Sunday, August 31, 2008

ಆಟೋ ಅಣಿಮುತ್ತುಗಳು - ೩೬ - ಗೆಲುವು, ಒಳ್ಳೇತನ

ಒಳ್ಳೇ OPTIMISTIC ಮನುಷ್ಯ.
ಆದ್ರೆ ಇವತ್ತಿನ ಕಾಲದಲ್ಲಿ ಈ ಮೈಂಡ್ ಸೆಟ್ ಸರಿ ನಾ ??


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ‘

Friday, August 29, 2008

ಸೌತೆಕಾಯಿ ಗಾಡಿ, ಜೊತೆಗೆ ಸಿ.ಡಿ

ಆಫೀಸಿನ ಕ್ಯಾಂಟೀನ್ ಊಟ ದಿನಾಲೂ ಮಾಡಿ ಮಾಡಿ ನಾಲಿಗೆ ಎಕ್ಕಡದ ಥರ ಆಗೋಗಿತ್ತು.
ಅದಕ್ಕೆ ಹಾಗೆ ಸುಮ್ಮನೆ ಹೊರಗೆ ಹೋಗಿ ಊಟ ಮಾಡುವಾ ಅನ್ಕೊಂಡು, ನಾನು ನಮ್ಮ ನಾಲ್ಕು ಸಹೋದ್ಯೋಗಿಗಳು ಫಾರಂ ಮಾಲ್ ಗೆ ಹೋದ್ವಿ. ಊಟ ಮುಗ್ಸಿ ವಾಪಸ್ ಬರೋವಾಗ ಫುಟ್ಪಾತಿನಲ್ಲಿ ಸೌತೆಕಾಯಿ ಗಾಡಿ ಕಂಡಿತು.
ಎಲ್ಲಾ ಕಡೆನೂ ಇರತ್ತೆ, ಇದರದ್ದು ಏನ್ ಸ್ಪೆಷಲ್ ಅಂತೀರಾ ?

ನೀವೇ ನೋಡಿ...


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೩೫ - ಗೌಡ್ರು, ಬೂದಿ, ಗೂಳಿ

ಈ ಅಣ್ಣ ಅದೇನು ಹೇಳಕ್ಕೆ ಹೊರ್ಟಿದಾನೋ ನಂಗಂತೂ ಗೊತ್ತಿಲ್ಲ.
ಇವತ್ತು ಬೆಳಿಗ್ಗೆ ತೆಗೆದಿದ್ದು. ಈ ಸಲ ಕೂಡ ಸುಮಾರು ದೂರ ಆಟೋನಾ ಛೇಸ್ ಮಾಡಿ ಕಷ್ಟ ಪಟ್ಟಿ ತೆಗೆದಿದ್ದು.
ನಿಮಗೆ ಅರ್ಥ ಆದ್ರೆ ತಿಳಿಸಿ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, August 27, 2008

ಆಟೋ ಅಣಿಮುತ್ತುಗಳು - ೩೪ - ಬಾಜಿ ಕಟ್ತೀರಾ ?

ಈ ಅಣ್ಣಾ GAMBULER ಅಂತೆ. ಯಾರದ್ರೂ ಬಾಜಿ ಕಟ್ತೀರಾ ?
ಈ ಫೋಟೋ ತೆಗೆದಿದ್ದೂ ಕೂಡಾ ಗಾಡಿ ಓಡಿಸುವಾಗ್ಲೇ.
ಆಟೋ ಗಾಜಿನಲ್ಲಿ ಕಾಣಿಸುತ್ತಿದೆ ನೋಡಿ ಶಂಕ್ರ ಫೋಟೋ ತೆಗೀತಾ ಇರೋದು.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, August 26, 2008

ಕನ್ನಡ ಮಾತಾಡಿ, ಮಜಾ ಮಾಡಿ

ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ್ದರು.
ಅದ್ರಲ್ಲಿ ನಮ್ಮ ಬೆಂಗಳೂರಿನ ರಘು ಕೂಡಾ ಒಬ್ಬ. ಅಪ್ಪಟ ಬೆಂಗಳೂರಿನ ಕನ್ನಡಿಗ.

ಬಿಲ್ ಗೇಟ್ಸ್ ಅಲ್ಲಿ ಬಂದಿರೋರಿಗೆಲ್ಲ ಥ್ಯಾಂಕ್ಸ್ ಹೇಳಿ, "JAVA ಪ್ರೊಗ್ರಾಮಿಂಗ್ ಬರದೆ ಇದ್ದವರನ್ನು ಈ ಪೋಸ್ಟಿಗೆ ಸೆಲೆಕ್ಟ್ ಮಾಡಲಾಗುವುದಿಲ್ಲಾ, ದಯವಿಟ್ಟು ಹೊರಡಿ" ಎಂದು ಹೇಳಿದ. ಹೀಗೆ ಹೇಳಿದ್ದರಿಂದ 2000 ಜನ ಜಾಗ ಖಾಲಿ ಮಾಡುದ್ರು.

