Tuesday, August 28, 2007

ಬರೆಯೋದಕ್ಕೆ ಇತ್ತೀಚಿಗೆ ಯಾಕೋ ಸರಕು ಸಿಗ್ತಾ ಇಲ್ಲಾ..

ಮಿತ್ರರಿಗೆ ನಮಸ್ಕಾರ.

ಇವಾಗಿವಾಗ ಸ್ವಲ್ಪ ಸೋಮಾರಿ ಆಗಿದೀನಿ

ಯಾಕೋ ಏನೋ, ಇತ್ತೀಚಿಗೆ ಬರೆಯೋದಕ್ಕೆ ಸರಿಯಾದ TOPIC ಸಿಗ್ತಾ ಇಲ್ಲ..
ಸ್ವಲ್ಪ ದಿನ, ನನ್ನ ಮಾಮೂಲ್ ಹರಟೆ ಶುರು ಮಾಡ್ತೀನಿ..

--------------------------------------------------------------------
ನಿಮ್ಮವನು,

ಕಟ್ಟೆ ಶಂಕ್ರ

Wednesday, August 8, 2007

ಇದೆಂಥಾ ವಿಪರ್ಯಾಸ ??ನಿನ್ನೆ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ.
ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ..
START SPORTSನಲ್ಲಿ WWE (ಕುಸ್ತಿ) ಬರ್ತಾ ಇತ್ತು. ಧಡೀ ನನ್ ಮಕ್ಳು ಕಿರುಚಾಡಿ ಕೂಗಾಡೋದನ್ನ ನೋಡಿದೆ (ಹಂಗೆ ಪಕ್ಕದಲ್ಲಿ ನಿಂತ್ಕೊಳೋ ಮಸ್ತ್ ಮಸ್ತ್ ಫಾರಿನ್ ಬೇಬ್ ಗಳ್ನ ಹೆಂಡ್ತಿ ಮನೇಲಿ ಇಲ್ದೇ ಇರೋ ಟೈಂನಲ್ಲಿ ನೋಡ್ಕೊಂಡು ಬಿಡೋಣ ಅಂತ ಅನ್ಕೊಂಡು ನೋಡಕ್ಕೆ ಶುರು ಮಾಡ್ದೆ).

ಒಬ್ಬ ಇಂಡಿಯನ್ ಕುಸ್ತಿಪಟು, ಹೆಸರು ಕಾಳಿ. ಅಜಾನುಬಾಹು, ಅನಾಮತ್ತು 7 ಅಡಿ ಇದಾನೆ. ಒಂದು ಚಾಂಪಿಯನ್ ಶಿಪ್ ಗೆದ್ದಿದ್ದ. ಅವನ ಮ್ಯಾನೇಜರ್ ಕೂಡಾ ಓರ್ವ ಅಮೇರಿಕ ಸಂಜಾತ ಭಾರತೀಯ.

ಕಾಳಿ ಗೆದ್ದ ಮೇಲೆ, ರಿಂಗ್ ಒಳಗೆ ಪ್ರಶಸ್ತಿ ಕೊಟ್ಟ ಮೇಲೆ ಕಾಳಿಯ ಮ್ಯಾನೇಜರ್ ಅವನನ್ನು ಇಂದ್ರ, ಚಂದ್ರ, ದೇವೇಂದ್ರ ಅಂತೆಲ್ಲ ಹೊಗಳಿ, ಬರೀ ಅಮೇರಿಕನ್ ಕುಸ್ತಿಪಟುಗಳು ಮಾತ್ರ ಗೆಲ್ತಾ ಇದ್ದ ಪಂದ್ಯದಲ್ಲಿ ಇವನು ಗೆದ್ದಿದಾನೆ, ಭಾರತದ ಹೆಸರು ಮೇಲೇರಿಸಿದ್ದಾನೆ... (ಇದಾದ ಮೇಲೆ ಅವನು ಹೇಳಿದ್ದು ಕೇಳಿ ನಂಗೆ ಅವನ ಮಾತು ಕೇಳಿ ಉರಿ ಕಿತ್ಕೊಂಡಿದ್ದು). "ಇವತ್ತು ಈ ಗೆಲುವಿನಿಂದ, ಕಾಳಿಯು ಭಾರತೀಯ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರುತ್ತನೆ..ಮಹಾತ್ಮ ಗಾಂಧಿ, ಭಗತ್ ಸಿಂಗ್, ಮದರ್ ತೆರೆಸಾ ಮುಂತಾದವರುಗಳ ಜೊತೆಗೆ ಇವನ ಹೆಸರೂ ಸೇರುತ್ತದೆ".

