So called ಜಾತ್ಯಾತೀತ ಬುದ್ಧಿಜೀವಿ ಕಾರ್ನಾಡರೇ, ಒಂದು ವೇಳೆ ಯಾರಾದರೂ ನೀವು ಓಲೈಸುವ ಅಲ್ಪಸಂಖ್ಯಾತರ ದೇವರ/ಧರ್ಮದ ವಿರುಧ್ಧ ಬರೆದು, ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದ ಪಕ್ಷದಲ್ಲಿ ಇದೇ ಮಾತು ಆಡುತ್ತಿದ್ದಿರೇನು ?
ಹೂಸಿದರೆ ಕೆಮ್ಮಿದರೆ ತಪ್ಪು, ಅವರಿಗೆ ಶಿಕ್ಷೆ ಕೊಡಿ ಎಂದು ತೀರ್ಮಾನ ಕೊಡುವ ಧಾರ್ಮಿಕ ಮುಖಂಡರಿಗೂ, ನಿಮಗೂ ಏನು ವ್ಯತ್ಯಾಸವಿದೆ ಸ್ವಾಮಿ?
ಇನ್ನು ನಿಮ್ಮ "ನಾವು ಮನಸ್ಸಿಗೆ ನೋವು ಮಾಡುತ್ತೇವಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ" ಎನ್ನುವ ಮಾತಿನ ಅರ್ಥ ಏನು ಕಾರ್ನಾಡರೆ ?
ಮಾಸಲಾಗದಂಥ ಗುರುತು ಹಾಗು ಎಲ್ಲಾ ವರ್ಗದ ಜನರನ್ನೂ ಘಾಸಿಗೊಳಿಸುವುದು ಮನಸ್ಸಿಗೆ ನೋವುಂಟುಮಾಡುವ ಮಾತೇ ಹೊರತು ದೈಹಿಕ ಹೊಡೆತವಲ್ಲ. ನಿಮ್ಮಂಥ ಉತ್ತಮ ಬೌಧ್ಧಿಕ ಮಟ್ಟದ ಲೇಖಕರಿಗೆ ನನ್ನಂಥ ಪಾಮರನೊಬ್ಬ ಈ ವಿಚಾರ ಹೇಳಬಾರದು.
ನಮ್ಮ ದೇಶದಲ್ಲಿ ಈಗ ಕಪಟ ಜಾತ್ಯಾತೀತ (Pseudo Secular) ಜನರು ತೋರಿಕೆಗೋಸ್ಕರ, ಮತ್ತೊಂದು ರಾಜಕೀಯ ಪಕ್ಷದ ಓಲೈಕೆಗೋಸ್ಕರ ಹೀಗೆ ನುಡಿಮುತ್ತುಗಳನ್ನು ಉದುರಿಸುತ್ತಾರೆ. ತಾವು ಹೇಳಿದ ಹಾಗೆ ಬರೀ ಮನಸ್ಸಿಗೆ ನೋವುಂಟು ಮಾಡುವ ಮಾತುಗಳಿಂದಲೇ ವರ್ಷಾನುಗಟ್ಟಲೆ ಮಾಸದ ಹಾಗೆ ಕೋಮು ಸೌಹಾರ್ದತೆ ಮಾಯವಾಗುತ್ತದೆ.
ನಿಮ್ಮಂಥ ಜ್ಞಾನಿಯ ಬಾಯಿಂದ ಈ ತೆರನಾದ ಮಾತುಗಳು ಶೋಭಿಸುವುದಿಲ್ಲಾ !!
-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