ನಮ್ಮ ರಘು ಇದ್ದವನು "ನಂಗೆ JAVA ಬರೋದಿಲ್ಲಾ, ಬರುತ್ತೆ ಅಂತಾ ಹೇಳ್ಕೊಂಡು ಇದ್ರೂ ಕೂಡಾ ಕಳ್ಕೊಳೋದು ಏನೂ ಇಲ್ಲಾ. ಟ್ರೈ ಮಾಡಿ ನೋಡುವಾ" ಅಂತ ಯೋಚಿಸಿ ಅಲ್ಲೇ ಉಳಿದ.

ಬಿಲ್ ಗೇಟ್ಸ್ ಮತ್ತೆ "ಯಾರಿಗೆ ಮಿನಿಮಮ್ 100 ಜನರನ್ನು ಮ್ಯಾನೆಜ್ ಮಾಡಿ ಅನುಭವ ಇಲ್ಲವೊ, ಅವರೂ ಕೂಡಾ ಹೊರಡಬಹುದು" ಅಂದ.

ಇದನ್ನು ಕೇಳಿ ಮತ್ತೆ 2000 ಜನ ಜಾಗ ಖಾಲಿ ಮಾಡುದ್ರು.

ನಮ್ಮ ರಘು ಪುನಃ ಯೋಚಿಸಿದ "ನನ್ನ ಬಿಟ್ಟು ಯಾರನ್ನು ನಾನು ಮ್ಯಾನೆಜ್ ಮಾಡಿ ಮಾಡಿಲ್ಲಾ, ಮಾಡಿದೀನಿ ಅಂತಾ ಹೇಳ್ಕೊಂಡು ಇದ್ರೂ ಕೂಡಾ ಕಳ್ಕೊಳೋದು ಏನೂ ಇಲ್ಲಾ. ಟ್ರೈ ಮಾಡಿ ನೋಡುವಾ". ಹಂಗೆ ಅನ್ಕೊಂಡು ಅಲ್ಲೇ ಉಳಿದ.

ಬಿಲ್ ಗೇಟ್ಸ್ ಮತ್ತೆ " ಮ್ಯಾನೇಜ್ಮೆಂಟ್ ಡಿಪ್ಲೋಮಾ / ಎಂ.ಬಿ.ಎ ಇಲ್ಲದವರೂ ದಯವಿಟ್ಟು ಹೊರಡಿ" ಅಂತ ಹೇಳಿದ.

ಇದನ್ನ ಕೇಳಿ 500 ಜನ ಕಳಚಿಕೊಂಡರು.

ರಘು ಪುನಃ ಯೋಚನೆ ಮಾಡಿದ "ನಾನು ಬಿ.ಇ. ಮುಗ್ಸೋಕ್ಕೆ 7 ವರ್ಷ ತಗೊಂಡಿದೀನಿ, ಎಂ.ಬಿ.ಎ ಇದೆ ಅಂತಾ ಹೇಳ್ಕೊಂಡು ಇದ್ರೆ ಯಾರಪ್ಪನ್ ಮನೆ ಗಂಟೂ ಹೋಗಲ್ಲಾ, ನೋಡಿಯೇ ಬಿಡೋಣಾ" ಅನ್ಕೊಂಡು ಅಲ್ಲೇ ಉಳಿದ.

ಕೊನೆಗೆ ಬಿಲ್ ಗೇಟ್ಸ್ ಹೇಳಿದ "ಸರ್ಬಿಯನ್ ಹಾಗು ಕ್ರೊಯೇಶಿಯನ್ ಭಾಷೆ ಬರದವರು ಹೊರಡಬಹುದು" ಎಂದ.
ಇದನ್ನ ಕೇಳಿ ಮತ್ತೆ 498 ಜನ ಜಾಗ ಖಾಲಿ ಮಾಡುದ್ರು.

ರಘು ಮತ್ತೆ "ಕನ್ನಡ ಮತ್ತೆ ಹರಕು ಮುರಕು ಇಂಗ್ಲಿಷ್ ಬುಟ್ರೆ ನಂಗೆ ಬೇರೆ ಯಾವ ಭಾಷೆನೂ ಬರಲ್ಲ, ಇಲ್ಲಿ ತನಕ ಆಗಿದ್ ಆಗ್ಲಿ ಅನ್ಕೊಂಡು ಇದ್ದೀನಿ, ಈಗ್ಲೂ ಕೂಡ ನೋಡಿಯೇ ಬಿಡೋಣಾ" ಅನ್ಕೊಂಡು ಅಲ್ಲೇ ಉಳಿದ.
ಅವನ ಜೊತೆ ಇನ್ನೊಬ್ಬ ಕಟ್ಟ ಕಡೆಯ ಸ್ಪರ್ಧಿ ಜೊತೆ ಉಳಿದ.

ಇವರಿಬ್ಬರ ಹತ್ರ ಬಿಲ್ ಗೇಟ್ಸ್ ಬಂದು, "ಇಲ್ಲಿ ಬಂದಿದ್ದ 5000 ಜನರಲ್ಲಿ ನೀವಿಬ್ಬರೇ ಎಲ್ಲಾ ಕ್ವಾಲಿಫಿಕೇಶನ್ ಇರೋರು. ನೀವಿಬ್ರೂ ಸರ್ಬ್ - ಕ್ರೊಯೇಶಿಯನ್ ಭಾಷೆಯಲ್ಲಿ ಮಾತಾಡೋದನ್ನ ನಾನು ಕೇಳೋದಕ್ಕೆ ಇಷ್ಟ ಪಡ್ತೀನಿ" ಅಂದಾ.