ಸರಿ, ಕಾಳಿಯೇನೋ ಗೆದ್ದ.. ಆದ್ರೆ ಆ ಅಮೇರಿಕನ್ ಜನಗಳು ಆ ಕುಸ್ತಿಯನ್ನ ನೋಡಲು ಬಂದವರಿಗೆ ಅಪ್ಪಿ ತಪ್ಪಿ ಸ್ವಲ್ಪ ನಮ್ಮ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಗೊತ್ತಿದ್ರೆ, ಅವರು ನಮ್ಮ ದೇಶದ ಜನರ ಆಲೋಚನಾಶಕ್ತಿಯ ಬಗ್ಗೆ ತಿ* ಬಡ್ಕೊಂಡು ನಗೋದಿಲ್ವಾ ??
ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಿಸಲು ಅವನೇನು ಅಂಥಾದ್ದನ್ನ ಕಿತ್ತಿ ಹಾಕಿದ್ದು ?

ಇನ್ನು ನಮ್ಮ ಅನಿವಾಸಿ ಭಾರತೀಯರು (ABCD - Abroad Born Confused Desi's) ಅವರಿಗೆ ಭಾರತದ ಬಗ್ಗೆ ಇರೋ ಅರಿವು ಎಷ್ಟು ಅಂತ ನಾನೇನು ಹೇಳಬೇಕಾಗಿಲ್ಲ (ಎಲ್ಲಾ ಅನಿವಾಸಿ ಭಾರತೀಯರು ಹಾಗೆ ಅಲ್ಲಾ, ಕೆಲವರಿಗೆ ಭಾರತದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಚರಿತ್ರೆ ಬಗ್ಗೆ ಇರುವ ಪ್ರೌಢಿಮೆ ಅಪಾರವಾದದ್ದು). ಆದರೆ WWE ಕಾಳಿಯ ಮ್ಯಾನೇಜರ್ ಥರದ ಅನಿವಾಸಿ ಭಾರತೀಯರು ಪಾಶ್ಚಾತ್ಯರ ಮುಂದೆ ನಮ್ಮ ದೇಶದ ಚರಿತ್ರೆ ಹಾಗು ಮಹಾನ್ ವ್ಯಕ್ತಿಗಳನ್ನು ನಗೆಪಾಟಲು ಮಾಡ್ತಾ ಇದಾರೆ.

ಇದನ್ನೇ ವಿಪರ್ಯಾಸ (IRONY) ಅನ್ನೋದು.

-------------------------------------------------------------------------------------

ನಿಮ್ಮವನು

ಕಟ್ಟೆ ಶಂಕ್ರ

Monday, August 6, 2007

ಸೂಪರ್ ಜೋಕು... ನಕ್ಕಿಬಿಡಿ

ಒಮ್ಮೆ ವಾಜಪೇಯಿ ಹಾಗು ಜಾರ್ಜ್ ಬುಷ್ ಬಾರಿನಲ್ಲಿ ಕೂತು ಮಾತಡ್ತಾ ಇದ್ರಂತೆ

ಅವಾಗ ಒಬ್ಬ ಬಾರಿನೊಳಗೆ ಬಂದು ಬಾರ್ ಟೆಂಡರ್ ಹತ್ರ " ಅವ್ರು ವಾಜಪೇಯಿ ಮತ್ತು ಜಾರ್ಜ್ ಬುಷ್ ಅಲ್ವಾ ?" ಅಂತ ಕೇಳುದ್ನಂತೆ.

ಅದಕ್ಕೆ ಬಾರ್ ಟೆಂಡರ್ "ಹೌದು ಕಣಯ್ಯಾ, ಅದು ಅವ್ರೇ" ಅಂದ.

