Thursday, August 13, 2009

ಆಟೋ ಅಣಿಮುತ್ತುಗಳು - ೭೩ - ಅವಳು ನಕ್ಕಳು

ಕೆಲವು ದಿನಗಳ ಮುಂಚೆ ಆಫೀಸಿನ ಮುಂದೆ ಕಂಡ ಆಟೋ ಇದು.
ಯಾಕೋ ಟ್ರ್ಯಾಕು ಎಲ್ಲಿಗೋ ಹೋಗಿದೆ ಈ ಅಣ್ಣನದು.



ಅವಳು ನಕ್ಕಳು
ನಾ ಸೋತೆ..
ಅವಳು ಸಿಕ್ಕಳು
ನಾ ಸತ್ತೆ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, August 11, 2009

ಆಟೋ ಅಣಿಮುತ್ತುಗಳು - ೭೨ - ಕಾಣದ ಲೋಕದಲ್ಲಿ ಮೋಸದ ಪ್ರೀತಿ

ಮಿತ್ರ ಗುರುದಾಸ ಭಟ್ಟರು ಕಳಿಸಿದ ಫೋಟೋ ಇದು.
ಈ ಅಣ್ಣ ಭಗ್ನಪ್ರೇಮಿ ಇರಬಹುದು ಅಥವಾ ಕುರುಡು ಪ್ರೀತಿಯನ್ನು ಬೆನ್ನು ಹತ್ತುವ ಎಲ್ಲರನ್ನೂ ಉದ್ದೇಶಿಸಿ ಹೇಳಿರುವ ಅಣಿಮುತ್ತು ಇದು ಅನ್ಸುತ್ತೆ. ಅಲ್ವೇ ?

ಕಾಣದ ಲೋಕದಲ್ಲಿ ಮೋಸದ ಪ್ರೀತಿಯನು
ಹುಡುಕುತ ಹೋರಾಡುತ್ತಿರುವ
ಕುರುಡು ಪ್ರೇಮಿಗಳು ನಾವೆಲ್ಲ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, August 7, 2009

ಆಟೋ ಅಣಿಮುತ್ತುಗಳು - ೭೧ - ಪ್ರಯಾಣಿಕರೇ ದೇವರೆಂದರು

ಈ ಆಟೋವನ್ನು ನಾನು ಜರ್ಮನಿಗೆ ಹೋಗೋಕ್ಕೆ ಮುಂಚೆ ವಿಲ್ಸನ್ ಗಾರ್ಡನ್ ಸ್ಮಶಾನದ ಮುಂದೆ ನೋಡಿದ್ದೆ. ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಅವತ್ತು. ಆದರೂ ಕಷ್ಟ ಪಟ್ಟು ಛೇಸ್ ಮಾಡಕ್ಕೆ ಪ್ರಯತ್ನಪಟ್ಟು ಸೋತು ಸುಮ್ಮನಾಗಿದ್ದೆ. ಮತ್ತೆ ಇದು ಎಲ್ಲಿ ಕಾಣುತ್ತೋ ಅಂತಾ ಕಾಯ್ತಾ ಇದ್ದೆ.

ಹೀಗೆ ೧ ವಾರದ ಮುಂಚೆ ಆಫೀಸಿಗೆ ಹೋಗೋವಾಗ, ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿತು. ಬೆಳಗಿನ ಸಮಯ, ಕಮ್ಮಿ ಟ್ರಾಫಿಕ್ಕು, ಜೊತೆಗೆ ಶಿವಾಜಿನಗರ ಜಂಕ್ಷನ್ ನಲ್ಲಿ ಕಾಯ್ತಾ ಇತ್ತು ಈ ಆಟೋ. ಲಬಕ್ ಅಂತ ಮೊಬೈಲ್ ಹೊರಗೆ ತೆಗೆದು, ಗಬಕ್ ಅಂತಾ ಫೋಟೋ ಹೊಡೆದೆ.


ಇದಕ್ಕೆ ಮುಂಚೆ ನೋಡಿದಾಗ ಬರಹ ಹೀಗೆ ಇತ್ತು -
ಅಭಿಮಾನಿಗಳೇ ದೇವರೆಂದರು ....ಡಾ ರಾಜಣ್ಣ
ಪ್ರಯಾಣಿಕರೇ ದೇವರೆಂದರು ..... ಮಿ ಕೆಂಪಣ್ಣ

ಆದ್ರೆ ಈಗ ಪಾಪ ಕೆಂಪಣ್ಣನವರ ಹೆಸರು, ಉಜ್ಜಿ ಉಜ್ಜಿ ಮಾಯವಾಗಿದೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