Wednesday, April 30, 2008

ಆಟೋ ಅಣಿಮುತ್ತುಗಳು - ೫

ಬನ್ನೇರುಘಟ್ಟ ರೋಡಿನಲ್ಲಿ ಇವತ್ತು ಬೆಳಿಗ್ಗೆ ಆಫೀಸಿಗೆ ಬರಬೇಕಾದ್ರೆ ಈ ಆಟೋ ಕಂಡಿದ್ದು.

ಬೆನ್ನು ಹತ್ತಿದ ಬೇತಾಳದ ಹಾಗೆ ಫಾಲೋ ಮಾಡ್ತಾ ಬಂದೆ. ಎಲ್ಲೂ ನಿಲ್ಲಿಸ್ಲೇ ಇಲ್ಲಾ.. ಬೈಕ್ ರೈಡ್ ಮಾಡ್ತಾ, ಹಂಗೆ ಜೇಬಿಂದ ಮೊಬೈಲ್ ಹೊರತೆಗೆದು ಫೋಟೋ ತೆಕ್ಕೊಂಡೆ...

ಹೆಂಗಿದಾನೆ ನಮ್ಮ "ಮೆಂಟಲ್ ಮಂಜ" ?? ಕಂಡ್ರೆ ಒಮ್ಮೆ ಹಾಯ್ ಅಂದುಬಿಡಿ


-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

Monday, April 28, 2008

ಆಟೋ ಅಣಿಮುತ್ತುಗಳು - ೪

ಇವತ್ತು ಬೆಳಿಗ್ಗೆ "ಇಂಡಿಯನ್ ಎಕ್ಸ್ಪ್ರೆಸ್" ಸರ್ಕಲ್ ನಲ್ಲಿ ತೆಗೆದಿದ್ದು

"ಆಯಿಲ್ ಕುಟ್ಟಿ"



-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, April 25, 2008

ಆಟೋ ಅಣಿಮುತ್ತುಗಳು - ೩

ನಿನ್ನೆ ಮ್ಯೂಸಿಯಂ ರೋಡಿನಲ್ಲಿ ತೆಗೆದ ಫೋಟೊ.

MOSTLY ವರದಕ್ಷಿಣೆಯಾಗಿ ಕೊಟ್ಟಿದ್ದು ಅನ್ಸುತ್ತೆ.. ಅಲ್ವೇ ?

"ಇದು ಅತ್ತೆ ಮಾವನ ಆಶೀರ್ವಾದ.... ನೆನಪಿರಲಿ "



-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

Wednesday, April 16, 2008

ಶುಚಿ ಶೌಚಾಲಯ

ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಮಿತ್ರ ಅವಿನಾಶ್ ಪದಕಿ ತೆಗೆದ ಚಿತ್ರಗಳು


1. ಬೇರೆ ಸಿಗ್ಲಿಲ್ವಾ ಇವ್ರಿಗೆ ? ಅಡುಗೆಮನೆ, ಶೌಚದಮನೆ ಕಂಬೈನ್ ಆಗಿ ಹೇಳ್ತಾರಲ್ಲಾ..ನಗು ತಡೆಯೋಕ್ಕೆ ಆಗ್ತಾ ಇಲ್ಲಾ ನಂಗೆ.

2. ಇದರ ಬಗ್ಗೆ ಏನು ಕಮೆಂಟ್ ಇಲ್ಲಾ



3. ಉಪೇಂದ್ರ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಹೀಗಾ ? (ಎಲ್ಲಾ ಓಕೆ, ಕೂಲ್ ಡ್ರಿಂಕ್ ಯಾಕೆ ?)



-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

ಆಕ್ಸಿಡೆಂಟು.. ನೋಡಿ

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ್ವಾ ? ನಿಜಕ್ಕೂ ಏನೂ ಆಗಿಲ್ಲ ಆತನಿಗೆ. ಗಾಡಿ ಮಾತ್ರಾ ಗೋತಾ.

