Thursday, July 31, 2008

ಹ್ಯಾಪಿ ಬರ್ತ್ ಡೇ... ಸೋಮಾರಿ ಕಟ್ಟೆಗೆ

ಇವತ್ತಿಗೆ ಸರಿಯಾಗಿ ೧ ವರ್ಷದ ಹಿಂದೆ (ಜುಲೈ ೩೧, ೨೦೦೭) ...ಆಫೀಸಲ್ಲಿ ಏನೂ ಕೆಲಸ ಇರ್ಲಿಲ್ಲ..ಹಂಗೆ ಎಷ್ಟು ಹೊತ್ತು ಅಂತಾ ಸುಮ್ನೆ ಇಂಟರ್ನೆಟ್ ಬ್ರೌಸ್ ಮಾಡೋದು ? ಅವಾಗ ಆಫೀಸಲ್ಲಿ ಆರ್ಕುಟ್ ಕೂಡಾ ಬ್ಲಾಕ್ ಆಗಿತ್ತು.
ಸುಮ್ಕೆ ಹಂಗೆ ಟ್ರೈ ಮಾಡುವಾ ಅಂತಾ ಬ್ಲಾಗ್ ಶುರು ಮಾಡಿದೆ.
ಹೆಸರು ಇದಬೇಕಾದ್ರೆ ತಲೆ ಪರ ಪರ ಅಂತಾ ಕೆರ್ಕೊಂಡೆ.
ಮೈಸೂರಲ್ಲಿ ಇದ್ದಾಗ ಸಂಜೆ ಆಗ್ತಿದ್ದ ಹಾಗೆ ಕಟ್ಟೆಗೆ ಓದ್ತಾ ಇದ್ವಿ.
ಅದಕ್ಕೆ ನಮ್ಮಪ್ಪ ಉಗಿಯೋರು "ಅದೇನು ಅಂತಾ ಆ ಸೋಮಾರಿ ಕಟ್ಟೆನಲ್ಲಿ ಕೂರ್ತೀರೋ ಮುಂಡೇವಾ" ಅಂತಾ..
ಅದಕ್ಕೆ ನನ್ನ ಬ್ಲಾಗಿಗೆ "ಸೋಮಾರಿ ಕಟ್ಟೆ" ಅನ್ನೋದಕ್ಕಿಂತಾ ಒಳ್ಳೆ ಹೆಸರು ಬೇರೆ ತೋಚಲಿಲ್ಲ.
ಅದು ಬಿಡಿ, ಕಳೆದ ೧ ವರ್ಷದಲ್ಲಿ ಸಖತ್ ಚೇಂಜ್ ಆಗಿದೆ ನನ್ನ ಬ್ಲಾಗು. ಬರಹಗಳು, ಆಟೋ ಅಣಿಮುತ್ತುಗಳು, ತಮಾಶೆಯಾಗಿ ಕಾಣೋ ಪ್ರಪಂಚ... etc etc ಹಾಕ್ತಾ ಬಂದಿದೀನಿ. ಅದಕ್ಕೆ ನಿಮ್ಮಿಂದ ಪ್ರತಿಕ್ರಿಯೆಗಳು ಬಂದಿವೆ, ಉಗಿತಗಳು ಸಿಕ್ಕಿವೆ.
ಎಲ್ಲಕ್ಕಿಂತಾ ಹೆಚ್ಚಾಗಿ ಕನ್ನಡ ಬ್ಲಾಗರುಗಳ ಬೆಚ್ಚನೆಯ ಸ್ನೇಹ ಸಿಕ್ಕಿದೆ. ಇನ್ನೇನು ಬೇಡಾ. ಹೀಗೆ ಮುಂದುವರಿಸಿಕೊಂಡು ಹೋಗೋ ಹಾಗೆ ಪ್ರೋತ್ಸಾಹ ಕೊಡ್ತಾ ಇರೀ.. ಅಷ್ಟೆ ಸಾಕು..
ಹಂಗೆ ಇಲ್ಲಿ ಸ್ವಲ್ಪ ಮಿಠಾಯಿ ಇಟ್ಟಿದೀನಿ, ದಯವಿಟ್ಟು ಸ್ವೀಕರಿಸಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, July 29, 2008

ಆಟೋ ಅಣಿಮುತ್ತುಗಳು - ೨೬ - ಹ್ಯಾಟ್ಸ್ ಆಫ್ ಗುರೂ

ತುಂಬಾ ನಿಜ ಅಲ್ವಾ ಈತ ಹೇಳಿರೋದು ?
ಇಅವತ್ತು ಬೆಳಿಗ್ಗೆ ಆಫೀಸಿಗೆ ಬರಬೇಕಾದರೆ, M.G ರೋಡಿನಲ್ಲಿ ಕಂಡಿದ್ದು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, July 25, 2008

