ನಿನ್ನೆ ರಾತ್ರಿ ಊಟ ಆದ್ಮೇಲೆ, ಹಂಗೇ ಟೀವಿ ಚಾನೆಲುಗಳಲ್ಲಿ ಅಡ್ದಾಡುತ್ತಿದ್ದೆ. ಕನ್ನಡ ನ್ಯೂಸ್ ವಾಹಿನಿಯಾದ "TV9" ನಲ್ಲಿ ಬ್ರೇಕಿಂಗ್ ನ್ಯೂಸ್ ಅಂತಾ ಈ ವಿಷಯ ಬರ್ತಾ ಇತ್ತು "ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಕ್ಕೆ". ಜೀವ ಧಗ್ ಅಂತು ಒಂದು ಕ್ಷಣ.
ಅಲ್ಲಾ ಸ್ವಾಮಿ, ರಿಯಲ್ ಎಸ್ಟೇಟ್ ಧಂದೆಯವರು ಅಪ್ಪಟ ವ್ಯಾಪಾರಸ್ಥರು, ಇನ್ನು ಅವರುಗಳು ರಾಜಕಾರಣಕ್ಕೆ ಎಂಟ್ರಿ ಹಾಕಿದ್ರೆ ಏನ್ ಗತಿ ?
.
ಮೊದ್ಲೇ ನಮ್ಮ ರಾಜ್ಯ ರಾಜಕಾರಣವು ಅತಿಯಾದ ಭ್ರಷ್ಟಾಚಾರ, ಅನೈತಿಕತೆ ಮುಂತಾದವುಗಳಿಂದ ಎಕ್ಕುಟ್ಟೋಗಿದೆ, ಅದ್ರ ಮೇಲೆ ಇಂಥ ಅಪ್ಪಟ ವ್ಯಾಪಾರಿಗಳು ಬಂದ್ರೆ ಏನ್ ಗತಿ ಅಂತ ?
.
ಈಗಾಗ್ಲೇ ಈ ರಿಯಲ್ ಎಸ್ಟೇಟ್ ದಂಧೆಯವರು ತಮ್ಮ ಹಣ, ಜನ ವಶೀಲಿಯಿಂದ ಸಾಕಷ್ಟು ಡ್ಯಾಮೇಜ್ ಮಾಡಿದಾರೆ. ಬೆಂಗಳೂರಿನಲ್ಲಿ ಎಷ್ಟೋ ಭೂಮಿಯನ್ನು ಅತಿಕ್ರಮಿಸಿ, ಕೆರೆಗಳನ್ನು ಮುಚ್ಹಿಹಾಕಿ, ಕಾಲುವೆಗಳನ್ನು ಬಂದ್ ಮಾಡಿ, ಅದರ ಮೇಲೆ ನಿವೇಶನಗಳನ್ನು ಮಾಡಿ, ಮಾರಿ ಹಣ ಮಾಡಿದ್ದಾರೆ. ಅದರ ಕಾರಣದಿಂದಲೇ ಕಳೆದ ವರ್ಷ ಮಳೆ ಬಂದು, ಸುಮಾರು ಈ ತೆರನಾದ ನಿವೇಶನಗಳಲ್ಲಿ ನೀರು ನುಗ್ಗಿ, ಜನರದ್ದು ನಾಯಿಪಾಡಾಗಿತ್ತು. ಇನ್ನು ಇವರುಗಳೇ ಸೈಟು, ಫ್ಲಾಟು, ಮನೆಗಳ ದರವನ್ನು ಸಿಕ್ಕಪಟ್ಟೆ ಏರಿಸಿ, ಬೆಂಗಳೂರಲ್ಲಿ ಒಬ್ಬ ಸಾಮಾನ್ಯ ಮಧ್ಯಮ ವರ್ಗದವನಿಗೆ ಒಂದು ಮನೆ ಮಾಡಿಕೊಳ್ಳದೇ ಇರೋ ಹಾಗೆ ಮಾಡಿದ್ದಾರೆ.
.
ಇನ್ನು ಹಾರ್ಸ್ ಟ್ರೇಡಿಂಗ್ (horse trading) ಅಂತಾರಲ್ಲ, ಅದೂ ಕೂಡಾ ಜಾಸ್ತಿ ಆಗುತ್ತೇನೋ ಅನ್ಸುತ್ತೆ.  ಪ್ರಿಯ ಮಿತ್ರರೆ, ನಮ್ಮ ದೇಶದಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೆ ನುಗ್ಗಬಹುದಾದಂಥದ್ದು ಅಂದರೆ ರಾಜಕೀಯ. ಈಗಾಗಲೇ ಕೊಲೆಗಡುಕರು, ಮಾಫಿಯಾದವರು, ದೋ ನಂಬರ್ ದಂಧೆಯವರು, ಇದರಲ್ಲಿ ಬಂದು ರಾಜಕೀಯದಲ್ಲಿ ನೈತಿಕತೆಯ ಅದಃಪತನಕ್ಕೆ ಕಾರಣವಾಗಿದೆ. ಇನ್ನು ಏನ್ ಏನ್ ನೋಡ್ಬೇಕೋ..
.
ಶ್ರೀಮದ್ ರಮಾರಮಣ ಗೋವಿಂದಾ.... ಗೋವಿಂದಾ
-----------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
 
 
 
 
 Posts
Posts
 
 
No comments:
Post a Comment