ಕೂಲಾಗಿ ರಘು ಆ ಇನ್ನೊಬ್ಬನ ಕಡೆ ತಿರುಗಿ "ಏನ್ ಗುರೂ... ಆರಾಮಾ ?" ಅಂತ ಕೇಳಿದ.

ಅದಕ್ಕೆ ಇನ್ನೊಬ್ಬ ರಘುನಾ ನೋಡ್ತಾ "ನನ್ ಮಗನೆ, ಸೂರ್ಯಂಗೇ ಟಾರ್ಚಾ???"

ಕನ್ನಡ ಮಾತಾಡಿ, ಮಜಾ ಮಾಡಿ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೩೩ – ಉಪೇಂದ್ರಾಭಿಮಾನಿ

ಬಹಳ ದಿನಗಳಾದ ಮೇಲೆ ಮತ್ತೊಂದು ಆಟೋ ಅಣಿಮುತ್ತಿನ ಫೋಟೋ ಹಾಕ್ತಾ ಇದ್ದೀನಿ.
ಕಟ್ಟಾ ಉಪೇಂದ್ರಾಭಿಮಾನಿ ಅನ್ಸುತ್ತೆ ಈ ಅಣ್ಣಾ..
ಇವತ್ತು ಬೆಳಿಗ್ಗೆ ತೆಗೆದಿದ್ದು. ಆರ್ ಟಿ ನಗರದ ನಮ್ಮ ಮನೆಯಿಂದ ಹೊರಟಾಗ ಅಲ್ಲಿ ನಂದಿನಿ ಹೋಟೆಲ್ ಮುಂದೆ ಕಂಡಿದ್ದು ಈ ಆಟೋ. ಫಾಲೋ ಮಾಡಿ ಮಾಡಿ, ಕೊನೆಗೂ ಕ್ವೀನ್ಸ್ ರಸ್ತೆಯ ಸಿಗ್ನಲ್ಲಲ್ಲಿ ನಿಂತಾಗ ಫೋಟೋ ತೆಕ್ಕೊಂಡಿದ್ದು.
ಸಿಕ್ಕಾಪಟ್ಟೆ ಕಷ್ಟ ಪಟ್ಟು ತೆಗೆದ ಫೋಟೋಗಳ ಸಾಲಿಗೆ ಇದೂ ಸೇರುತ್ತೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, August 25, 2008

ಈ ಹೆಸರಿನ ಅರ್ಥ ಸ್ವಲ್ಪ ತಿಳಿಸುವಿರಾ ?

ಕಳೆದ ವಾರ ವೀಸಾ ಇಂಟರ್ವ್ಯೂ ಇತ್ತು ಅಂತಾ ಮದ್ರಾಸಿಗೆ ಹೋಗಿದ್ದೆ. ಬೆಳಿಗ್ಗೆ 11 ಕ್ಕೆಲ್ಲಾ ಕೆಲಸ ಮುಗೀತು.
ಕೆಲಸ ಮುಗಿದ ಮೇಲೆ ಏನು ಮಾಡಕ್ಕೆ ತೋಚಲಿಲ್ಲ. ಬೆಂಗಳೂರಿಗೆ ವಾಪಸ್ ಫ್ಲೈಟ್ ಇದ್ದದ್ದು ಸಂಜೆ 5:30 ಗೆ. ಸರಿ ಅಂತಾ ಅಲ್ಲೇ ಸಿಟಿ ನೋಡಕ್ಕೆ ಹೊಂಟ್ವಿ. ಪಾಂಡಿ ಬಜಾರ್ ರಸ್ತೆ ಇದೆ ಟಿ ನಗರದಲ್ಲಿ. ಅಲ್ಲಿ ನಡೆದಾದಬೇಕಾದ್ರೆ ಕಣ್ಣಿಗೆ ಕಂಡಿದ್ದು ಇದು.
ಮಕೇಶ್ ಜೆಂಟ್ಸ್ ಹೇರ್ ಸ್ಟೈಲಿಸ್ಟ ಅಂತೆ.
ಮಹೇಶ್ ಗೊತ್ತು, ಮುಕೇಶ್ ಗೊತ್ತು. ಆದ್ರೆ ಈ ಮಕೇಶ ಅಂದ್ರೆ ಏನಪ್ಪಾ ? ನನಗೆ ತಿಳಿದ ಮಟ್ಟಿಗೆ ತಮಿಳಿನಲ್ಲಿ "ಹ" ಪದಪ್ರಯೋಗ ಹಾಗು ಉಚ್ಛಾರ ಇಲ್ಲಾ. ಅದಕ್ಕೆ ಅವರು "ಹ" ಬದಲಾಗಿ "ಗ" ಉಪಯೋಗಿಸುತ್ತಾರೆ. ಮಹೇಶನನ್ನು "ಮಗೇಶ"ನೆಂದು ಕರೆಯುತ್ತಾರೆ. ಆದರೂ ಇಲ್ಲಿ ಈ ಹೆಸರಿನಲ್ಲಿ ಸ್ವಲ್ಪ ಮಿಸ್ ಹೊಡೀತ ಇದೆ. ಗೊತ್ತಿರೋರು ಬಿಡಿಸಿ ಹೇಳಬಲ್ಲಿರಾ ?