ಆ ಮಾನವ ಅವ್ರಿಬ್ರ ಹತ್ರ ಹೋಗಿ "ಹೈ, ಇಲ್ಲಿ ಏನ್ ಮಾಡ್ತಾ ಇದೀರಾ ?" ಅಂತ ಕೇಳ್ದ.

ಬುಷ್ : "WORLD WAR 3ಕ್ಕೆ ಪ್ಲಾನ್ ಮಾಡ್ತಾ ಇದೀವಿ"

ಅವನು : "ನಿಜ್ವಾಗ್ಲೂ ?? ಅವಾಗ ಏನಾಗತ್ತೆ ?"

ವಾಜಪೇಯಿ : "WELL, ನಾವು 13 ಕೋಟಿ ಪಾಕಿಸ್ತಾನಿಯರನ್ನ ಹಂಗೆ ಒಬ್ಬ ಸೈಕಲ್ ರಿಪೇರಿ ಮಾಡೋನ್ನ ಫಿನಿಶ್ ಮಾಡ್ತೀವಿ"

ಅವನು (ಫುಲ್ಲ್ ಗಾಬ್ರಿ ಆಗಿ) : " ಏನು ? ಸೈಕಲ್ ರಿಪೇರಿ ಮಾಡೋನ್ನ ಸಾಯಿಸ್ತೀರಾ ?"

ವಾಜಪೇಯಿ ಬುಷ್ ಕಡೆ ತಿರುಗಿ : " ನಾನ್ ಅವಾಗ್ಲೇ ಹೇಳ್ದೆ ತಾನೆ ? 13 ಕೋಟಿ ಪಾಕಿಸ್ತಾನಿಗಳ ಬಗ್ಗೆ ಯಾರೂ ಕೇರ್ ಮಾಡಲ್ಲಾ ಅಂತಾ..."

---------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

ಸ್ನೇಹಿತೆ ಪವಿತ್ರಾ ಈ-ಮೇಲ್ ನಲ್ಲಿ ಕಳ್ಸಿದ್ದು.. ನಾನು ಕನ್ನಡೀಕರಣ ಮಾಡಿದ್ದು.

Saturday, August 4, 2007

ಕಭಿ ಅಲ್ ವಿದಾ ನಾ ಕೆಹೆನಾ....
ಆಗಸ್ಟ್ 4. ಕಿಶೋರ್ ಕುಮಾರ್ ನ ಜನ್ಮದಿನ...
ಜಗತ್ತು ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ, ಕಲಾವಿದ, ಎಲ್ಲಕ್ಕಿಂತ ಮೇಲಾಗಿ ಅತ್ಯುತ್ತಮ ಹಾಗು ಭಾವನಾತ್ಮಕ ಗಾಯಕ.

ಕಿಶೋರ್ ದಾ - ನಿನಗೆ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿ.

Friday, August 3, 2007

ಇಂಥವರಿಗೆ ಏನಂತೀರಿ ?

"ABCD" ಚಿತ್ರವು ಶತದಿನೋತ್ಸವ ಆಚರಿಸಲೆಂದು ಹಾರೈಸುವ -

"ಮೇಘಾಸ್ಟಾರ್ ಅಭಿಮಾನಿಗಳ ಸಂಘ" (ಅದೇನು ಮೆಗಾಸ್ಟಾರೋ, ಅಥವಾ ಮೇಘಾಸ್ಟಾರೋ ?? ಅವನೇನು ಮೋಡದ ಸ್ಟಾರಾ ?)
ಯಾವ ಚಿತ್ರಮಂದಿರವಾಗಲೀ, ಟ್ರಾಫಿಕ್ ಸಿಗ್ನಲ್ ಆಗಲಿ ಈ ಥರ ಕಟೌಟ್ ಗಳು ಇವಾಗ ಸರ್ವೇ ಸಾಮಾನ್ಯ.

