ಹೀಗೆ ಮನೆಯಿಂದ ಆಫೀಸಿಗೆ ಹೋಗೋವಾಗ ಇನ್ಫೆಂಟ್ರಿ ರಸ್ತೆಯಲ್ಲಿ ಕಂಡ ಆಟೋ ಇದು.
ಆ ದೇವರಿಗೂ ನನ್ನ ಆಟೋ ಫೋಟೋ ತೆಗೆಯೋದು ಇಷ್ಟ ಅನ್ಸುತ್ತೆ. ನನ್ನ ಕಣ್ಣಿಗೆ ಈ ಥರ ಇಂಟರೆಸ್ಟಿಂಗ್ ಆಟೋ ಅಣಿಮುತ್ತು ಕಂಡಾಗಲೆಲ್ಲ ಹತ್ತಿರದಲ್ಲೇ ಸಿಗ್ನಲ್ ಬೀಳುತ್ತೆ, ಆಟೋ ನಿಲ್ಲುತ್ತೆ, ನನ್ನ ಮೊಬೈಲು ಕ್ಯಾಮೆರ ಕ್ಲಿಕ್ ಅನ್ನುತ್ತೆ.
ನನ್ನ ಈ ಕೆಲಸ ದೈವ ಪ್ರೇರೇಪಿತವಾಗಿದೆ ಅನ್ಸುತ್ತೆ. ಅಲ್ವೇ ?
ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತಹುಟ್ಟು ಉಚಿತ ಅಲ್ಲಾ ಅನ್ಸುತ್ತೆ. ಹುಟ್ಟಿದಾಗ ಆಸ್ಪತ್ರೆಗೆ ದುಡ್ಡು, ಸತ್ತಾಗ ಕೂಡ ಆಸ್ಪತ್ರೆಗೆ, ಸ್ಮಶಾನದಲ್ಲಿ ದುಡ್ಡು, ತಿಥಿಗೆ ದುಡ್ಡು ಇತ್ಯಾದಿ. ಪ್ರೀತಿ ಕೂಡಾ ಸಖತ್ ಕಾಸ್ಟ್ಲಿಕಣ್ರೀ. ಸೋ, ಈ ಅಣ್ಣನ ಅಣಿಮುತ್ತನ್ನು ನಾನು ತಪ್ಪು ಅಂತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