ಇತ್ತೀಚಿಗೆ ಸಿಕ್ಕಾಪಟ್ಟೆ ಸೋಮಾರಿ ಆಗ್ತಾ ಇದ್ದೀನಿ ಅನ್ನುಸ್ತಾ ಇದೆ. ಮುಂಚೆ ವಾರಕ್ಕೆ ಒಂದು ಅಣಿಮುತ್ತನ್ನು ಹಾಕ್ತಾ ಇದ್ದೋನು, ಈಗ ತಿಂಗಳಿಗೊಂದು ಅನ್ನೋ ಹಾಗಿದೆ. ಮೊಬೈಲ್ ಬದಲಾಯಿಸಿರೋದು ಒಂದು ಮುಖ್ಯ ಕಾರಣ. ಮುಂಚಿನ ಮೊಬೈಲಿನಲ್ಲಿ ಫೋಟೋ ತೆಗೆದು ಹಾಗೆ ಎಡಿಟ್ ಮಾಡಿ ಹಾಕ್ತಾ ಇದ್ದೆ. ಆದ್ರೆ ಈ ಹೊಸ ಮೊಬೈಲಿನಲ್ಲಿ ಹೀಗೆ ಮಾಡುವ ಅವಕಾಶವಿಲ್ಲ. ಹಾಗಾಗಿ, ಇದ್ರಲ್ಲಿ ತೆಗೆದು, ಆ ಮುಂಚಿನ ಮೊಬೈಲಿಗೆ ವರ್ಗಾಯಿಸಿ, ಅದ್ರಲ್ಲಿ ಎಡಿಟ್ ಮಾಡಿ, ಹಾಕೊಷ್ಟರಲ್ಲಿ ಸಾಕು ಸಾಕಾಗತ್ತೆ. ಜೊತೆಗೆ ಮನೆಯಲಿ ಈಗ ಇಂಟರ್ನೆಟ್ ಸಂಪರ್ಕ ಇಲ್ಲ. ತುಂಬಾ ಕಷ್ಟವಾಗಿದೆ. ಕ್ಷಮೆ irali.
ಇದು ಸೋಮಾರಿ ಕಟ್ಟೆಯ 200 ನೇ ಪೋಸ್ಟಿಂಗ್.
ಇದು ತುಂಬಾ ತುಂಬಾ ತಿಂಗಳ ಹಿಂದೆ ತೆಗೆದ ಫೋಟೋ.ಸುಮಾರು ಆರು ತಿಂಗಳಾದವು ಅನ್ಸುತ್ತೆ. ಎಲ್ಲಿ ಅನ್ನೋ ಜ್ಞಾಪಕ ಇಲ್ಲ.
ಆದ್ರೂ ಈ ಅಣ್ಣ ಏನ್ ಹೇಳ್ತಾ ಇದಾನೆ ಅನ್ನೋದು ಗೊತ್ತಿಲ್ಲ. ನಿಮಗೆ ಗೊತ್ತಿದ್ರೆ ಹೇಳಿ.
ನೀಚಡಿ ಕಿರುಬ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ನಿಮ್ಮವನು,
ಕಟ್ಟೆ ಶಂಕ್ರ
11 comments:
ನೀಚಡಿ ಅನ್ನೋದು ನಮ್ಮೂರಿನ ಹತ್ತಿರ ಇರೋ ಒಂದು ಊರಿನ ಹೆಸರು. ಮೇಬೀ ಈತ ಅಲ್ಲಿಯವನಿರಬಹುದು. ಆದ್ರೆ ತನ್ನನ್ನ (ಅಥವ ತನ್ನ ಆಟೋವನ್ನ?) ತಾನೇ 'ಕಿರುಬ' ಅಂತ ಕರ್ಕೊಂಡಿದ್ ಮಾತ್ರ ಆಶ್ಚರ್ಯ! :O
Begane ondu camera tagolli... :-)
Idra artha nangoo gottillaa...
ಶಂಕ್ರು,
ಕಿರುಬ ಅಂತ ಕೇಳಿದ್ದೀನಿ...ನೀಚಡಿ ಅಂದ್ರೆ ಗೊತ್ತಾಗಲಿಲ್ಲ....
200 ನೇ ಪೋಸ್ಟಿಂಗ್ ಗಾಗಿ ಶುಭಾಶಯಗಳು....
