Thursday, March 19, 2009

ಟಾಯ್ಲೆಟ್ಟಲ್ಲಿ ಸಾಸರ್ !!

ನಿನ್ನೆ (18th March 2009) ನಮ್ಮ ಕಂಪೆನಿಯ ಒಂದು Get-Together ಪಾರ್ಟಿ ಇತ್ತು ಅಂತಾ ಹ್ಯಾಂಬರ್ಗ್
ನಗರದ ಬಂದರು (Port) ಆಗಿರುವ Landungsbrucken ಅನ್ನೋ ಜಾಗಕ್ಕೆ ಹೋಗಿದ್ದೆ.
ಪಾರ್ಟಿ ಇದ್ದದ್ದು ಒಂದು De-Commissionned (Retired) Freighter ಹಡಗಿನಲ್ಲಿ.
ಹಡಗಿನ ಹೆಸರು CAP - SAN DIEGO. 1960ನೆ ಇಸವಿಯ ಆಸುಪಾಸಿನ ಸರಕು ಸಾಗಾಣಿಕೆಯ ಹಡಗು ಇದು. ಇವಾಗ ಪ್ರವಾಸಿ ಆಕರ್ಷಣೆಯಾಗಿದೆ.

ಬೈಕೋಬೇಡಿ, ಇದರ ಬಗ್ಗೆ ಪಿಟೀಲು ಕುಯ್ದು ಬೋರ್ ಮಾಡೋದಿಲ್ಲ. ಪಾರ್ಟಿ ನಡೆಯುವಾಗ ಜಲಬಾಧೆ ತೀರಿಸಲು ಟಾಯ್ಲೆಟ್ಟಿಗೆ ಹೋದೆ. ಇಲ್ಲಿ ಮತ್ತೊಂದು ಡಿಜೈನಿನದ್ದು ಕಂಡಿತು. ಮಧ್ಯಭಾಗದಲ್ಲಿ ಸಾಸರಿನ (SAUCER) ಥರ ಇದೆ. ಜೊತೆಗೆ ಇದರ ಗೋಡೆಯ ಮೇಲೂ ಕೂಡಾ ಒಂದು ಹುಳುವಿನ ಚಿತ್ರ ಪ್ರಿಂಟ್ ಮಾಡಿದಾರೆ. ಆದ್ರೆ ಅದು ಈ ಚಿತ್ರದಲ್ಲಿ ಅಷ್ಟೊಂದು ಕ್ಲಿಯರ್ ಆಗಿ ಕಾಣೋದಿಲ್ಲ (ಲೈಟಿಂಗ್ ಕಮ್ಮಿ ಇತ್ತು ಕಣ್ರೀ ಅಲ್ಲಿ).

ನೋಡಿ...


ಇನ್ನೂ ಅದೆಷ್ಟು ಡಿಜೈನ್ ಡಿಜೈನ್ ಟಾಯ್ಲೆಟ್ಟನ್ನು ಉಪಯೋಗಿಸುತ್ತೀನೋ, ನಿಮಗೆ ಅದರ ದರ್ಶನ ಮಾಡುಸ್ತೀನೋ ಗೊತ್ತಿಲ್ಲ.
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

12 comments:

Unknown said...

ha ha ha

nimagage ivella madiddara anta?

shivu.k said...

ಶಂಕರ್ ಸರ್,

ಮತ್ತೆ ಟಾಯ್ಲೆಟ್ ವಿಚಾರನಾ !!...ಸುಮ್ಮನೆ ತಮಾಷೆಗೆ ಹೇಳಿದೆ......ನಿಮ್ಮ ಕುತೂಹಲ ಇದರೆಡೆಗಿರುವುದು...ಒಳ್ಳೆಯದು...ಎಲ್ಲಾ ದಾಖಲೆಗಳನ್ನು ಕಾಯ್ದಿರಿಸಿ...ಮುಂದೆ ಖಂಡಿತ ಉಪಯೋಗವಾಗುತ್ತದೆ...

Harsha said...

enappa.. Ph.D enadroo madtaa iddiya en kathe.. hehe

Cheenu said...

yappa enthentha ideas guru..... hucha aagidini......

ಶಿವಪ್ರಕಾಶ್ said...

ಶಂಕರ್ ಅವರೇ,
ಬ್ಲಾಗ್ ಲೋಕದ ಸ್ನೇಹಿತರ ಸಮ್ಮುಖದಲ್ಲಿ ನಿಮಗೆ ಗೌರವ ಡಾಕ್ಟರೇಟ್ ಕೊಡುತ್ತಿದ್ದೇವೆ.
ಇನ್ನು ಮುಂದೆ ನೀವು ಬರಿ ಶಂಕರ್ ಅಲ್ಲ, ಡಾ.ಶಂಕರ್.
ನಿಮ್ಮ ಸಂಶೋಧನೆ ಹೀಗೆ ಮುಂದುವರೆಯಲಿ...
:) :)

ಧರಿತ್ರಿ said...

ಶಂಕ್ರಣ್ಣ..
ಟಾಯ್ಲೆಟ್ ಕತೆ ಓದಿ ಓದಿ ಸುಸ್ತಾಯ್ತು. ಬೇರೆ ಬರೀರಿ.
-ಧರಿತ್ರಿ

sunaath said...

ನಿಮ್ಮ ಸಂಶೋಧನಾ ಮಾಹಿತಿ ತುಂಬ ಕುತೂಹಲಕಾರಿಯಾಗಿದೆ.
ಮುಂದುವರೆಸಿ.

Unknown said...

ha ! ha! by u r article only i came to know the differ types of toilet ... good observation... very funny...

ಸಾಗರದಾಚೆಯ ಇಂಚರ said...

TUmbaa chennagide,
ಯುಗಾದಿಯ ಹಾರ್ದಿಕ ಶುಭಾಶಯಗಳು.

ಜಲನಯನ said...

ಸಂಕ್ರಣ್ಣೋ,
ಯಾ ಪಾಟೀ ಐತಪ್ಪೋ ಇದು..?? ಎಂಗೆ, ಇದ್ನ ಉಪ್ಯೋಗ್ಸೋದು..?? ನಿಂತ್ಕಂಡೋ? ಕುತ್ಕಂಡೋ..?? ಇಲ್ಲ...???
ಬಾಳ..ಯೋಚ್ನೇ ಮಾಡ್ತೀ ಬಿಡ್ಕಣಪ್ಪ ನೀನು...ಜರ್ಮನಿಯೊಳ್ಗೆ..ಇಂಗೇ ಇನ್ನೂ ವಿಸೇಸ ಇದ್ರೆ ತಿಳ್ಸು ವಸಿ..ತಿಳ್ಕೋಮಾ...

Abhijith said...

yaake bhai.. Somaari Katte full dull aagbittidiyella??!! :)

ಧರಿತ್ರಿ said...

ಬ್ಯುಸಿಯಾಗಿದ್ದೀರಾ? ಮುಂದಿನ ಬರಹ ಯಾವಾಗ ಬರುತ್ತೆ ಮಾರಾಯ್ರೆ?
-ಧರಿತ್ರಿ