ಈ ಆಟೋವನ್ನು ನಾನು ಜರ್ಮನಿಗೆ ಹೋಗೋಕ್ಕೆ ಮುಂಚೆ ವಿಲ್ಸನ್ ಗಾರ್ಡನ್ ಸ್ಮಶಾನದ ಮುಂದೆ ನೋಡಿದ್ದೆ. ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಅವತ್ತು. ಆದರೂ ಕಷ್ಟ ಪಟ್ಟು ಛೇಸ್ ಮಾಡಕ್ಕೆ ಪ್ರಯತ್ನಪಟ್ಟು ಸೋತು ಸುಮ್ಮನಾಗಿದ್ದೆ. ಮತ್ತೆ ಇದು ಎಲ್ಲಿ ಕಾಣುತ್ತೋ ಅಂತಾ ಕಾಯ್ತಾ ಇದ್ದೆ.
ಹೀಗೆ ೧ ವಾರದ ಮುಂಚೆ ಆಫೀಸಿಗೆ ಹೋಗೋವಾಗ, ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿತು. ಬೆಳಗಿನ ಸಮಯ, ಕಮ್ಮಿ ಟ್ರಾಫಿಕ್ಕು, ಜೊತೆಗೆ ಶಿವಾಜಿನಗರ ಜಂಕ್ಷನ್ ನಲ್ಲಿ ಕಾಯ್ತಾ ಇತ್ತು ಈ ಆಟೋ. ಲಬಕ್ ಅಂತ ಮೊಬೈಲ್ ಹೊರಗೆ ತೆಗೆದು, ಗಬಕ್ ಅಂತಾ ಫೋಟೋ ಹೊಡೆದೆ.
ಇದಕ್ಕೆ ಮುಂಚೆ ನೋಡಿದಾಗ ಬರಹ ಹೀಗೆ ಇತ್ತು -
ಅಭಿಮಾನಿಗಳೇ ದೇವರೆಂದರು ....ಡಾ ರಾಜಣ್ಣ
ಪ್ರಯಾಣಿಕರೇ ದೇವರೆಂದರು ..... ಮಿ ಕೆಂಪಣ್ಣ
ಆದ್ರೆ ಈಗ ಪಾಪ ಕೆಂಪಣ್ಣನವರ ಹೆಸರು, ಉಜ್ಜಿ ಉಜ್ಜಿ ಮಾಯವಾಗಿದೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, August 7, 2009
Subscribe to:
Post Comments (Atom)
3 comments:
sakath guruve!!
ಕೆಂಪಣ್ಣನ idea ಚೆನ್ನಾಗಿದೆ ಪ್ರಯಾಣಿಕರನ್ನು ಆಕರ್ಷಿಸಿಲು...
ತುಂಬಾ ಚೆನ್ನಾಗಿದೆ...ಕಾದಿದ್ದಕ್ಕೂ ಸಾರ್ಥಕವಾಯಿತು..
Post a Comment