ಟಿ.ವಿ, ರೇಡಿಯೋ, ಪತ್ರಿಕೆ, ಅಂತರ್ಜಾಲ... ಎಲ್ಲದರಲ್ಲೂ ಇದರ ಬಿಸಿ ಮುಟ್ಟಿದೆ.
ಹೊಗೆನಕಲ್ ವಿವಾದದಲ್ಲಿ, ತಮಿಳುನಟ ರಜನಿಕಾಂತ್ ಹೇಳಿಕೆಯನ್ನು ಖಂಡಿಸಿ, ಆತ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿ ಒಬ್ಬ ಮಹಾನುಭಾವ ರಿಡಿಫ್.ಕಾಂ ನಲ್ಲಿ ಬರೆದಿರುವ ಲೇಖನ ಓದಿ.
ಈ ಲೇಖನದಲ್ಲಿ, ಪುಣ್ಯಾತ್ಮ ಏನ್ ಬರೆದಿದ್ದಾನೋ ನೋಡಿ. ನಮ್ಮ "ಕರ್ನಾಟಕ ರಕ್ಷಣಾ ವೇದಿಕೆ"ಯನ್ನು "KANNADA MILITANT GROUP" ಅಂತಾ ಕರೆದಿದ್ದಾನೆ. ಇಲ್ಲಿರುವ ಫೋಟೋ ನೋಡಿ.
http://www.rediff.com/cms/print.jsp?docpath=/movies/2008/apr/08rajni.htm

ಅಲ್ಲಾ ಕಣ್ರೀ, ಮೊದ್ಲೇ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮಗಳಿಗೆ ಕನ್ನಡದ ಮೇಲೆ ಮಲತಾಯಿ ಧೋರಣೆ. ಈ ಥರ ಪರಿಸ್ಥಿತಿ ಇದ್ದಾಗ, ಇಂಥಾ ಮುಂ* ಮಕ್ಳು ಹೀಗೆ ಬರೆದರೆ ಏನು ಗತಿ ? ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಪ್ರತಿಭಟಸಿ, ಆ ನೇಮಕಾತಿ ಪ್ರಕ್ರಿಯೆಯನ್ನೇ ನಿಲ್ಲಿಸಿದ ಸಂಘಟನೆ ಇದು. ಇದನ್ನು ಹೋಗಿ ಹೋಗಿ "MILITANT GROUP" ಅಂತಾ ಕರೆದರೆ, ಈ ಲೇಖನವನ್ನು ಓದಿದ ಅನ್ಯಭಾಷಿಕರು ನಮ್ಮ "ಕರವೇ" ಬಗ್ಗೆ ಏನು ತಿಳಿಯಬಹುದು ?
ಈ ಥರ ಬರೆದಿರುವ ಲೇಖನವನ್ನು ಪ್ರೂಫ್ ರೀಡಿಂಗ್ ಮಾಡದೇ ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ರಿಡಿಫ್ ಗೆ ತಲೆ ಇಲ್ಲವೇ ?
ನೋಡಿ, ನಮ್ಮ ಹಣೇಬರಹ ಹಿಂಗೇ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
3 comments:
ಪುಣ್ಯಾತ್ಮ ಇಂಗ್ಲಿಷಿನಲ್ಲಿ ಬರೆಯೋ ಉತ್ಸಾಹದಲ್ಲಿ ಮಿಲಿಟಂಟ್ ಗ್ರೂಪ್ ಅಂತ ಬರೆದಿದ್ದಾನೆ ಅಂತ ಕಾಣುತ್ತೆ. ನಮ್ಮವರೇ ನಮ್ಮನ್ನು ಹೀಗೆ ಕರೆದುಕೊಂಡ ಮೇಲೆ ಬೇರೆಯವರು ಸುಮ್ಮನಿರುತ್ತಾರೆಯಾ? ಕನ್ನಡ ಟೆರರಿಸ್ಟ್ ಗ್ರೂಪ್ ಅಂತ ಕರೀತಾರಷ್ಟೆ. “ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ. ಧರೆಯೆ ಹತ್ತಿ ಉರಿಯುವಾಗ ಬದುಕಿ ಬರಲು ಸಾಧ್ಯವೆ?”
ಪಾಪ ಆತನಿಗೆ ಕ್ರಾಂತಿಕಾರಕ ಆನ್ನೋ ಪದಕ್ಕೆ ಪರ್ಯಾಯ ಪದ ಸಿಕ್ಕಿಲ್ಲ. ಜೊತೆಗೆ ಒಳಗೊಂದಷ್ಟು ಕಹಿ ಇತ್ತೆನಿಸುತ್ತೆ. ಹಾಗೆ ಕರ್ಕೊಂಡಿದ್ದಾನೆ. ಇರಲಿ ಬಿಡಿ. ಇಂಥದ್ದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲೇಬಾರದು. ಮುಖ್ಯವಾಗಿ ಆನ್-ಲೈನ್ನಲ್ಲಿ ಯಾವುದೂ ಗಂಭೀರವಾಗುವುದಿಲ್ಲ-ಅದು ಗಂಭೀರವಾಗಿದ್ದರೂ.
ತೆರೆದ ಮನ ಇಲ್ಲಿ ಮುಖ್ಯವಾಗುತ್ತೆ. ಜೊತೆಗೆ ತಿಳಿದುಕೊಳ್ಳುವ-ವಿಶ್ಲೇಷಿಸುವ ತಾಳ್ಮೆಯೂ.
ರವೀ...
ಒಂದು ಹೊಸ ಲೇಖನ:ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
they have corrected it now.
Post a Comment