Friday, June 27, 2008

"ಕಾನೂನಿಗೆ ಕಣ್ಣಿಲ್ಲ" ಅಂದ್ರೆ ಇದೇನಾ ?

ದೀಪದ ಕೆಳಗೆ ಕತ್ತಲೆ ಅನ್ನೋದನ್ನ ಕೇಳಿದೀವಿ. ಆದ್ರೆ, ದೀಪದ ಮೇಲೆ ಕೂಡಾ ಕತ್ತಲೆ ಇಲ್ಲಿದೆ ನೋಡಿ.
ಭ್ರಷ್ಟಾಚಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ ?
"ಕಾನೂನಿಗೆ ಕಣ್ಣಿಲ್ಲ", ನಿಜ, ಆದ್ರೆ ಹೊಟ್ಟೆ, ಬಾಯಿ ಬಹಳ ದೊಡ್ಡದು ಸ್ವಾಮಿ.
ಮಿತ್ರ ಹೇಮಂತ ನಂದಿ ಬೆಟ್ಟದಲ್ಲಿ ತೆಗೆದ ಫೋಟೋ ಇದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಅಭಾಸ ಅಂದ್ರೆ ಇದೆ ಅಲ್ವೇ ?

ಈ ಥರ ಅರ್ಧಂಬರ್ಧ ಅರ್ಥ ಕೊಡೊ ರೀತಿಯ ಜಾಹಿರಾತು ಸಖತ್ ಡೇಂಜರ್ ಆಲ್ವಾ ?
ಬರೀ ಒಂದು ಸೀರೆ ಉಟ್ಟಿರೋ ಹೆಣ್ಣಿನ ಫೋಟೋ ಹಾಕಿ, OPENING SHORTLY ಅಂತ ಕೊಟ್ರೆ, ಏನಂತಾ ಅರ್ಥ ಬರುತ್ತಪ್ಪಾ ? ಶೋರೂಮು ಓಪನ್ ಆಗತ್ತೋ ಅಥವಾ .....
ಇಂಥಾ ಮಂಕು ಮುಂಡೆಮಕ್ಳನ್ನ ಏನನ್ನಬೇಕೋ ?
ಇದು ನನ್ನ ಫ್ರೆಂಡಿನ ಫ್ರೆಂಡು ಹೊಸೂರು ರಸ್ತೆಯಲ್ಲಿ ತೆಗೆದ ಫೋಟೋ ಅಂತೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, June 26, 2008

ಆಟೋ ಅಣಿಮುತ್ತುಗಳು - ೧೯ - ಇದು...ಕರೆಕ್ಟ್ ಮಾತು

ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಹಗುರಾಗಿ ಮಾತನಾಡುವರಿಗೆ ಇದು ಸರಿಯಾದ ಸಂದೇಶ.
ಜೊತೆಗೆ ನಮ್ಮ ನಿರಭಿಮಾನಿ ಕನ್ನಡಿಗರಿಗೂ ಇದು ಎಚ್ಚರಿಕೆಯ ಘಂಟೆ

ENDING ಚೆನ್ನಾಗಿದೆ ಆಲ್ವಾ ?"ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ"

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೧೮ - ಭಾವೈಕ್ಯತೆಯ ಸಂಕೇತ

ಬೆಳಿಗ್ಗೆ ಆಫೀಸಿಗೆ ಬರಬೇಕಾದರೆ ಕ್ವೀನ್ಸ್ ರಸ್ತೆಯಲ್ಲಿ ಕಂಡಿದ್ದು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 23, 2008

ಆಟೋ ಅಣಿಮುತ್ತುಗಳು - ೧೭ - ಶ್ರೀಕಂಠ, ಕಾಯ್ ಕಂಟ

ಇವತ್ತು ಕೆಲ್ಸ ಇತ್ತು ಅಂತಾ ನಾನು ನನ್ನ ಅರ್ಧಾಂಗಿ ಮೈಸೂರಿನಲ್ಲಿ ಇದ್ವಿ. ಕೆಲ್ಸ ಮುಗ್ಸಿ, ವಾಪಸ್ ಬೆಂಗಳೂರಿಗೆ ಹೊರಟಿದ್ವಿ. ಮನೆಯಿಂದ ಹೊರಟಿ, ಶಾಂತಲಾ ಟಾಕೀಸ್ ಸಿಗ್ನಲ್ನಲ್ಲಿ (ಸಿದ್ದಪ್ಪ ಸ್ಕ್ವೇರ್ ಕಡೆಯಿಂದ) ಬರ್ತಾ ಇದ್ವಿ.. ಅವಾಗ ಈ ಆಟೋ ಕಂಡಿದ್ದು.
ಹಾಗೆ ನನ್ನ ಅರ್ಧಾಂಗಿಗೆ ನನ್ನ ಆಟೋ ಫೋಟೋ ತೆಗಿಯೋ ರೀತಿ ಗೊತ್ತಾಯ್ತು.
ಅಂದಹಾಗೆ ಈತ ಮಹಾನ್ ಶಿವಭಕ್ತ ಅನ್ಸುತ್ತೆ ಅಲ್ವಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 18, 2008