ಹೀಗೆ ಸಾವಿರಾರು ಪೋಸ್ಟಿಂಗ್ ಆಗುತ್ತಿರಲಿ.....
shankraa,
neechadi is a small village near my native. i think our driver has some enemy in that village :)
- shashi
ನನಗೂ ಅರ್ಥ ಆಗಿಲ್ಲ... :(
ನಿಮ್ಮ ೨೦೦ನೆ ಪೋಸ್ಟಗೆ ಶುಭಾಶಯಗಳು...
ಆಫೀಸ್ನಲ್ಲಿ ಕೆಲ್ಸಾ ಇಲ್ದೇ ಇರೋ೦ದ್ರಿ೦ದ ’ನೀ ಚ ಡಿ ಕಿ ರು ಬ’ ರಹಸ್ಯ ಭೇದಿಸೋಣ ಅ೦ತ ತಲೆ ಕೆರ್ಕ೦ಡು Dr.Batra's ಗಿರಾಕಿ ಆಗೋ ಅವಸ್ಥೆ ಬ೦ತೇ ಹೊರತು ದಮ್ಮಡಿ ಉತ್ತರ ಸಿಗಲಿಲ್ಲ.
OK, ಶಂಕರ, ಒಳ್ಳೆಯ ಅಣಿಮುತ್ತನ್ನು ಕೊಟ್ಟಿದ್ದಕ್ಕಾಗಿ ನಿಮ್ಮ ಗೈರುಹಾಜರಿಯನ್ನು ಕ್ಷಮಿಸುತ್ತಿದ್ದೇನೆ.
ನೀಚ ಡಿ ಕಿರುಬ ಎನ್ನುವದು ಆಟೋಡ್ರೈವರನ ಹೆಸರಾಗಿರಬಹುದೆ?
ಅಥವಾ ಆತ ಗ್ರಾಹಕರನ್ನು ನೀಚರು ಎಂದು ಭಾವಿಸಿರಬಹುದೆ? ಹಾಗು ಅವರನ್ನು (ಕತ್ತೆ)ಕಿರುಬ ಎಂದು ಸಂಬೋಧಿಸುತ್ತಿರಬಹುದೆ?
ಒಟ್ಟ್ಟಿನಲ್ಲಿ ಇದೊಂದು ದೊಡ್ಡ ಸಾಹಿತ್ಯಕ ಸಮಸ್ಯೆ ಎನ್ನಬಹುದು.
ವಾವ್, "ನೀಚಡಿ ಕಿರುಬ" ಅನ್ನೋದರ ರಹಸ್ಯ ಭೇದಿಸಿ ಆಯ್ತು. ಸುಶ್ರುತ ಮತ್ತು ಶಶಿ ಗೆ ಥ್ಯಾಂಕ್ಸ್.
ಇಲ್ಲಿ ಎಷ್ಟೊಂದು ಜನ ಆಟೋ ಅಣ್ಣಂದಿರು "ಮೈಸೂರ್ ಹುಲಿ", "ಕುಣಿಗಲ್ ಕುದುರೆ" ಹೀಗೆ ಬರ್ಕೊತಾರಲ್ಲ ತಮ್ಮ ಆಟೋ ಹಿಂದೆ, ಅದೇ ಥರ ಈ ಅಣ್ಣ ಕೂಡ ತನ್ನನ್ನು "ನೀಚಡಿ ಯ ಕಿರುಬ" ಎಂದು ಸಂಬೋಧಿಸಿಕೊಂಡಿದ್ದಾನೆ.
ಕಟ್ಟೆ ಶಂಕ್ರ
Shakar Sir,
Nanna hatra ondu auto photo ide nim blog alli post madtira. Your blog rocks ree pa.
Regards,
Kiran SSS
ಕಿರುಬಗಳಲ್ಲಿ ಒಂದು ತಳಿಯಿರಬಹುದೆಂದು ನನ್ನ ಅನಿಸಿಕೆ....ಇರ್ಲಿ...ಒಂದು ಲಿಖಿತ ಅರ್ಜಿ ಕೊಡಿ ಇದರ ಬಗ್ಗೆ ತನಿಖೆ ಮಾಡೋಣ..... ಥ್ಯಾಂಕ್ಸು...
ನೀಚಡಿ ಒಂದು ಊರು ಅಂತ ತಡವಾಗಿ ಗೊತ್ತಾಯ್ತ್ರಿ.....ಸೊ ಧನ್ಯವಾದಗಳು
Post a Comment