Tuesday, March 17, 2009

ಆಟೋ ಅಣಿಮುತ್ತುಗಳು - ೫೭ - ಹಾರ್ಟಿದೆ

ಬಹಳಾ ದಿನಗಳಾದ ಮೇಲೆ ಇವತ್ತು ಮತ್ತೊಂದು ಆಟೋ ಅಣಿಮುತ್ತು ಹಾಕ್ತಾ ಇದ್ದೀನಿ.
ಇದನ್ನು ಕಳ್ಸಿದ್ದು ಮಿತ್ರ ಹೇಮಂತ.
ಹೀಗೆ ಬಹಳಷ್ಟು ಮಂದಿ, ನಂಗೆ "ಶಂಕ್ರ, ಈ ಆಟೋ ಫೋಟೋ ತೆಗ್ದಿದೀನಿ, ಬ್ಲಾಗಿನಲ್ಲಿ ಹಾಕು" ಅಂತಾ ಕಳುಸ್ತಾರೆ.
ನಿಮ್ಮೆಲರ ಅಭಿಮಾನಕ್ಕೆ ಬಹಳಾ ಥ್ಯಾಂಕ್ಸ್.

ಇದನ್ನ ನೋಡಿ, ಈ ಅಣ್ಣ ಹೇಳಿರೋದು "ಆಟೋದವರಿಗೂ ಹಾರ್ಟಿದೆ, ಪ್ರೀತ್ಸೆ"
ಯಾಕೆ ಈ ಥರ ಬರೆಸಿದ್ದಾನೆ ಈತ ?

------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

3 comments:

ಶಿವಪ್ರಕಾಶ್ said...

ಪಾಪ, ಅವ್ನ ಡವ್ವು "ಈ ಆಟೋದವರಿಗೆ ಹಾರ್ಟ್ ಇಲ್ಲ" ಅಂದಿರಬೇಕು....
ಅದಕ್ಕೆ ಫೀಲಿಂಗ್ಸ್ ನಲ್ಲಿ ಹಾಕಿದಾನೆ...
ಬೇಜಾರ್ ಅಗಬೇಡಪ್ಪ.
ನಾನು ನನ್ನ ಗಾಡಿಗೆ, "ಸಾಫ್ಟವೇರ್ ಇಂಜಿನಿಯರುಗು ಹಾರ್ಟ್ ಇದೆ ಅಂತ ಹಾಕೊಳ್ತಿನಿ".
:)

sunaath said...

ಯಾವದಾದರೂ (ಹೆಣ್ಣು)ಗಿರಾಕಿ, ಈ ಅಣಿಮುತ್ತು ಓದಿ ಮುತ್ತು ಕೊಟ್ಟೀತಾ ಎನ್ನುವ ಆಸೆ ಈ ಆ‍^ಟೋರಾಜನಿಗಿರಬೇಕು!

Anonymous said...

:-) ಏ ಥರಾ ತುಂಬ ಅಣಿಮುತ್ತುಗಳು ಆಟೊ, ಲಾರಿಗಳ ಹಿಂದಿರುತ್ತವೆ. ಕೆಲವು ಸಲ ಸ್ವಾರಸ್ಯಕರವಗಿರುತ್ತೆ! ಹೀಗೇ ಪ್ರಕಟಿಸ್ತಾ ಇರಿ ಸೋಮಾರಿ ಕಟ್ಟೆಯಲ್ಲಿ...