ಆಟೋ ಅಣಿಮುತ್ತುಗಳು - ೧೬ - ಬದುಕಿನ ಸತ್ಯ

ಬದುಕಿನ ಸತ್ಯವನ್ನ ಹೀಗೆ ಡಿಫೈನ್ ಮಾಡಿದಾನೆ ಈತ.
ಇವತ್ತು ಬೆಳಿಗ್ಗೆ ಆಫೀಸಿಗೆ ಬರೋವಾಗ, ಬೆಂಗಳೂರು ಡೈರಿ ಹತ್ರ ಕಂಡಿದ್ದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಇವ್ನು ಮಾರಲ್ವಂತೆ... ನಂಗೆ ಬೇಕು. ಏನ್ ಮಾಡ್ಲಿ ?

ನಾನು ಇದನ್ನ ಕೊಳ್ಳಲೇ ಬೇಕು. ಹೆಲ್ಪ್ ಮಾಡಿ.
ನಿನ್ನೆ ಸಂಜೆ ವಿಧಾನ ಸೌಧ ಹತ್ರ ಕಂಡಿದ್ದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, June 17, 2008

ಊಟದ ಕೂಪನ್ ಸಿಕ್ತು

ನಾನು ತೆಗೆದ ಆಟೋ ಅಣಿಮುತ್ತಿನ ಫೋಟೋ, "THE HINDU" ಪೇಪರಿನ ಈ ಶನಿವಾರದ (June 14 2008) ರ "METRO PLUS"ನ "Caught Snapping" ಅಂಕಣದಲ್ಲಿ ಪ್ರಕಟವಾಗಿದೆ.

ಜೊತೆಗೆ ಇಬ್ಬರಿಗೆ "THE SOLITAIRE" ಹೋಟೆಲಿನಲ್ಲಿ ಡಿನ್ನರ್ ಕೂಪನ್ ಸಿಕ್ಕಿದೆ.
ಹೀಗೆ ಕಳಿಸಿ ಅಂತ ಉತ್ಸಾಹ ತೋರಿದ "ರಾಧಿಕ" ಗೆ ತುಂಬಾ ತುಂಬಾ ಥ್ಯಾಂಕ್ಸ್.
ಡಿನ್ನರ್ ಗೆ ಮಾತ್ರಾ ಕರ್ಕೊಂಡು ಹೋಗಕ್ಕೆ ಆಗಲ್ಲಾ. ನನ್ ಹೆಂಡ್ತಿ ಬಿಡ್ಬೇಕಲ್ಲಾ...
ಧನ್ಯವಾದಗಳು
-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

Sunday, June 15, 2008

ಆಟೋ ಅಣಿಮುತ್ತುಗಳು - ೧೫ - ಇಂಗ್ಲೀಷಲ್ಲಿ ಏನೋ ಹೇಳ್ತಾವ್ನೆ ಈ ಅಣ್ಣಾ

ಅದೇನೋ, ಒಸಿ ನೋಡ್ರಪ್ಪ. ಹಾವು, ಹುಡುಗಿ, ಲವ್ವು, ಪಾಯ್ಸನ್ ಅಂತಾ ಏನೇನೋ ಹೆದ್ರುಸ್ತಾ ಇದಾನೆ ಈ ಅಣ್ಣ.
ನನಗಂತೂ ಆ ನಾಲ್ಕು ಪದ ಬುಟ್ರೆ ಬ್ಯಾರೆ ಏನೂ ಅರ್ಥ ಆಗ್ಲಿಲ್ಲ.. ನಿಮ್ಗೆ ಏನಾದ್ರೂ ಅರ್ಥ ಆಗಿದ್ರೆ, ದಯವಿಟ್ಟು ತಿಳ್ಸಿ.
ಶನಿವಾರ ಬೆಳಿಗ್ಗೆ ಆರ್.ಟಿ. ನಗರ ಮೇನ್ ರೋಡಿನಲ್ಲಿ ಇರೋ ನಂದಿನಿ ಹೋಟೆಲ್ ಮುಂದೆ ತೆಗ್ದಿದ್ದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 13, 2008

ಆಟೋ ಅಣಿಮುತ್ತುಗಳು - ೧೪ - ಖುಷಿ ಆಗತ್ತೆ ಇದನ್ನ ನೋಡಿ

ಸಖತ್ ನಿಜ ಇದು....
ಕನ್ನಡದ ಬಗ್ಗೆ ಈ ಕಾಳಜಿ ಎಲ್ಲಾ ಕನ್ನಡಿಗರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು....ಅಲ್ವಾ

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, June 12, 2008

ಆಟೋ ಅಣಿಮುತ್ತುಗಳು - ೧೩ - ದಯವಿಟ್ಟು ಎಬ್ಬಿಸಬೇಡಿ

ಇವನು ಆರಾಮಾಗಿ ರಾಮನಾಗಿಯೇ ಇರ್ಲಿ. ಎಬ್ಬಿಸೋದು ಬೇಡ.