ಜನರಲ್ಲಿ ಇತ್ತೀಚಿಗೆ ಈ ಪೋಸ್ಟರ್ ತೆವಲು ಸಖತ್ತಾಗಿ ತಲೆಗೆ ಹತ್ತಿದೆ. ಯಕ್ಕಾಚಿಕ್ಕಿ ಚೀಪ್ ಆಗಿ ಪ್ರಿಂಟ್ ಮಾಡಿ ಕೊಡುವ ಪ್ರಿಂಟರ್ ಗಳು, ಸದ್ದಿಲ್ಲದೆ ರಾತ್ರೋರಾತ್ರಿ ಗೋಡೆ, ಲೈಟ್ ಕಂಬ ಏರುವ ಪೋಸ್ಟರ್ ಗಳು ನಿಜವಾದ ಅರ್ಥದಲ್ಲಿ ಮೊದಲೇ ಅತಿಯಾದ ಟ್ರಾಫಿಕ್, ನಾಯಿಕೊಡೆಯಂತೆ ತಲೆ ಎತ್ತಿರುವ ಅಪಾರ್ಟ್ ಮೆಂಟ್, ಬಿಲ್ಡಿಂಗ್ ಗಳು, ಸ್ಲಮ್ ಗಳಿಂದ ಅಂದ ಕಳೆದುಕೊಳ್ತಾ ಇರೋ ಬೆಂಗಳೂರಿಗೆ ಇನ್ನೂ ಸಾಥ್ ಕೊಡ್ತಾ ಇವೆ.

"ನಮ್ಮ ನೆಚ್ಚಿನ ನಾಯಕ , ದೀನ ಬಂಧು, ಯುವಕರ ಆಶಾಕಿರಣ ಶ್ರೀ.XYZ ಇನ್ನೂ ನೂರು ವರ್ಷ ಬಾಳಲಿ ಎಂದು ಹಾರೈಸುವ" -
ABC, 123 ವಾರ್ಡ್, ಬೆಂಗಳೂರು.

ಇವನು ಈ ಪೋಸ್ಟರ್ ಹಾಕಿಸದೆ ಇದ್ದಿದ್ರೆ ಅವನ "ಹಚ್ಚುಮೆಚ್ಹಿನ ನಾಯಕ" ಏನು ಅವತ್ತೇ ನೆಗೆದು ಬೀಳ್ತಿದ್ನಾ ??

ಇನ್ನೊಂದು ಪೋಸ್ಟರ್ ನಲ್ಲಿ "ನಮ್ಮ ನೆಚ್ಚಿನ ನೇತಾರ" ಅನ್ನುವ ಬದಲಾಗಿ "ನಮ್ಮ ಅಚ್ಚುಮೆಚ್ಚಿನ ನೇಕಾರ" ಅಂತ ಹಾಕಿದ್ರು..

ಇನ್ನು ಕೆಲವು ಜನರು ಈ ಪೋಸ್ಟರ್ ಗೆ ಪೋಸ್ ಕೂಡಲೆಂದೇ ಹುಟ್ಟಿರ್ತಾರೋ ಏನೋ...ಒಂದೊಂದು ಮೂತಿಗಳೂ ಅಬ್ಬಬ್ಬಾ...ಅವ್ರಿಗೆ ಏನು ಅಷ್ಟೊಂದು ಪ್ರಚಾರಗ ತೆವಲಾ ??
ಇನ್ನು ಮರಿ ಪುಢಾರಿಗಳು....ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ SO CALLED ಯುವ ನೇತಾರರು.. ಅವರು ಹಾಕಿರುವ ಬಟ್ಟೆ, ಕೈಗೆ, ಕತ್ತಿಗೆ, ಬೆರಳುಗಳಿಗೆ.. ಅಬ್ಬಬ್ಬಾ... ಕನಿಷ್ಟಪಕ್ಷ ಅರ್ಧ ಕಿಲೋ ಚಿನ್ನ ಇರುತ್ತೆ..ಅದರ ಮೇಲೆ ಅಂಗಿಯ 4 ಗುಂಡಿ ಬಿಚ್ಹಿ ಅವರ ಕತ್ತಿನಲ್ಲಿ ಇರುವ ಹೆಬ್ಬೆರಳು ಗಾತ್ರದ ಚೈನಿನ ಪ್ರದರ್ಶನ..ಅವರೇನು ತಮ್ಮ ಬಳಿ ಇರುವ ಚಿನ್ನದ ಪ್ರದರ್ಶನಕ್ಕೆ ಈ ಥರ ಪೋಸ್ಟರ್ ಹಾಕಿಸ್ತಾರಾ ಎನೋ ಅಂತ ಅನುಮಾನ ಬರುತ್ತೆ.