ಪ್ರೈವೇಟ್ ಬಸ್ಸಿನವರನ್ನು ಹೇಳೋರು, ಕೇಳೋರು ಯಾರೂ ಇಲ್ವಾ ? ಅಪಘಾತ ನಡೆದ ಸ್ಥಳದಲ್ಲಿ ಇದ್ದ ಪೊಲೀಸರು ಕೂಡಾ, "ಕಂಪ್ಲೇಂಟ್ ಕೊಟ್ಟು ಕೇಸು ಹಾಕೋಹಾಗಿದ್ರೆ ಹಾಕಿ, ಬೆಸ್ಟ್ ಅಂದ್ರೆ ಸುಮ್ನೆ ಕಾಂಪ್ರೋ (compromise) ಮಾಡ್ಕೊಳ್ರೀ, ಕೇಸು ಅಂತಾ ಹೋದ್ರೆ ಏನೂ ಉಪಯೋಗ ಇಲ್ಲಾ.. ಕಾಂಪ್ರೋ ಮಾಡ್ಕೊಂಡ್ರೆ atleast ನಿಮ್ಮ ಬೈಕ್ ರಿಪೇರಿ ಅವ್ರೇ ಮಾಡ್ಸಿ ಕೊಡ್ತಾರೆ..." ಅಂತಾ ಬೈಕಿನ ಮಾಲೀಕನಿಗೆ ಹೇಳ್ತಾ ಇದ್ರು. ನಮ್ಮ ಪೊಲೀಸ್ ವ್ಯವಸ್ಥೆ ಇದು.

ಸರಿ, ನೋಡಿ.. ಈ ಆಕ್ಸಿಡೆಂಟಿನ ಫೋಟೋಗಳು.












-------------------------------------------------------------------


ನಿಮ್ಮವನು,


ಕಟ್ಟೆ ಶಂಕ್ರ

Wednesday, April 9, 2008

ಇದು ಸರಿಯೇ ?

ಹೊಗೆನಕಲ್ ವಿವಾದದ ಬಗ್ಗೆ ಎಲ್ಲಾ ಮಧ್ಯಮಗಳಲ್ಲೂ ಸುದ್ಧಿ ಬಿತ್ತರವಾಗಿದೆ.

ಟಿ.ವಿ, ರೇಡಿಯೋ, ಪತ್ರಿಕೆ, ಅಂತರ್ಜಾಲ... ಎಲ್ಲದರಲ್ಲೂ ಇದರ ಬಿಸಿ ಮುಟ್ಟಿದೆ.

ಹೊಗೆನಕಲ್ ವಿವಾದದಲ್ಲಿ, ತಮಿಳುನಟ ರಜನಿಕಾಂತ್ ಹೇಳಿಕೆಯನ್ನು ಖಂಡಿಸಿ, ಆತ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿ ಒಬ್ಬ ಮಹಾನುಭಾವ ರಿಡಿಫ್.ಕಾಂ ನಲ್ಲಿ ಬರೆದಿರುವ ಲೇಖನ ಓದಿ.

ಈ ಲೇಖನದಲ್ಲಿ, ಪುಣ್ಯಾತ್ಮ ಏನ್ ಬರೆದಿದ್ದಾನೋ ನೋಡಿ. ನಮ್ಮ "ಕರ್ನಾಟಕ ರಕ್ಷಣಾ ವೇದಿಕೆ"ಯನ್ನು "KANNADA MILITANT GROUP" ಅಂತಾ ಕರೆದಿದ್ದಾನೆ. ಇಲ್ಲಿರುವ ಫೋಟೋ ನೋಡಿ.