ಇವತ್ತು ಬೆಳಿಗ್ಗೆ ಆಫೀಸಿಗೆ ಬರೋವಾಗ, ಬ್ರಿಗೇಡ್ ರೋಡಿನಲ್ಲಿ ಕಾಣ್ಸಿದ್ದು
ಸ್ವಲ್ಪ TECHNICALLY ADVANCED ಈ ಮನುಷ್ಯ ಅನ್ಸುತ್ತೆ. ಎಲ್ರೂ ಬರೆಸುತ್ತಾರೆ, ಆದ್ರೆ ಇವನು ಪ್ರಿಂಟ್ ತೆಗೆದು ಅಂಟಿಸಿದ್ದಾನೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 11, 2008

ಆಟೋ ಅಣಿಮುತ್ತುಗಳು - ೧೨ - ಫಿಲಂ ಫಿಲಾಸಫಿ

ಬದುಕು ಹಿಂಗಿರಬೇಕಂತೆ.
ನಮ್ಮ " ರಾಜೂ ಈಸ್ ಇನ್ ಲವ್ "
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, June 10, 2008

ಕರೀನಾ ಶಾಹಿದ್ ಬ್ರೇಕ್ ಅಪ್ ಆದಾಗ, ಅವಳನ್ನು ಸರಿ ಮಾಡಿದ್ದು ಇವರೇ !!!

ಗೂಗಲ್ ನಲ್ಲಿ ಹುಡುಕಾಡಬೇಕಾದ್ರೆ ನನ್ನ ಫ್ರೆಂಡಿನ ಫ್ರೆಂಡಿಗೆ ಸಿಕ್ಕಿದ ಫೋಟೋ. ಆಸಕ್ತಿ ಇದ್ದವರು ಒಮ್ಮೆ ಭೇಟಿ ಕೊಡಿ. ಈ ಫೋಟೋವನ್ನು ಯಾರು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದಾರೋ ಗೊತ್ತಿಲ್ಲ. ಸಖತ್ತಾಗಿ ಕಣ್ಣು ಓಡಿಸಿ ಕ್ಲಿಕ್ಕಿಸಿದ್ದಾರೆ. ಅವರಿಗೆ ಧನ್ಯವಾದಗಳು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, June 7, 2008

ಆಟೋ ಅಣಿಮುತ್ತುಗಳು - ೧೧ - ಎಚ್ಚರಿಕೆ

ಲವ್ವು, ಹುಡ್ಗೀರು ಅಂದ್ರೆ ಯದ್ವಾ ತದ್ವಾ ಉರಿ ಅನ್ಸುತ್ತೆ ಇವನಿಗೆ.
ನಿನ್ನೆ ಸಂಜೆ ಒಬ್ಬ ಫ್ರೆಂಡ್ ನ ಕಾಯ್ತಾ ಇರಬೇಕಾದ್ರೆ, ಕೊರಮಂಗಲ ಫೋರಂ ಮುಂದೆ ಕಂಡಿದ್ದು. ಕಾದಿದ್ದೂ ಸಾರ್ಥಕವಾಯ್ತು ಅನ್ನುಸ್ತು

ಅಲ್ಲಾ ಕಣ್ರೀ, ಬರೀ ನಂಗೇ ನಾ ಈ ಥರ ಆಟೋಗಳು ಕಾಣೋದು ??
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 6, 2008

ಆಟೋ ಅಣಿಮುತ್ತುಗಳು - ೧೦ - ಆತ್ಮೊದ್ಧಾರ

ಬರೀ ಕೂಳೆ, ಕಿರಿಕ್ಕು ಬರಹಗಳನ್ನ ನೋಡಿ ನೋಡಿ, ಇದೊಂಥರ ಒಳ್ಳೇ ಫೀಲಿಂಗ್ ಕೊಡುತ್ತೆ ಅಲ್ವಾ?

ಅಣ್ಣಾವ್ರ "ಭಕ್ತ ಕುಂಬಾರ" ಜ್ಞಾಪಕಕ್ಕೆ ಬಂತು ಕಣ್ರೀ ಈ ಬರಹ ನೋಡಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, June 3, 2008

ಆಟೋ ಅಣಿಮುತ್ತುಗಳು - ೯ - ನನಗೆ ಮಾತ್ರಾ ಹೀಗೇನಾ ?

ಟೋಟಲಿ CONFUSED ಪ್ರೇಮಿ

ಕ್ವೀನ್ಸ್ ರೋಡಿನಲ್ಲಿ ನಿನ್ನೆ ಸಂಜೆ ತೆಗೆದಿದ್ದು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 2, 2008

ಆಟೋ ಅಣಿಮುತ್ತುಗಳು - ೮ - ಕಾಣಿಕೆ

ಇದರ ಬಗ್ಗೆ ಹೇಳೋಕ್ಕೆ ಏನೂ ಇಲ್ಲಾ... ಆನಂದ ರಾವ್ ಸರ್ಕಲ್ ನಲ್ಲಿ ಕಂಡದ್ದು,
ನೆನಪಿರಲಿ.....

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