
"ರೌಡಿಯಿಜಂ ಬಗ್ಗೆ ಇರೋ ಫಿಲಮ್ಮು, ಆದ್ರೂ ಕೂಡಾ VIOLENCEಗೆ IMPORTANCE ಕೊಟ್ಟಿಲ್ಲ" ಅಂತ ಹೇಳಿದ್ರು.
ಇದಕ್ಕೆ ಮುಂಚೆ, ಈ ಫಿಲಂನ ತುಣುಕುಗಳು ಟೀವಿ ಚಾನೆಲಲ್ಲಿ ಬರುವಾಗ, ಇದ್ಯಾವುದಪ್ಪಾ ಹೊಸಾ ಫಿಲಮ್ಮು.. ಹೆಸ್ರು ವಿಚಿತ್ರವಾಗಿ ಇದೆ, ಮೋಸ್ಟ್ಲಿ ಯಾವ್ದೋ ಲೋ ಬಜೆಟ್, ಅಮ್ಮನ್, ಅಕ್ಕನ್ ಡೈಲಾಗ್ ಇರೋ ಮಾಮೂಲ್ ರೌಡಿಜಂ ಕಥೆ ಅನ್ಕೊಂಡು ಸುಮ್ನಾಗಿದ್ದೆ.
ಅಪ್ಪ ಸುಮ್ಸುಮ್ನೆ ಹೇಳಲ್ಲ...ಹೆಂಗೂ ಪಿ.ವಿ.ಆರ್ ಗೆ ಬಂದಿದೀನಿ.. ಈ ಫಿಲಂನ ನೋಡೇ ಬಿಡೋಣಾ ಅನ್ಕೊಂಡು, ಟಿಕೆಟ್ ಹರಿಸಿದೆ.
(ಅಲ್ಲೂ ಕೂಡಾ ತಿ* ಉರಿಯೋ ಸೀನು... "ಆ ದಿನಗಳು, ಒಂದ್ ಟಿಕೆಟ್ ಕೊಡಿ" ಅಂದ್ರೂ ಕೂಡಾ..."HERE YOU ARE SIR..AA DINAGALU, 1:10 SHOW, AUDI-5, SEAT L-16. HAVE A NICE TIME SIR" ಅಂತಾ ಇಂಗ್ಲಿಷಲ್ಲಿ ಡೈಲಾಗ್ ಹಾಕಿ, ಟಿಕೆಟ್ ಕೊಟ್ಟ ಭೂಪ).
ಸರಿ, ಹಾಳಾಗಿ ಹೋಗ್ಲಿ, ಈಗ ಜಗಳ ಕಾದ್ರೆ, ಆರಾಮ್ ಮೂಡ್ನಲ್ಲಿ ಫಿಲಂ ನೋಡಕ್ಕೆ ಆಗಲ್ಲ ಅನ್ಕೊಂಡು, ಹೋದೆ.
ಚಿತ್ರದ ಹೈಲೈಟ್ ಅಂದ್ರೆ, ಹೊಸತನದ ಫ್ರೆಶ್ ನೆಸ್.. ಇದು ಚಿತ್ರದ ಎಲ್ಲಾ ವಿಭಾಗಗಳಲ್ಲೂ ಕಾಣುತ್ತದೆ.
ಇದೊಂದು ಹೊಸ ಚಿಗುರು, ಹಳೆ ಬೇರು ಕಾಂಬಿನೇಶನ್. ಬಹಳ ಸೊಗಸಾಗಿ ಬಂದಿದೆ.
ಚಿತ್ರದ ನಿರ್ದೇಶಕ ಚೈತನ್ಯ ತಮ್ಮ ಮೊದಲ ಚಿತ್ರದಲ್ಲೇ ಅಪಾರ ಭರವಸೆ ಮೂಡಿಸಿದ್ದಾರೆ. ಇನ್ನು ಮಿಕ್ಕಿದ ಪಾತ್ರವರ್ಗ, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನವ ನಾಯಕ ನಟ ಚೇತನ್, ನಟಿ ಅರ್ಚನ ತಮ್ಮ ಬೆಸ್ಟ್ ಅಭಿನಯ ನೀಡಿದ್ದಾರೆ. ಯುವ ಪ್ರೇಮಿಗಳಾಗಿ ನಿಜಕ್ಕೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.
ಇನ್ನು ಮಿಕ್ಕಿದ ಪಾತ್ರವರ್ಗವಂತೂ ಬಹಳ ಜತನದಿಂದ ಹುಡುಕಿ, ಪಾತ್ರ ವಹಿಸಿ ಕೊಟ್ಟ ಹಾಗಿದೆ.
ಕೊತ್ವಾಲನ ರೂಪದಲ್ಲಿ ಶರತ್ ಲೋಹಿತಾಶ್ವ ಮಿಂಚಿದ್ದಾರೆ. ಅವರ ಗಾತ್ರ, ಗತ್ತು, ಧ್ವನಿ, ಬಾಡಿ ಲ್ಯಾಂಗ್ವೇಜ್ ಎಲ್ಲಾ ಸೂಪರ್.
ನಿಜಕ್ಕೂ ಶರತ್ ಲೋಹಿತಾಶ್ವ STEALS THE SHOW.