http://www.rediff.com/cms/print.jsp?docpath=/movies/2008/apr/08rajni.htm



ಅಲ್ಲಾ ಕಣ್ರೀ, ಮೊದ್ಲೇ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮಗಳಿಗೆ ಕನ್ನಡದ ಮೇಲೆ ಮಲತಾಯಿ ಧೋರಣೆ. ಈ ಥರ ಪರಿಸ್ಥಿತಿ ಇದ್ದಾಗ, ಇಂಥಾ ಮುಂ* ಮಕ್ಳು ಹೀಗೆ ಬರೆದರೆ ಏನು ಗತಿ ? ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಪ್ರತಿಭಟಸಿ, ಆ ನೇಮಕಾತಿ ಪ್ರಕ್ರಿಯೆಯನ್ನೇ ನಿಲ್ಲಿಸಿದ ಸಂಘಟನೆ ಇದು. ಇದನ್ನು ಹೋಗಿ ಹೋಗಿ "MILITANT GROUP" ಅಂತಾ ಕರೆದರೆ, ಈ ಲೇಖನವನ್ನು ಓದಿದ ಅನ್ಯಭಾಷಿಕರು ನಮ್ಮ "ಕರವೇ" ಬಗ್ಗೆ ಏನು ತಿಳಿಯಬಹುದು ?

ಈ ಥರ ಬರೆದಿರುವ ಲೇಖನವನ್ನು ಪ್ರೂಫ್ ರೀಡಿಂಗ್ ಮಾಡದೇ ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ರಿಡಿಫ್ ಗೆ ತಲೆ ಇಲ್ಲವೇ ?

ನೋಡಿ, ನಮ್ಮ ಹಣೇಬರಹ ಹಿಂಗೇ.

-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

ನಾನ್ಯಾರು ಗೊತ್ತಾ ?


ಖ್ಯಾತ ಅಮೇರಿಕನ್ ಮಾಡೆಲ್ "ನವೋಮಿ ಕ್ಯಾಂಪ್ಬೆಲ್ (Naomi Campbell)"ಳನ್ನು ಲಂಡನ್ ಹೀಥ್ರೋ ವಿಮಾನ ನಿಲ್ದಾಣದ ಅತ್ಯಂತ ಬ್ಯುಸಿಯಾಗಿರುವ 5ನೇ ಟರ್ಮಿನಲ್ ನಲ್ಲಿ ಅರೆಸ್ಟ್ ಮಾಡಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಕೆಯು ಲಂಡನ್ನಿಂದ ಅಮೇರಿಕಾದ ಲಾಸ್ ಏಂಜಲೀಸ್ ನಗರಕ್ಕೆ ಹಾರುವರಿದ್ದಳು. ತನ್ನ ಒಂದು ಬ್ಯಾಗನ್ನು ವಿಮಾನಕ್ಕೆ ಲೋಡ್ ಮಾಡಲಿಲ್ಲ ಎಂದು ಕೋಪ ಮಾಡಿಕೊಂಡು, ಬ್ರಿಟಿಷ್ ಏರ್ ವೇಸ್ ಉದ್ಯೋಗಿಗಳನ್ನು ಹೀನಾಮಾನ ಬಯ್ದು, ರೇಗಾಡಿ, ಕೂಗಾಡಿ ರಂಪ ಮಾಡಿದಳು ಎಂದು ಹೇಳಲಾಗಿದೆ. ಆಕೆಯನ್ನು ಸಮಾಧಾನವಾಗಿ ಇರಿ ಎಂದು ಹೇಳಲು ಬಂದ ಭದ್ರತಾ ವ್ಯವಸ್ಥೆಯವರ ಮೇಲೂ ಉಗಿದು, "do you know who i am ? i am Naomi Campbell" ಎಂದು ಆವಾಜ್ ಹಾಕಿದಳೆನ್ನಲಾಗಿದೆ.

