Wednesday, June 27, 2012

ಆಟೋ ಅಣಿಮುತ್ತುಗಳು - ೧೧೧ - ಮರೆಯಾಗಿ ಹೋದ ಪಾರಿವಾಳ

ಬಹಳ ದಿನವಾದ ಮೇಲೆ ಮತ್ತೊಂದು ಅಣಿಮುತ್ತು ಹಾಕ್ತಾ ಇದ್ದೀನಿ. ಈ ಅಣಿಮುತ್ತಿನ ಸಂಖ್ಯೆಗೂ ಈ ಆಟೋ ಅಣ್ಣನ ಹೇಳಿಕೆಗೂ ಎಂಥಾ ಸ್ವಾಮ್ಯ ಇದೆ ಅಲ್ವೇ? ಈ ಫೋಟೋ ತೆಗೆದದ್ದು ಎಲ್ಲಿ ಅಂತಾ ಮರೆತುಹೋಗಿದೆ. ಅದೇನೋ ಬಿಡಿ ಪಾಪ, ಈ ಅಣ್ಣನ ಪಾರಿವಾಳ ಮರೆಯಾಗಿ ಹೋಯ್ತು ಅನ್ನೋ ದುಃಖದಲ್ಲಿ ಈತ ಇದ್ದಾನೆ. ಸುಮ್ನೆ ಕೇಳಿ ಮತ್ತೂ ಬೇಜಾರ್ ಮಾಡೋದು ಬೇಡ

ಕೋಟಿ ಕಣ್ಣುಗಳಿಗೆ ಮರೆಯಾಗಿ ಹೋದ ಪಾರಿವಾಳ
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

Shree said...

ಇದು ಡಾ|ರಾಜಕುಮಾರ್ ಅವರ ಬಗ್ಗೆ ಬರೆದಿರಬಹುದಾ? ಅಣ್ಣಾವ್ರ 'ಕಸ್ತೂರಿ ನಿವಾಸ' ಚಿತ್ರದಲ್ಲಿ ಬಳಸಿರುವ ಪಾರಿವಾಳಕ್ಕೆ ಅಣ್ಣಾವ್ರನ್ನು ಸಮೀಕರಿಸಿ ಬರೆದಿರಬಹುದು ಅನ್ನಿಸುತ್ತೆ. ಅವರ ಅಭಿಮಾನಿ ದೇವತೆಗಳ ಕೋಟಿ ಕೋಟಿ ಕಣ್ಣುಗಳಿಂದ ದೂರವಾದರೂ ಜನರ ಮನಸ್ಸಿನ ದೇಗುಲದಲ್ಲಿ ಶಾಶ್ವತವಾಗಿ ನಿಂತ ಡಾ|ರಾಜಕುಮಾರ್ ಅವರಿಗೆ ಅವರ ಅನಾಮಧೇಯ ಅಭಿಮಾನಿಯ ಆತ್ಮೀಯ ನುಡಿ ಕಾಣಿಕೆಯಾಗಿರಬಹುದು.

ushodaya said...

enidara bhaavaarthaa?