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, August 22, 2008

ಚಿತ್ತಾರ

ಒಡೆದು ಹರಡಿದ ಮನಸ್ಸಿನ ಚೂರುಗಳನ್ನು
ಚಿತ್ತಾರವೆನ್ನಬಹುದೇ ?

ಸಿಂಪ್ಲಿ.. ಒಂದು ಚುಟುಕ / ಕವನ ಬರೆಯಲು ಟ್ರೈ ಮಾಡಿರುವೆ.
ಹಾಗೆ ಸುಮ್ಮನೆ. ಹೆಂಗಿದೆ ?
-------------------------------------------------------------------
ನಿಮ್ಮವನು,.
ಕಟ್ಟೆ ಶಂಕ್ರ

Saturday, August 16, 2008

ದರಿದ್ರ ಜನಗಳ ದರಿದ್ರ ಅಭ್ಯಾಸಗಳು

ದರಿದ್ರ ಅಭ್ಯಾಸಗಳು ಅಂದ್ರೆ ನಾನು ಹೇಳ್ತಾ ಇರೋದು ಕುಡಿತ, ಬೀಡಿ, ಸಿಗರೇಟು, ಜೂಜು ಇತ್ಯಾದಿಗಳ ಬಗ್ಗೆ ಅಲ್ಲಾ. ಇವೆಲ್ಲಾ ಕೆಟ್ಟ ಅಭ್ಯಾಸಗಳು. ನಾನು ಹೇಳ ಹೊರಟಿರುವುದು ದರಿದ್ರ ಅಭಾಸಗಳ ಬಗ್ಗೆ.
ಇದು ನಾನು ನೀವು ಕಂಡ ಹಾಗೆ ಜನರು ರೂಢಿಸಿಕೊಂಡಿರೋ ದರಿದ್ರ ಅಭ್ಯಾಸಗಳು. ಜಾಗದ, ಸುತ್ತಮುತ್ತಲಿನ ಜನರ ಪರಿವೆಯೇ ಇಲ್ಲದಂತೆ ತಮ್ಮ ಪಾಡಿಗೆ ತಮ್ಮ ಈ ಕೆಲ್ಸವನ್ನು ಮುಂದುವರಿಸಿಕೊಂಡು ಹೋಗ್ತಾರಲ್ಲಾ, ಸ್ವಲ್ಪ ಕೂಡಾ ಡೀಸೆನ್ಸಿ, ಕಾಮನ್ ಸೆನ್ಸು ಇಲ್ಲವೇ ? ಇವೇ ಕೆಲವು ದರಿದ್ರ ಅಭ್ಯಾಸಗಳು ಜನರು ರೂಢಿಸಿಕೊಂಡಿರೋವಂಥವು.

೧. ಮೂಗಿನಲ್ಲಿ ಬೆರಳು ತೂರಿಸಿ ಕೆದಕುವುದು - ಏನೋ ಚಿನ್ನ ಸಿಗೋ ಥರಾ ಮೂಗೊಳಗೆ ಅರ್ಧಕ್ಕರ್ಧ ಬೆರಳು ತೂರಿಸಿ ಕೆದಕ್ತಾ ಇರ್ತಾರೆ. ಇನ್ನೂ ಹೊಲ್ಸು ಜನರನ್ನ ನೋಡಿದೀನಿ. ಬಸ್ ಸ್ಟಾಪಿನಲ್ಲಿ, ಬೇರೆ ನಾರ್ವಜನಿಕ ಸ್ಥಳಗಳಲ್ಲಿ ನಿಂತು ಮೂಗಿನಿಂದ ಕೆದಕಿ ತೆಗೆದ ಮೇಲೆ ಎಷ್ಟು ಬಂತು ಅಂತಾ ಬೇರೇ ಬೆರಳನ್ನು ಕೂಲಂಕೂಷವಾಗಿ ಅನಲೈಸ್ ಮಾಡಿ, ಅದನ್ನ ಪಕ್ಕದಲ್ಲಿ ಇರೋ ಸಿಮೆಂಟು ಗೋಡೆಗೋ, ಸ್ಟ್ಯಾಂಡಿಗೋ, ಪಕ್ಕದಲ್ಲಿ ನಿಂತ ಗಾಡಿಗೆ ಒರೆಸುತ್ತಾರೆ. ಮೋಸ್ಟ್ಲಿ ಇದು ಅವರು ಸಿಗ್ನೇಚರ್ ಮಾಡುವ ರೀತಿ ಅನ್ಸುತ್ತೆ.