ಆಕೆಯನ್ನು ಸಮಾಧಾನ ಮಾಡಿ ಜಗಳವನ್ನು ಬಿಡಿಸಲು ಬಂದ ಸೆಕ್ಯೂರಿಟಿಯವರನ್ನೂ ಕೂಡಾ ಅಸಭ್ಯವಾಗಿ ಬಯ್ದು, ಅವರ ಮೇಲೆ ಉಗಿದು, ಮತ್ತೊಬ್ಬನ ಮುಖಕ್ಕೆ ಪಂಚ್ ಮಾಡಿದ್ದಾಳೆ. ಬೇರೆ ದಾರಿ ಇಲ್ಲದೆ, ಆಕೆಗೆ ಕೈಕೋಳ ತೊಡಿಸಿ, ಬಂಧಿಸಿ ಕರೆದೊಯ್ಯಲಾಯಿತು. ಇದಕ್ಕೆ ಕಾರಣವೇನೆಂದರೆ, ಹೀಥ್ರೋ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆಗಳಿಂದಾಗಿ, ಸುಮಾರು 20,000 ಲಗೇಜುಗಳು ಸರಿಯಾದ ಸಮಯಕ್ಕೆ ವಿಲೇವಾರಿಯಾಗಲಿಲ್ಲ. ಅದರಲ್ಲಿ ಈಕೆಯ ಬ್ಯಾಗ್ ಕೂಡಾ ಸೇರಿತ್ತು. ಈ ಕಾರಣದಿಂದಾಗಿಯೇ, ಬ್ರಿಟಿಷ್ ಏರ್ವೇಸ್ ಈಕೆಯ ಮೇಲೆ ಆಜೀವ ನಿಷೇಧ ಹೇರಿದೆ.

ಈಕೆಯ ಈ ರೂಪವೇನು ಹೊಸದಲ್ಲ. ಕಳೆದ ವರ್ಷ ತನ್ನ ಮನೆಕೆಲಸದವಳ ಮೇಲೆ ಮೊಬೈಲ್ ಫೋನ್ ಎಸೆದು, ಗಾಯಗೊಳಿಸಿದ್ದಕ್ಕೆ, ನ್ಯಾಯಾಲಯವು ಈಕೆಗೆ ನ್ಯೂಯಾರ್ಕ್ ನಗರದಲ್ಲಿ ರಸ್ತೆಯ ಕಸ ಬಳಿಯುವ / ಗುಡಿಸುವ ಶಿಕ್ಷೆ ಕೊಟ್ಟಿತ್ತು.

ಸರಿ ಸರಿ, ನಾನು ಅವಳ ಪುರಾಣ ಹೇಳಕ್ಕೆ ಹೊರಟಿಲ್ಲಾ. ಇದೇ ರೀತಿ, ನಮ್ಮ ದೇಶದಲ್ಲಿ ಒಬ್ಬ ಖ್ಯಾತ ಮಾಡೆಲ್, ನಟ/ನಟಿ, ರಾಜಕಾರಣಿ ಹೀಗೆ ಗಲಾಟೆ ಮಾಡಿದ್ದಿದ್ರೆ ಇದೇ ರೀತಿಯ ನಿಷ್ಪಕ್ಷಪಾತವಾದ ರಿಸಲ್ಟ್ ಸಿಗ್ತಾ ಇತ್ತಾ ??
ಅವರ ಮೇಲೆ ಕೇಸ್ ಹಾಕಿದ ಸಿಬ್ಬಂದಿಯವರನ್ನು ನಾನಾ ರೀತಿಯಾಗಿ ಕಾಡಿ, ಸಾಕ್ಷಿ ಇಲ್ಲವೆಂದು ಬರಖಾಸ್ತು ಮಾಡ್ತಾ ಇದ್ರು.
ಇನ್ನು ಅವರೇನಾದ್ರೂ ರಾಜಕಾರಣಿಗಳಾಗಿದ್ರಂತೂ ಮುಗಿದೇ ಹೋಯ್ತು. ಕೇಳೋಹಾಗೇ ಇಲ್ಲಾ.
ಆ ಥರಾ ಸಂದರ್ಭದಲ್ಲಿ ಇವರೆಲ್ಲಾ ಹೇಳೋದು

"ನಾನ್ಯಾರು ಗೊತ್ತಾ .......?"