ಇನ್ನು ಕೆಲವರು ಈ ತೀಟೆಯ ಅತಿರೇಕಕ್ಕೆ ಹೋಗಿದಾರೆ.. ಮನೆ ಮಟ್ಟಿಗೆ ನಡೆಯುವ ಮಗುವಿನ ನಾಮಕರಣ, ಹುಟ್ಟಿದಹಬ್ಬ, ಚೌಲ, ಲಗ್ನಪತ್ರಿಕೆ, ಮದುವೆ ಇತ್ಯಾದಿ ಸಮಾರಂಭಗಳಿಗೆ ಅವರ ಬೀದಿ ಮತ್ತು ಮೇಯ್ನ್ ರೋಡಿನಲ್ಲಿ ಭರ್ಜರಿಯಾಗಿ ಪೋಸ್ಟರ್ ಹಾಕ್ತಾರೆ..
ಈಜನರ ತೆವಲು ಇನ್ನೂ ಎಷ್ಟು ಅತಿರೇಕಕ್ಕೆ ಹೋಗುತ್ತೋ, ಕಾದು ನೋಡಬೇಕು.

ಬೆಂ ನ ಪ್ರಾ (ಬೆಂಗಳೂರು ನಗರ ಪ್ರಾಧಿಕಾರ) ಈ ನಿಟ್ಟಿನಲ್ಲಿ ಬಿಗಿಯಾದ ಕಾನೂನು ಆದೇಶ ತರಬೇಕು.
ಮು.ಮಂ. ಕುಮಾರಣ್ಣ ಕೂಡಾ ಹೆಚ್ಹುತ್ತಿರುವ ಹಾಗು ಹಬ್ಬುತ್ತಿರುವ ಪೋಸ್ಟರ್ ಹಾವಳಿ ಕುರಿತು ಒಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು, ಹಾಗೆಯೇ ಸದನದಲ್ಲಿ ಈ ಕುರಿತು ಸಿಡಿಮಿಡಿಗುಟ್ಟಿದ್ದರು. ಪ್ರಾಧಿಕಾರಕ್ಕೂ ಇದರ ಬಗ್ಗೆ ತೀವ್ರ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರು..
ಅಂದ್ರೂ ಕೂಡಾ ಏನೂ ಉಪಯೋಗವಾಗಲಿಲ್ಲ..

ಇನ್ನೂ ಬರೆಯುವುದಕ್ಕೆ ಬೇಕಾದಷ್ಟಿದೆ.. ಅದನ್ನು ಮುಂದಿನ ಬಾರಿ ಫೋಟೋ ಸಮೇತ ಹಾಕ್ತೀನಿ..

ವಿ.ಸೂ : ನಿಮ್ಮ ಅನಿಸಿಕೆಗಳು ಬಹಳ ಅವಶ್ಯಕ.

-------------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

Wednesday, August 1, 2007

ಮಾತು, ಸಮಯ, ಸಂದರ್ಭ....

"ಏನಮ್ಮಾ ಸಮಾಚಾರ, ತಿಂಡಿ, ಕಾಫಿ ಆಯ್ತಾ ??"...

ನನ್ನದೇ ಲೋಕದಲ್ಲಿ, ಜಲಬಾಧೆ ತೀರಿಸುತ್ತಾ, ಆನಂದ ಅನುಭವಿಸುತ್ತಾ ನಿಂತಿದೀನಿ...

ಯಾವುದಪ್ಪಾ ಈ VOICEಉ ಅಂತ ತಿರುಗಿ ನೋಡ್ತೀನಿ...ನನ್ನ Colleague..

ಅದೂ ಎಲ್ಲಿ ?? ಆಫೀಸಿನ ಟಾಯ್ಲೆಟ್ಟು... ತಿಂಡಿ, ಕಾಫಿ ಆಯ್ತಾ ಅನ್ನೋ ಪ್ರಶ್ನೆ ಕೇಳಕ್ಕೆ ಬೇರೆ ಜಾಗ ಸಿಗ್ಲಿಲ್ವಾ ಬಡ್ಡಿ ಮಗಂಗೆ ??