೨. ಪ್ರಾಣಿ ಹಿಂಸೆ - ಹ್ಹಿಹ್ಹಿಹ್ಹಿ... ಇದರ ಬಗ್ಗೆ ನಾನು ಹೇಳದೇ ಇರೋದೇ ವಾಸಿ ಅನ್ಸುತ್ತೆ. ಆದ್ರೂ ಹೇಳಲೇ ಬೇಕು. ಒಂದು ಕೈ ತಲೆ ಮೇಲೆ, ಇನ್ನೊಂದು ಕೈ ಯಾವಾಗ್ಲೂ ಇನ್ನೊಂದು ಜಾಗದಲ್ಲಿ ಇಟ್ಟುಕೊಂಡು ನಿರಂತರವಾಗಿ ಪ್ರಾಣಿ ಹಿಂಸೆ ಮಾಡ್ತಾನೇ ಇರ್ತಾರೆ. ಇದು ಜಾಸ್ತಿಯಾಗಿ ನಡೆಯುವ ಸ್ಥಳವೆಂದರೆ ಬಸ್ ನಿಲ್ದಾಣ, ಟೀ ಸ್ಟಾಲು, ಒಂದೇ ಜಾಗದಲ್ಲಿ ನಿಂತು ಮೊಬೈಲಲ್ಲಿ ಮಾತಾಡುವಾಗ, ಯಾರಿಗಾದ್ರೂ ಕಾಯುವಾಗ ಇತ್ಯಾದಿ ಇತ್ಯಾದಿ. ಮಠ ಚಿತ್ರದಲ್ಲಿ ಜಗ್ಗೇಶು, ಮಠದ ಮುಂದೆ ಕೂರುವ ಭಿಕ್ಷುಕನಿಗೆ(ಪ್ರಣವ ಮೂರ್ತಿ) ಹೇಳೋ ಡೈಲಾಗು "ಸ್ವಾಮಿ, ಸ್ವಲ್ಪ ನಿಧಾನವಾಗಿ ಕೆರ್ಕೊಳಿ, ಪಾರ್ಟ್ಸು ಕೈಗೆ ಬಂದ್ಬಿಟ್ಟಾವು".

೩. ಘಂಟಾಘೋಷವಾಗಿ ಹೊಯ್ಕೊಳೋದು - ಅಹ್ಹಾ ಸ್ವಾಮಿ.. ಇದಪ್ಪಾ ಮಹಾನ್ ಖರಾಬ್ ಅಭ್ಯಾಸ ಅಂದ್ರೆ. ಯಾರು ಕೇಳಲಿ, ಬಿಡಲಿ, ಎಲ್ರಿಗೂ ಎನೂ, ಎಲ್ಲಾ ಕಡೆಯೂ ತಮ್ಮದೇ ಮಾತು ಎಕೋ ಹೊಡೀತ ಇರ್ಬೇಕು ಅನ್ನೋ ರೀತಿ ಮಾತಾಡ್ತ ಇರ್ತಾರೆ. ಇವಾಗ ಮೊಬೈಲು ಬಂದ ಮೇಲಂತೂ ಇನ್ನೂ ಜಾಸ್ತಿ ಆಗಿದೆ ಈ ಹಾವಳಿ. ಕಿವಿಗೆ ಮೊಬೈಲ್ ಸಿಕ್ಕಿಸ್ಕೊಂಡು, ಆಕಾಶ ನೋಡ್ತಾ ಮಾತಾಡೋ...ಕ್ಷಮಿಸಿ, ಕಿರುಚಾಡೋದು ಇದ್ಯಲ್ಲಾ... ಅಬ್ಬಬ್ಬಾ, ಮೈ ಕೈ ಪರಚಿಕೊಳ್ಳೋ ಹಾಗೆ ಆಗುತ್ತೆ.

೪. ಕಂಡ ಕಂಡ ಕಡೆ ಕ್ಯಾಕರಿಸಿ ಉಗಿಯೋದು. ಇಂಥಾ ದರಿದ್ರ ಮುಂಡೇಮಕ್ಳು ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗಂತೂ ಸಿಕ್ಕಾಪಟ್ಟೆ ಡೇಂಜರಸ್. ನಾನು ಬೈಕಿನಲ್ಲಿ ಆಫೀಸಿಗೆ ಹೋಗುವಾಗ ಎಷ್ಟೋ ಬಾರಿ ಬಸ್ಸಿನ ಕಿಟಕಿಯಿಂದ ಫೈರ್ ಆಗೋ ಮಿಸೈಲಿನಿಂದ ತಪ್ಪಿಸಿಕೊಂಡಿರುವೆ. ಒಮ್ಮೆ ಅಂತೂ ನನ್ನ ಬೈಕಿನ ಮುಂದಿನ ಮಡ್ ಗಾರ್ಡಿನ ಮೇಲೆ ಒಬ್ಬಾತ ಉಗಿದ. ತಕ್ಷಣ ಬಸ್ಸನ್ನು ನಿಲ್ಸಿ, ಆ ನನ್ ಮಗನ್ ಕಪಾಲಕ್ಕೆ ಇಕ್ಕಿ ನಡೆದೆ. ಇನ್ನೂ ಹೊಲ್ಸು ಅಂದ್ರೆ, ಆಟೋನಲ್ಲಿ ಕೂತಿರುವ ಪ್ರಯಾಣಿಕರು, ದ್ವಿಚಕ್ರ ಸವಾರರು, ಕಾರಿನಲ್ಲಿ ಹೋಗೋರು, ಲಾರಿ ಎಲ್ಲಾ.. ರೀತಿಯ ವಾಹನಗಳಿಂದ ಕೂಡಾ ಈ ರೀತಿಯಾದ ಬಾಂಬುಗಳು, ಮಿಸೈಲುಗಳು ಫೈರ್ ಆಗೋ ಚಾನ್ಸುಗಳು ಇರ್ತಾವೆ. ಹುಶಾರಾಗಿ ಓಡಿಸಿ.