-------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Wednesday, April 2, 2008

ಪುಟ್ಟಾ ಪುಟ್ಟಿ ಜೋಕು

ಬರೀ ಸೀರಿಯಸ್ ಆಗಿ ಮಾತಾಡ್ತಾ, ಬರೀತಾ ಇದ್ರೆ, ತುಂಬಾ MONOTONOUS ಅನ್ಸುಕ್ಕೆ ಶುರು ಆಗತ್ತೆ, ಅಲ್ವಾ ?
ಅದಕ್ಕೆ, ಊಟದ ಮಧ್ಯೆ ಉಪ್ಪಿನಕಾಯಿ ಥರ ಒಂದು ಸಣ್ಣ ಪೋಲಿ ಜೋಕು. ಬೈಬೇಡಿ ಪ್ಲೀಸ್.
-------------------------------------------------------------------

ಪುಟ್ಟ, ಪುಟ್ಟಿ ಇಬ್ರಿಗೂ 10 ವರ್ಷ, ಆದ್ರೂ ತಾವಿಬ್ರೂ ಒಬ್ಬರನ್ನ ಒಬ್ರು ಲವ್ ಮಾಡ್ತಾ ಇರೋದು ಚೆನ್ನಾಗಿ ಗೊತ್ತು.

ಒಂದಿನ, ಅವ್ರಿಬ್ರೂ ಮದ್ವೆ ಆಗಕ್ಕೆ ಡಿಸೈಡ್ ಮಾಡ್ತಾರೆ. ಸರಿ ಅಂತ, ಪುಟ್ಟ ಇದ್ದೋನು ಪುಟ್ಟಿಯ ಅಪ್ಪನ ಬಳಿ ಮದ್ವೆ ವಿಷಯ ಮಾತಾಡಕ್ಕೆ ಹೋದ.

ಧೈರ್ಯ ಮಾಡಿ "ಅಂಕಲ್, ನಾನು ಪುಟ್ಟಿ ಒಬ್ರನ್ನೋಬ್ರು ತುಂಬಾ ಪ್ರೀತಿಸ್ತಾ ಇದೀವಿ, ನಿಮ್ಮ ಮಗಳನ್ನ ನಂಗೆ ಮದ್ವೆ ಮಾಡಿ ಕೊಡಿ" ಅಂತ ಕೇಳ್ದ.

ಒಳ್ಳೇ ಮಜಾ ಇದು, ೧೦ ವರ್ಷದ ಪುಟ್ಟ ಬಂದು ಹಿಂಗೆ ಕೇಳ್ತಾ ಇದಾನೆ ಅಂತ ಪುಟ್ಟಿಯ ಅಪ್ಪ, "ಸರಿ ಪುಟ್ಟಾ, ಮದ್ವೆ ಏನೋ ಮಾಡಿ ಕೊಡೋಣಾ, ಆದ್ರೆ ಮದ್ವೆ ಆದ್ಮೇಲೆ ನೀವಿಬ್ರು ಎಲ್ಲಿರ್ತೀರಾ ?"

ಏನೂ ಯೋಚನೆ ಮಾಡದೆ, ಪುಟ್ಟ ಥಟ್ ಅಂತ ಉತ್ತರ ಕೊಟ್ಟ,"ಅಂಕಲ್, ನಾವಿಬ್ರೂ ಪುಟ್ಟಿಯ ರೂಮಲ್ಲಿ ಇರ್ತೀವಿ, ಅದು ನನ್ನ ರೂಮಿಗಿಂತಾ ದೊಡ್ಡದಾಗಿದೆ"