ಆಟೋ ಅಣಿಮುತ್ತುಗಳು - ೨೫ - ಕಿಂಗಿನ ಪವರ್ರು

ಇದನ್ನ ಮೊದಲ ಬಾರಿ ನೋಡಿದಾಗ ದೇವ್ರಾಣೇಗ್ಲೂ ಏನೂ ಅಂತ ಗೊತ್ತಾಗ್ಲಿಲ್ಲ...
ಸ್ವಲ್ಪ ನೋಡಿದ ಮೇಲೆ ಗೊತ್ತಾಯ್ತು. ನೋಡೀ ನೀವೇ



ಅರ್ಥ ಆಗ್ಲಿಲ್ಲ ಅಂದ್ರೆ ಇಲ್ಲಿ ಓದಿ : ಪವರ್ ಆಫ್ ದ ಕಿಂಗ್
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಕುಡಿದಾಗ ಕಾಮನ್ ಆಗಿ ಹೊಡಿಯೋ ಡೈಲಾಗುಗಳು

ಕುಡಿದಾಗ ಬಾಯಿಂದ ಡೈಲಾಗುಗಳು, ಬಾಟಲಿಯಿಂದ ಗುಂಡು ಸುರಿದಷ್ಟೇ ಸಲೀಸಾಗಿ ಬರುತ್ತಲ್ವೆ ??
ಅದೇ, ಕಾಮನ್ ಆಗಿ ಬರೋ ಡೈಲಾಗುಗಳು ಇಲ್ಲಿವೆ ನೋಡಿ..

೧. ನೀನು ನನ್ನ ತಮ್ಮ ಕಣ್ಲಾ..

೨. ಕುಡಿದಿದ್ದೀನಿ ಅನ್ಕೊಂಡಿದ್ಯಾ?

೩. ಗಾಡಿ ನಾನು ಓಡುಸ್ತೀನಿ ಮಗಾ

೪. ಬೇಜಾರ್ ಮಾಡ್ಕೋಬೇಡಾ ಮಗಾ

೫. ನಿನ್ನ ಕಂಡ್ರೆ ಸಖತ್ ಮರ್ಯಾದೆ ಇದೆ ಮಗಾ

೬. ಇವತ್ತು ಹೇಳ್ಬುಡು ಮಗಾ ಅವ್ಳಿಗೆ ಏನಾದ್ರೂ ಆಗ್ಲಿ ನೋಡ್ಕಂಡ್ರಾಯ್ತು

೭. ಯಾಕೋ ಏರ್ತಾನೇ ಇಲ್ಲಾ ಕಣ್ಲಾ ಇವತ್ತು

೮. ನಂಗೇನು ಕಿಕ್ ಹೊಡೀತಾ ಇದೆ ಅನ್ಕೊತಾ ಇದೀಯಾ?

೯. ಕುಡ್ದು ಮಾತಾಡ್ತಾ ಇದೀನಿ ಅಂತಾ ಅನ್ಕೋಬೇಡಾ ಮಗಾ

೧೦. ಸಾಕಾಗತ್ತಾ ಮಗಾ ಇಷ್ಟೇ ?

೧೧. ಚೋಟೂ.. ಇನ್ನೊಂದು ಛೋಟಾ ಪೆಗ್ ತಗೊಂಡ್ ಬಾ

೧೨. ಮಗ್ನೆ... ಕುಡಿಯೋದನ್ನ ನೀನು ನಂಗೆ ಹೇಳಿಕೊಡ್ತ್ಯಾ?

೧೩. ಏನೇ ಹೇಳ್ ಮಗಾ... ಬಾಳಾ ಬೇಜಾರಾಗೋ ಮಾತು ಹೇಳ್ಬುಟ್ಟೆ ನೀನು

೧೪. ಏನೇ ಹೇಳ್ ಮಗಾ...ನನ್ ತಮ್ಮ ಕಣ್ಲಾ ನೀನು

೧೫. ನಿಂಗೆ ಏನ್ ಬೇಕು ಮಗಾ ಹೇಳು..ಪ್ರಾಣಾ.. ಪ್ರಾಣಾ ಕೂಡಾ ಕೊಡ್ತೀನಿ

೧೬. ಇವತ್ತಿನ್ ತನ್ಕಾ ನಂಗೆ ಕಿಕ್ ಹತ್ತಿಲ್ಲಾ.. ಇವತ್ತೇನೋ ದೊಡ್ಡದಾಗಿ ಹೇಳ್ತ್ಯಾ ?? ಬೆಟ್ಸ್ ಕಟ್ಟು ನೋಡೇ ಬಿಡೋಣಾ ಇವತ್ತು