೫. ಕಾಲು ಕುಣಿಸೋದು - ಎಲ್ಲೇ ಇರಲಿ, ಯಾರ ಮುಂದೆ ಇರಲಿ, ಕಾಲನ್ನು ಕುಣಿಸುತ್ತಾ ಇರೋದು. ಏನೋ, ಹಾಡು ಕೇಳುವಾಗ, ಡ್ಯಾನ್ಸ್ ನೋಡುವಾಗ ಕಾಲು ಕುಣಿಸೋದು ಸಹಜ. ಅದನ್ನು ಬಿಟ್ಟು, ಕುಳಿತಿರುವ ಎಲ್ಲಾ ವೇಳೆಯಲ್ಲೂ ಕಾಲನ್ನು ಅಡ್ಡಡ್ಡವಾಗಿ, ಮೇಲೆ ಕೆಳಗೆ ಕುಣಿಸೋದು ಯಾವ ತೆರನಾದ ಡೀಸೆನ್ಸಿ ? ನಂಗಂತೂ ಪರ್ಸನಲಿ ಸಿಕ್ಕಾಪಟ್ಟೆ ಮೈ ಉರಿಯುತ್ತೆ ಇದನ್ನು ಕಂಡಾಗ. ದನಗಳ ಗೊರಸಿನಲ್ಲಿ ಹುಳುಗಳು ಮುತ್ತಿಕೊಂಡಾಗ , ಈ ರೀತಿಯಾಗಿ ಕಾಲು ಆಡಿಸುತ್ತಾ ಇರುತ್ತವೆ.

೬. ಸಿಗರೇಟು ಸೇದಿರಪ್ಪಾ, ಸೇದಿ. ಆದ್ರೆ, ನೀವು ಕಾಸು ಕೊಟ್ಟು ಕೊಂಡಿರುವ ಸಿಗರೇಟಿನ ಹೊಗೆಯನ್ನು ಎಲ್ಲರಿಗೇಕೆ ಕೊಡ್ತೀರಾ ? ಸ್ಮೋಕ್ ಮಾಡಬೇಕಾದರೆ, ನಿಮ್ಮ ಸಿಗರೇಟಿನ ಹೊಗೆಯಿಂದ ಅಕ್ಕಪಕ್ಕದವರಿಗೆ ಹಿಂಸೆಯಾಗದ ಹಾಗೆ ನೋಡಿ. ಇನ್ನು ಕೆಲವರು ಇದಾರಪ್ಪ. ರಸ್ತೆಯಲ್ಲಿ, ಫುಟ್ಪಾತಿನಲ್ಲಿ ಬಿರ ಬಿರನೆ ನಡೆಯುತ್ತಾ, ಬಾಯಿಂದ ಹೊಗೆಯನ್ನು ಎಲ್ಲರ ಮುಖಕ್ಕೆ ರಾಚುತ್ತಾ ಇರ್ತಾರೆ.

ನಾವು ಮಾಡುವುದನ್ನೇ ಮಕ್ಕಳೂ ಅನುಸರಿಸುತ್ತವೆ ಹಾಗು ಅನುಕರಣೆ ಮಾಡುತ್ತಾರೆ. ಆದ್ದರಿಂದ ಜನ ಈ ರೀತಿಯ ನಡೆಯುವ ಮುನ್ನ, ಯೋಚನೆ ಮಾಡ್ಲಿ. ಈ ರೀತಿಯ ಅಭ್ಯಾಸಗಳು ಹೇಗೆ ಬೇರೆಯವರಿಗೆ ಮುಜುಗರ, ತೊಂದ್ರೆ, ಇಕ್ಕಟ್ಟು ಉಂಟು ಮಾಡುತ್ತದೆ ಅಂತಾ ಕೂಡ ಯೋಚಿಸಬೇಕು. ಸ್ವಲ್ಪ ಕಾಮನ್ ಸೆನ್ಸ್ ರೂಢಿಸಿಕೊಳ್ಳಿ. ನಿಮಗೂ ಒಳ್ಳೇದು, ನಮಗೂ ಒಳ್ಳೇದು.