ಇನ್ನೂ ಖರಾಬ್ ಆಗಿ ನಡೆದ ಘಟನೆ ಅಂದ್ರೆ, ನಮ್ಮ ಕಂಪೆನಿಯ ಪಾರ್ಟಿಯಲ್ಲಿ, ಸಿಕ್ಕಾಪಟ್ಟೆ ತಿಂದು ಅದರ ಬಾಧೆ ತೀರಿಸೋಣ ಅಂತ
ಆ ಹೋಟೆಲ್ ನ ಟಾಯ್ಲೆಟ್ಟಿಗೆ ಹೋದೆ...ಕೆಲಸ ಸಾಂಗವಾಗಿ ಮುಗಿಸಿದೆ...
ಬಂದು ಸಿಂಕಿನಲ್ಲಿ ಕೈ ತೊಳೀತಾ ನಿಂತಿದೀನಿ...ನಮ್ಮ ಒಬ್ಬ ಮ್ಯಾನೇಜರ್ ಕೂಡಾ ಬಂದ್ರು...
ನನ್ನ ಮುಖ ನೋಡಿ ಏನು ಅನ್ನುಸ್ತೋ ಏನೋ..."ಊಟ ಆಯ್ತಾ ??" ಅಂತಾನಾ ಕೇಳೋದು ??


ನಾನ್ ಕೂಡಾ ಒಮ್ಮೆ ಈ ಥರಾ ಖರಾಬ್ ಡೈಲಾಗ್ ಹಾಕಿದ್ದೆ...
ನಾನು ಮುಂಚೆ ಬಾಡಿಗೆಗೆ ಇದ್ದ ಮನೆ 1st ಫ್ಲೋರ್ ನಲ್ಲಿ ಇತ್ತು. ಮನೆ ಮಾಲೀಕರು ಗ್ರೌಂಡ್ ಫ್ಲೋರ್ ನಲ್ಲಿ ಇದ್ದದ್ದು..
ಗೇಟ್ ತೆರೆದು ಎರಡು ಹೆಜ್ಜೆಯಲ್ಲಿ, ಓನರ್ ಮನೆಯ ಪಾಯಖಾನೆ..

ಒಂದು ದಿನ ಸಂಜೆ, ಕೆಲಸ ಮುಗಿಸಿ ಮನೆಗೆ ಬಂದು ಗೇಟ್ ತೆಗೆದು ಒಳಗೆ ಬಂದೆ, ಟಾಯ್ಲೆಟ್ ಇಂದ ಮನೆ ಓನರ್ ಹೊರಗೆ ಬಂದ್ರು.
ನಾನು ಏನೋ ದೊಡ್ಡದಾಗಿ ಕುಶಲವೇ, ಕ್ಷೇಮವೇ ಅಂತ ಕೇಳೋ ಹಾಗೆ

ನಾನು : "ನಂಸ್ಕಾರ ಸಾ...."
ಮ.ಮಾ : ಒಂದು ಕೈಲಿ ಚೊಂಬು, ಇನ್ನೊಂದು ಕೈಲಿ ಲುಂಗಿ BALANCE ಮಾಡ್ತಾ ಒಂದು ACCEPTANCE SMILE ಕೊಟ್ರು..
ನಾನು : (ಬೇರೆ ಏನೂ ಮಾತಾಡಕ್ಕೆ ಹೊಳಿಯದೆ) "ಊಟ ಆಯ್ತಾ ಸಾ....???"


ಮ.ಮಾ ಅವತ್ತು ಖರಾಬ್ ಆಗಿ ಗುರಾಯ್ಸಿ ಮಾತಾಡದೆ ಹೋಗಿದ್ದು.. ಮನೆ ಖಾಲಿ ಮಾಡಬೇಕಾದ್ರೆ ಮತ್ತೆ ADVANCE ಹಣ ವಾಪಸ್ ಇಸ್ಕೊಬೇಕಾದ್ರೆ ಮಾತ್ರ 4 ಮಾತು ಆಡಿದ್ದು...

ಏನೆಲ್ಲಾ ಅವಾಂತರ ಆಗತ್ತೆ.. ಶಿವ ಶಿವಾ...


ನಿಮ್ಮವನು,

ಕಟ್ಟೆ ಶಂಕ್ರ