ತುಂಬಾ ಮುದ್ದಾಗಿ ಉತ್ತರ ಕೊಡ್ತಾ ಇದಾನೆ ಪುಟ್ಟ ಅಂತ ಅನ್ಕೊಂಡು ಪುಟ್ಟಿಯ ತಂದೆ, "ಸರಿ, ನೀವಿಬ್ರು ಹೆಂಗೆ ಜೀವನ ನಡೆಸ್ತೀರಾ ? ನಿಂಗೆ ಬರೀ 10 ವರ್ಷ ಇವಾಗ, ಎಲ್ಲೂ ಕೆಲ್ಸ ಸಿಗಲ್ಲಾ, ನಿನ್ನ ಫ್ಯಾಮಿಲಿನಾ ಹೆಂಗೆ ಸಪೋರ್ಟ್ ಮಾಡ್ತ್ಯಾ ?"

ಪುಟ್ಟ ಮತ್ತೆ ಥಟ್ ಅಂತ, "ಅಂಕಲ್, ನಂಗೆ ವಾರಕ್ಕೆ 100 ರೂ ಪಾಕೆಟ್ ಮನಿ ಸಿಗುತ್ತೆ, ಪುಟ್ಟಿಗೆ 50 ರೂ ಸಿಗುತ್ತೆ, ಅಂದ್ರೆ ಇಬ್ರಿಂದ ವಾರಕ್ಕೆ 150 ರೂ, ತಿಂಗ್ಳಿಗೆ 600 ರೂ ಅಗತ್ತೆ. ಅದ್ರಲ್ಲೇ ನಡೆಸ್ತೀವಿ".

ಪರ್ವಾಗಿಲ್ಲಾ ಹುಡ್ಗ, ಶಾರ್ಪ್ ಇದಾನೆ, ಸಂಸಾರದ ಬಗ್ಗೆ ಆಗ್ಲೇ ಯೋಚನೆ ಮಾಡ್ತಾ ಇದಾನೆ ಅಂತ ಅನ್ಕೊಂಡು ಪುಟ್ಟಿ ಅಪ್ಪ, " ಅದೆಲ್ಲಾ ಸರಿ ಪುಟ್ಟಾ, ಇರೋಕ್ಕೆ ಜಾಗ, ಸಂಪಾದನೆ ಹೆಂಗೆ ಅಂತೆಲ್ಲಾ ಯೋಚನೆ ಮಾಡಿದ್ಯಾ ನೀನು, ಇನ್ನೊಂದು ಸಣ್ಣ ಡೌಟು ನಂಗೆ..ನಿಮ್ಮಿಬ್ರಿಗೂ ಮಕ್ಳಾದಾಗ ಏನ್ ಮಾಡ್ತೀರಾ ?" (ಪುಟ್ಟಿ ಅಪ್ಪನಿಗೆ ಅವನು ಏನ್ ಹೇಳ್ತಾನೆ ಅನ್ನೋ ಕುತೂಹಲ, ಬಹಳ ಮುದ್ದು ಮಗು ಇದು ಅನ್ನಿಸೋಕ್ಕೆ ಶುರು ಆಯ್ತು)

ಪುಟ್ಟ ತನ್ನ ಭುಜ ಕುಣಿಸುತ್ತಾ,"ಗೊತ್ತಿಲ್ಲಾ ಅಂಕಲ್, ಇಷ್ಟು ದಿನ ಆಯ್ತು ಟ್ರೈ ಮಾಡಕ್ಕೆ ಶುರು ಮಾಡಿ, ಇನ್ನೂ ಆ ಥರಾ ಏನೂ ಆಗಿಲ್ಲಾ"

ಪುಟ್ಟಿ ಅಪ್ಪಂಗೆ ಈ ಮುಂಡೇದು ಮುದ್ದು ಮಗು ಅಲ್ಲ ಅನ್ಸೋದು ಕನ್ಫರ್ಮ್ ಆಯ್ತು.

-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