ಸಧ್ಯಕ್ಕೆ ಇಷ್ಟೇ ಜ್ನಾಪಕಕ್ಕೆ ಬಂದಿದ್ದು. ಇನ್ನೂ ಕೆಲವು ಸಿಕ್ಕಿದ ಮೇಲೆ ಸೇರಿಸ್ತೀನಿ. ನಿಮಗೆ ಜ್ನಾಪಕಕ್ಕೆ ಬಂದ್ರೆ ಕಮೆಂಟಲ್ಲಿ ಹಾಕಿ. ನಾನು ಸೇರಿಸ್ತೀನಿ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, August 12, 2008

ಆಟೋ ಅಣಿಮುತ್ತುಗಳು - ೩೨ - ಭಯಂಕರ ಭಗ್ನ ಪ್ರೇಮಿ

ಇಟ್ಟಳಮ್ಮ ಇಟ್ಟಳು, ಹೃದಯಕ್ಕೆ ಬೆಂಕಿ ಇಟ್ಟಳು....
ಭಗ್ನ ಪ್ರೇಮಿ ಅನ್ಸುತ್ತೆ ಆಲ್ವಾ ?

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ನಾನೇನು ಅಂತಾ ನಂಗೆ ಗೊತ್ತಾ, ಅಥವಾ ನಿಮ್ಗೆ ಗೊತ್ತಾ ?

ಮಿತ್ರ ಅವಿನಾಶ್ ಪದಕಿ ಕಳಿಸಿದ ಫೋಟೋ.
ತನ್ನ ಬಗ್ಗೆ ತನಗೆ ಗೊತ್ತಿಲ್ಲ ಅಂತಾ ಕಾಣುತ್ತೆ ಈ ಭೂಪನಿಗೆ.
" I KNOW WHAT I AM ?" ಅಂತಾ ಹಾಕಿ ಕ್ವೆಶ್ಚನ್ ಮಾರ್ಕ್ ಹಾಕಿದಾನೆ. ತನ್ನ ಬಗ್ಗೆಯೇ ಕನ್ಫ್ಯೂಶನ್ ಇದೆ.
ನಿಮ್ಗೆ ಈತನ ಬಗ್ಗೆ ಗೊತ್ತಿದ್ರೆ ಹೇಳಿ, ಪಾಪ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ದಯವಿಟ್ಟು ಇದನ್ನು ಇಂಗ್ಲಿಷ್ ನಲ್ಲಿ ಓದಿ

ಹಾಕೊಬಾ ( HAKOBA ) ...
ಇದು ಇಂಗ್ಲಿಷ್ ಪದ, ಇಂಗ್ಲಿಷಲ್ಲೇ ಓದಿ.. ಕನ್ನಡದಲ್ಲಿ ಓದಿದರೆ ಇನ್ನೇನೋ ಅರ್ಥ ಬರುತ್ತೆ.
ಸುಮ್ನೆ ನೋಡಿ, ಮಜಾ ಮಾಡಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, August 11, 2008

ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ

ಚಿತ್ರವೇ ಸಾಕಷ್ಟು ಹೇಳ್ತಾ ಇದೆ.
ನಾನು ಹೇಳೋದು ಏನೂ ಇಲ್ಲಾ ಅನ್ಸುತ್ತೆ ಅಲ್ವೇ ?? ಇವರುಗಳೇ ಹಗಲು ಹೊತ್ತು ಈ ಜಾಗದಲ್ಲಿ ಗಾಡಿ ನಿಲ್ಸಿದರೆ ಫೈನ್ ಹಾಕ್ತಾರೆ.
ಇವತ್ತು ಸಂಜೆ ಜಯಮಹಲ್ ರೋಡಿನಲ್ಲಿ ತೆಗೆದ ಫೋಟೋ.-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೩೧ - ಏನ್ ಹೇಳಾಕ್ಕೆ ಹೊಂಟವ್ನೆ ಈ ಅಣ್ಣಾ?

ಈತ ಏನ್ ಹೇಳಕ್ಕೆ ಹೊರಟಿದ್ದಾನೋ ಗೊತ್ತಿಲ್ಲ. ನಿಮಗೆ ಅರ್ಥ ಆದ್ರೆ ಹೇಳಿ.
ಅಂದಹಾಗೆ ಕಳೆದ ವಾರ ಜಯಮಹಲ್ ರಸ್ತೆಯಲ್ಲಿ ತೆಗೆದ ಫೋಟೋ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೩೦ - ಇವನ ಮನಸ್ಸು ಏನು?

ಇವನ ಮನಸ್ಸು ಏನು ಅಂತಾ ಗೊತ್ತಾದ್ರೆ ಹೇಳಿ.
ಸಮುದ್ರ ಅಂತಾನೆ, ಆಕಾಶ ಅಂತಾನೆ...ಹತ್ತು ಅಂತಾನೆ, ಈಜು ಅಂತಾನೆ.
ಆಫೀಸಿಗೆ ಬರಬೇಕಾದರೆ, ಬ್ರಿಗೆಡ್ ರಸ್ತೆಯ ಇವಾ ಮಾಲ್ ಬಳಿ ಕಂಡಿದ್ದು.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, August 10, 2008

ರಾಜಾರೋಷವಾಗಿ ಮಾಡೋದು ಅಂದ್ರೆ ಇದೇ ಅನ್ಸುತ್ತೆ

ಇದು ಬರೀ ನೋಡೋದು.. ಹೇಳಕ್ಕೆ ಏನೂ ಇಲ್ಲಾ.
ನಿಮ್ಗೆ ಏನನ್ನಿಸುತ್ತೆ ?


