ಮೊಬೈಲು ಫೋನುಗಳ ಆಗಮನದಿಂದ ನಮ್ಮ ಜೀವನದಲ್ಲಿ ನಡೆವ ಆಭಾಸಗಳು ಹಲವಾರು. ಇದರಲ್ಲಿ ಕೇವಲ ಒಂದೇ ಒಂದು ಘಟನೆಯ ವ್ಯಾಖ್ಯೆ ಕೊಡ್ತಾ ಇದ್ದೀನಿ. ಕೆಲವು ಜನರು ಅತೀವ ಭಕ್ತಿಯ (???) ಪ್ರದರ್ಶನಕ್ಕಾಗಿ ತಮ್ಮ ಮೊಬೈಲು ಫೋನುಗಳಲ್ಲಿ ದೇವರ ನಾಮ, ಶ್ಲೋಕ, ಕೀರ್ತನೆಗಳನ್ನು ರಿಂಗ್-ಟೋನಾಗಿ ಅಳವಡಿಸಿಕೊಳ್ತಾರೆ. ಹಲವಾರು ಸಂದರ್ಭಗಳಲ್ಲಿ ಯಾವ ರೀತಿ ಆಭಾಸ ಉಂಟುಮಾಡುತ್ತದೆ ಎಂದರೆ, ಯಪ್ಪಾ!!!೧. ಶೌಚಾಲಯದಲ್ಲಿ ದೇಹಬಾಧೆ ತೀರಿಸಿಕೊಳ್ಳಬೇಕಾದರೆ "ನಮಃ ಶಿವಾಯ ಓಂ ನಮಃ ಶಿವಾಯ, ಹರಹರ ಬೋಲೋ ನಮಃ ಶಿವಾಯ"
೨. ಬಾರಿನಲ್ಲಿ ಕಂಠಪೂರ್ತಿ ಕುಡಿಯುವಾಗ "ಓಂ ಸಾಯಿ ನಮೋ ನಮಃ, ಜೈ ಜೈ ಸಾಯಿ ನಮೋ ನಮಃ, ಸದ್ಗುರು ಸಾಯಿ ನಮೋ ನಮಃ..."
೩. ಹುಡುಗಿ ಜೊತೆ ಚೆಲ್ಲು ಚೆಲ್ಲಾಗಿ ಸಲ್ಲಾಪ ನಡೆಸುವಾಗ "ಗಣನಾಯಕಾಯ ಗಣದೆವತಾಯ ಗಣಾಧ್ಯಕ್ಷಾಯ ಧೀಮಹಿ..."
ಕೇವಲ ಈ ಮೂರು ಸಂದರ್ಭಗಳನ್ನು ಹೇಳಿದ್ದಕ್ಕೆ ಓದುವವರಿಗೆ ಯಾವ ರೀತಿಯಾಗಿ ಮುಜುಗರವಾಗಬಹುದು ಎಂದು ನನಗೆ ಗೊತ್ತು. ಆದರೂ ಕೂಡಾ ಇದನ್ನು ಬರೆಯುತ್ತಿರುವೆ. ನನ್ನ ವಿನಂತಿ ಇಷ್ಟೇ, ದೇವರ ಭಕ್ತಿ ಇರಲಿ. ಭಕ್ತಿ ಮನಸ್ಸಿನಲ್ಲಿ ಇರಬೇಕೆ ಹೊರತು ಇನ್ನೊಬ್ಬರ ಮುಂದೆ ಪ್ರದರ್ಶನಕ್ಕಾಗಿ ಅಲ್ಲ. ದಯವಿಟ್ಟು ದೇವರ ನಾಮ, ಶ್ಲೋಕ ಹಾಡುವ ಕೇಳುವ ಆಸೆ ಇದ್ದಾರೆ ನಿಯಮಬಧ್ಧ ವಾಗಿ ಹಾಡಿ/ಕೇಳಿ. ಊಟದ ತಿಂಡಿ ವಿಚಾರವಾಗಿ ಒಂದು ನಿಯಮ ಅನುಸರಿಸುವ ಜನರು ದೇವರ ನಾಮ/ಹಾಡಿನ ವಿಚಾರದಲ್ಲಿ ಯಾಕೆ ಇಷ್ಟು ಉದಾಸೀನ, ಉಡಾಫೆ ತೋರುತ್ತಾರೋ ಗೊತ್ತಿಲ್ಲ. ಇನ್ನು ಮುಂದಕ್ಕೆ ನಾನು ಬೇರೇನೂ ಹೇಳೋದಿಲ್ಲ.
---------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