ಸುಮಾರು ಐದಾರು ಗಾಡಿಗಳ ಹಿಂದೆ ಇದ್ದೆ ನಾನು. ಹಂಗೆ ಹಿಂಗೆ ಕಷ್ಟ ಪಟ್ಟು ಈ ಆಟೋ ಪಕ್ಕಕ್ಕೆ ಹೋದೆ.
ಪಕ್ಕಕ್ಕೆ ಹೋಗಿ "ಸಾರ್ ನಿಮ್ಮ ಆಟೋ ಹಿಂದೆ ಬರ್ದಿದೀರಲ್ಲ, ಅದರ ಫೋಟೋ ತೆಕ್ಕೊತೀನಿ, ಒಂದು ನಿಮಿಷ ಆಟೋ ನಿಲ್ಲುಸ್ತೀರ?" ಅಂತ ಕೇಳಿದೆ. ಆಟೋ ಒಳಗಡೆ ಪ್ಯಾಸೆಂಜರ್ ಇದ್ರು... ಅವ್ರು "ಏಯ್, ಆಗಲ್ಲ ಕಣ್ರೀ, ಅರ್ಜೆಂಟ್ ಕೆಲಸ ಇದೆ" ಅಂತ ನಿಲ್ಲಿಸೋದಕ್ಕೆ ಅನುಮತಿ ಕೊಡ್ಲಿಲ್ಲ.
ಆದ್ರೆ ಈ ಆಟೋ ಅಣ್ಣ ಹಾಗೆ ಓಡಿಸುತ್ತಾ, ಆಡುಗೋಡಿ ಕ್ರಿಶ್ಚಿಯನ್ ಸೆಮಿಟರಿ ಸಿಗ್ನಲ್ಲಲ್ಲಿ ಬೇಕೂ ಅಂತ ನಿಲ್ಸಿದ್ರು. ನಾನು ಆರಾಮಾಗಿ ಫೋಟೋ ತೆಕ್ಕೊಂಡೆ. ಅಂದಹಾಗೆ ಆ ಆಟೋ ಅಣ್ಣನ ಹೆಸರು ಕೂಡಾ ಶಂಕರ್.

ಫೋಟೋ ತೆಗೆದು ಹೊರಟಾಗ "ಅಂದಹಾಗೆ, ನನ್ನ ಹೆಸರೂ ಶಂಕರ್ ಅಂತಾ" ಎಂದು ಹೇಳಿದೆ. ಅದಕ್ಕೆ ಆ ಆಟೋ ಶಂಕ್ರಣ್ಣ ಒಂದು ಮಸ್ತ್ ಸ್ಮೈಲ್ ಕೊಟ್ಟು "ಸರಿ ಸಾರ್, ಸಂತೋಷ..ಮತ್ತೆ ಸಿಗೋಣ" ಅಂದ್ರು.
ಆದ್ರೆ ಈ ನನ್ನ ದಡ್ಡ ತಲೆಗೆ ಆ ಆಟೋ ಶಂಕ್ರಣ್ಣನ ಫೋಟೋ ತೆಗೆಯೋಕ್ಕೆ ಹೊಳೀಲಿಲ್ಲ. ಆಮೇಲೆ ಬೇಜಾರ್ ಆಯ್ತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
4 comments:
ಶಂಕರ್ ಗುರು,
ಜೈ ಜವಾನ್, ಜೈ ಕಿಸಾನ್ ಅನ್ತಿರೋ ಈ ಆಟೋ ಶಂಕರ್ ಗೆ ನನ್ನ ಹ್ಯಾಟ್ಸ್ ಆಫ್... ಅಂದ್ ಹಾಗೆ, ಈ ಆಟೋ ಡ್ರೈವರ್ ಗಳು ತಮ್ಮ ಆಟೋ ಹಿಂದೆ ಬರೆಸೋ ಇಂತಾ ನುಡಿಮುತ್ತುಗಳಷ್ಟೇ ಸೌಮ್ಯವಾಗಿ ಎಲ್ಲರೊಂದಿಗೆ ವರ್ತಿಸಿದರೆ ಎಷ್ಟು ಚೆನ್ನ ಅಲ್ಲವೇ?
- ಉಮೀ
super msgs guru!
Both Autoshankras great !
nice quotations.
neenu onthara auto shankara ne .. hehehe
Post a Comment