ್ಟುಬಿಟ್ಟರಂತೂ ಇನ್ನೂ ಒಳ್ಳೆಯದು :)

Sushrutha Dodderi said...

nangoo beku chandamaama... :-/

Susheel Sandeep said...

ಚಿಂದಿ ಚಿತ್ರಾನ್ನ ಗುರುವೆ!!
ನಮ್ಮ ಹೈಕಳು-ಮಕ್ಕಳು,ಬಂಧು-ಬಳಗ, ಕುಲಬಾಂಧವರೆಲ್ಲರಿಗೂ ಈ ಕೊಂಡಿ ಕೊಟ್ಟುಬಿಟ್ಟೆ! ಎಲ್ಲರೂ ಒಂದೇ ಸಲ ಜೈ ಚಂದಮಾಮ ಅಂತ ಕೂಗ್ಬಿಟ್ರು!:)

Shankar Prasad ಶಂಕರ ಪ್ರಸಾದ said...

ಜೈ ಚಂದಮಾಮ..
ನಿಜಕ್ಕೂ ಸಖತ್ ಪುಸ್ತಕ ಕಣ್ರೀ ಅದು. ಅಲ್ವಾ ?
ಧನ್ಯವಾದಗಳು.

ಕಟ್ಟೆ ಶಂಕ್ರ