ಕೆಲವೊಂದು ದೃಶ್ಯದಲ್ಲಂತೂ, ಥೇಟ್ ಕೊತ್ವಾಲನೇ ಬಂದು ನಿಂತಿದ್ದಾನೇನೋ ಎಂದು ಭಾಸವಾಗುತ್ತೆ (ನಾನೇನು ಕೊತ್ವಾಲನನ್ನು ನೋಡಿಲ್ಲಾ, ಆದ್ರೆ, ಹಾಯ್ ಬೆಂಗಳೂರು ಪೇಪರ್ ನಲ್ಲಿ ಕೆಲವೊಂದು ಬಾರಿ ನೋಡಿದ್ದೀನಿ).
ಇನ್ನು, ಜಯರಾಜ್ ಪಾತ್ರವನ್ನು ಅಶೀಶ್ ವಿದ್ಯಾರ್ಥಿ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಕನ್ನಡ ಮಾತಾಡಲು ಬರುವುದಿಲ್ಲಾವೆಂಬ ನ್ಯೂನತೆ ಬಿಟ್ಟರೆ, ಆ ಪಾತ್ರದಲ್ಲಿ ಜೀವ ತುಂಬಿದ್ದಾರೆ ಆಶೀಶ್.
ಇನ್ನು ಮಿಕ್ಕಿದ ಪಾತ್ರವರ್ಗದಲ್ಲಿ ಇರೋ ಗಿರೀಶ್ ಕಾರ್ನಾಡ್, ಅತುಲ್ ಕುಲಕರ್ಣಿ, ಇವರುಗಳ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ..
ಆಯಿಲ್ ಕುಮಾರ್ ಪಾತ್ರಧಾರಿ (ಅವರ ಹೆಸರು ನಂಗೆ ಗೊತ್ತಿಲ್ಲ, ಆದರೆ ಕಿರುತೆರೆಯ ಪರಿಚಿತ ಮುಖ), ಕೊತ್ವಾಲನ ಬಲಗೈ ಭಂಟ ಶೆಟ್ಟಿ.... ಇವರುಗಳೂ ಕೂಡಾ ಒಳ್ಳೆ ಅಭಿನಯ ನೀಡಿದ್ದಾರೆ. ಜೊತೆಗೆ ನಾಯಕನ ತಾಯಿಯಾಗಿ ವಿನಯಾ ಪ್ರಸಾದ್, ಚಿಕ್ಕ ಪಾತ್ರವಾದರೂ ಅದಕ್ಕೆ ಜೇವ ತುಂಬಿದ್ದಾರೆ ಹಾಗು ನೆನಪಿನಲ್ಲಿ ಉಳಿಯುತ್ತಾರೆ.
ಒಟ್ಟಿನಲ್ಲಿ ತಮ್ಮ ಮೊದಲನೇ ಚಿತ್ರದಲ್ಲಿ ನಿರ್ದೇಶಕ ಚೈತನ್ಯ, ನಾಯಕ ನಟ ಚೇತನ್, ನಾಯಕಿ ಅರ್ಚನ ಇವರೆಲ್ಲರೂ ಸಿಕ್ಸರ್ ಬಾರಿಸಿದ್ದಾರೆ.
ಇನ್ನು, 1985ನೇ ಇಸವಿಯ ಬೆಂಗಳೂರನ್ನು ಇವತ್ತಿನ ಬೆಂಗಳೂರಲ್ಲಿ ತೋರಿಸುವುದು ಬಹಳ ಕಷ್ಟ.. ಅದನ್ನು ಚಿತ್ರದ ಕಲಾ ನಿರ್ದೇಶಕ ಅಚ್ಹುಕಟ್ಟಾಗಿ ಮಾಡಿದ್ದಾರೆ. ಇನ್ನು, ಇಳಯರಾಜಾ ಅವರ ಸಂಗೀತದ ಬಗ್ಗೆ ಯಾರೂ ಏನೂ ಹೇಳುವುದು ಬೇಡ. ಚಿತ್ರದಲ್ಲಿ ಇರುವುದು ಎರಡೇ ಹಾಡು, ಆದ್ರೂ ಮನಸ್ಸಿನಲ್ಲಿ ಉಳಿಯುತ್ತದೆ. "ಸಿಹಿ ಗಾಳಿ ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲಿ...", "ಆ ದಿನಗಳು..." ಬಹಳ ಇಂಪಾಗಿ ಬಂದಿವೆ. "ಸಿಹಿ ಗಾಳಿ.." ಹಾಡನ್ನು ಸ್ವತಃ ಇಳಯರಾಜಾ ರವರು ಹಾಡಿದ್ದಾರೆ ಹಾಗು ಬಹಳ ಸೊಗಸಾಗಿ ಇದೆ..
ಇನ್ನು ಜಾಸ್ತಿ ಹೇಳೋದು ಬೇಡಾ, ನೀವೇ ಒಮ್ಮೆ ನೋಡಿ.."ಆ ದಿನಗಳು"
ಗ್ಯಾರಂಟಿ ಇಷ್ಟ ಆಗುತ್ತೆ.
----------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