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, August 3, 2008

ಆಟೋ ಅಣಿಮುತ್ತುಗಳು - ೨೯ - ಇದರ ಅರ್ಥ ಹೇಳಿ

ಸೋಮಾರಿ ಕಟ್ಟೆ ಬಾಂಧವರಿಗೆ ಒಂದು ರಿಕ್ವೆಸ್ಟ್..
ಇವತ್ತು ಸಂಜೆ ಮಲ್ಲೇಶ್ವರಂ ನಲ್ಲಿ ಆಟೋ ಹಿಂದೆ ಕಂಡಿದ್ದು. ಇದು ಏನು ಅಂತಾ ಗೊತ್ತಾಗಬೇಕು.
ಹದ್ದಿನ ಕಣ್ಣು ಅಂದ್ರೆ ಗೊತ್ತು, ಕಲ್ಲು ಅಂದ್ರೆ ಗೊತ್ತು...
ಆದ್ರೆ ಈ "ಹದ್ದಿನ ಕಲ್ಲು" ಅಂದ್ರೆ ಏನು?
ನಿಮಗೆ ಗೊತ್ತಿದ್ರೆ ದಯವಿಟ್ಟು ತಿಳಿಸಿ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೨೮ - ಬಲಿ ಚಕ್ರವರ್ತಿ

ಇವತ್ತು.. ಜಸ್ಟ್ ಅರ್ಧ ಗಂಟೆ ಮುಂಚೆ ಜಯನಗರದಿಂದ ಮನೆಗೆ ಬರೋ ದಾರೀಲಿ, ಟೌನ್ ಹಾಲ್ ಬಳಿ ಕಂಡ ಆಟೋ ಇದು. ನಾನು ಕಾರ್ ಓಡುಸ್ತಾ ಇದ್ದೆ.. ಇದು ನಂಗೆ ಕಂಡಿದ್ದು ಕೆನರಾ ಬ್ಯಾಂಕಿನ ಮುಂದೆ. ದೇವರ ದಯೆಯೋ, ಪೂರ್ವ ಜನ್ಮದ ಸುಕೃತವೋ ತಿಳಿಯದು...ಸಿಗ್ನಲ್ ಬಿತ್ತು, ತಕ್ಷಣ ಫೋನ್ ಕ್ಯಾಮೆರಾ ಆನ್ ಮಾಡಿ, ನನ್ನ ಹಾಫ್ ಶರ್ಟಿಗೆ (ಅರ್ಧಾಂಗಿ) ಕೊಟ್ಟು ಫೋಟೋ ತೆಗೆಸಿದ್ದು. ಹೆಂಗೇ ???
ಅಣ್ಣಾ ಮಂಡ್ಯದ ಹುಲಿ.. ಮುಟ್ಟಿದ್ರೆ ಬಲಿ ಹಾಕ್ತಾನಂತೆ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, August 2, 2008

ಆಟೋ ಅಣಿಮುತ್ತುಗಳು - ೨೭- ಇಂಡ್ಯ ಮಂಡ್ಯ

ನಮ್ಮ ಸೋಮಾರಿ ಕಟ್ಟೆಯ ಸದಸ್ಯೆ ಕು.ಸೋ. ಲಕ್ಷ್ಮಿ ಯವರು ಕತ್ರಿಗುಪ್ಪೆಯಲ್ಲಿ ತೆಗೆದಿರುವ ಚಿತ್ರ..

ಇವರು ಇದನ್ನು ನನಗೆ ಕಳ್ಸಿ, ನೀವು ಇದನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ ಅಂದ್ರು. ಅವರು ಬರೆದಿರುವ ಈ-ಮೈಲು ಹೀಗಿದೆ :
ನಮಸ್ಕಾರ,
ಕತ್ರಿಗುಪ್ಪೆ ಸರ್ಕಲ್ ನಲ್ಲಿ ತೆಗೆದ ಫೋಟೋ ಇದು. ನನ್ನ ಬ್ಲಾಗಿನಲ್ಲಿ ಹಾಕೋಣಾ ಅಂತಾ ಇದ್ದೆ, ಆದ್ರೆ ನೀವಾಗ್ಲೇ ಆಟೋ ಫೋಟೋಗಳನ್ನ ಹಾಕಿದೀರಿ, ಆದ್ದರಿಂದ ನಿಮಗೆ ಕಳಿಸ್ತಿದೀನಿ. ಇಷ್ಟ ಆದ್ರೆ ಹಾಕಿಬಿಡಿ.
ಲಕ್ಷ್ಮಿಲಕ್ಷ್ಮಕ್ಕೋ... ಅಷ್ಟು ಪ್ರೀತಿಯಿಂದಾ ಕಳ್ಸಿರ್ಬೇಕಾದ್ರೆ ಯಾಕೆ ನನ್ನ ಬ್ಲಾಗಿಗೆ ಹಾಕದೆ ಇರ್ಲಿ ?
ತುಂಬಾ ಧನ್ಯವಾದಗಳು. ಬೈ ದ ವೇ, ನಿಮ್ಮ ಬ್ಲಾಗನ್ನೂ ನೋಡಿದೆ.. ಫಲಕೋತ್ಸವ ಚೆನ್ನಾಗಿದೆ
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