೧೭. ಸರಿ ಮಗಾ.. ಇವತ್ತು ನಿನ್ ಬಗ್ಗೆ ಅವ್ಳ ಹತ್ರ ಮಾತಾಡ್ತೀನಿ.. ಅವ್ಳ ಫೋನ್ ನಂಬರ್ ಕೊಡು

೧೮. (ಹುಡುಗಿ ಬಗ್ಗೆ) ಲೋ ಲೋ ಲೋ.. ನಿಮ್ಮ್ ಅತ್ತಿಗೆ ಥರಾ ಕಣ್ಲಾ ಅವ್ಳು... ಭಾಭಿ ನಿಂಗೆ, ಸರಿಯಾಗಿ ಇರು ಮಗ್ನೆ

೧೯. ಅರ್ಥ ಮಾಡ್ಕೋ ಮಗಾ.. ನಿಂಗೆ ಸರಿ ಇಲ್ಲಾ ಕಣ್ಲಾ ಅವ್ಳು (ಲವ್ ಬಗ್ಗೆ ಉಪದೇಶ)

೨೦. ನೀನು.. ನೀನು ಕೇಳ್ಕೊತಾ ಇದೀಯಾ ಅಂತ ಅವ್ಳನ್ನ ಬಿಡ್ತಾ ಇದೀನಿ ಮಗಾ..ಇವತ್ತಿಂದ ನಿನ್ನವ್ಳು ಕಣ್ಲಾ.. ನಡೀ, ಇದೇ ಮಾತಿಗೆ ಇನ್ನೊಂದು ಪೆಗ್ ಹಾಕವಾ

೨೧. ಯಾಕ್ಲಾ ?? ನಂಗೇನ್ ಜಾಸ್ತಿ ಆಗಿದೇ ಅನ್ಕೊತಾ ಇದೀಯಾ ?? ಮಗ್ನೆ, ಇನ್ನೊಂದು ಫುಲ್ಲ್ ಬಾಟಲ್ ಖಾಲಿ ಮಾಡ್ತೀನಮ್ಮಾ

೨೨. ನಾನ್ ಎಣ್ಣೆ ಹಾಕ್ದಷ್ಟು ನೀನ್ ನೀರ್ ಕುಡ್ದಿಲ್ಲಾ.. ನಂಗೇ ಆವಾಜಾ

ಇದು.. ಸೆಕೆಂಡ್ ಬೆಸ್ಟ್ ಡೈಲಾಗು

೨೩. ಯಾಕೋ ಮಗಾ.. ಇವತ್ತು ಸಿಕ್ಕಾಪಟ್ಟೆ ಜ್ನಾಪ್ಕ ಬರ್ತಾ ಇದಾಳೆ ಕಣ್ಲಾ

ಅಲ್ಟಿಮೇಟ್ ಡೈಲಾಗ್ ಅಂದ್ರೆ ಇದು...

೨೪. ಬಡ್ಡಿಮಗಂದು.. ಇವತ್ತಿಗೆ ಲಾಸ್ಟು, ಇನ್ಮೇಲೆ ಕುಡಿಯಲ್ಲಪ್ಪಾ

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, July 23, 2008

ಆಟೋ ಅಣಿಮುತ್ತುಗಳು - ೨೪ - ಹೈ ಫೈ ರಾಜಕುಮಾರ

ನೋಡ್ರಪ್ಪಾ, ಇವನು ಬರೀ ಮಾಡೆಲುಗಳನ್ನೇ ಡೇಟ್ ಮಾಡೋದಂತೆ.
ನಂಗಂತೂ ಇದನ್ನ ನೋಡಿ.. ಫೋಟೋ ತೆಗೆಯೋದಕ್ಕೂ ಹಿಂದೆ ಮುಂದೆ ನೋಡೋ ಹಾಗೆ ಆಯ್ತು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೨೩ - ಧೂಳು ಗೋಳು

ಬಹಳ ದಿನಗಳಿಂದ ಈ ಡೈಲಾಗ್ ಕೇಳ್ತಾ ಇದ್ದೆ.. ಇವತ್ತು ಕಣ್ಣಿಗೆ ಬಿತ್ತು.
ಸಖತ್ ನಿಜ ಗುರೂ, ಈ ಫೋಟೋ ತೆಗೆಯೋವಾಗ ಮಸ್ತಾಗಿ ಧೂಳು ತಿಂದೆ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, July 21, 2008

ಆಟೋ ಅಣಿಮುತ್ತುಗಳು - ೨೨ - ಭಪ್ಪರೆ ಗುರೂ

ಇದನ್ನು ನೋಡಿದರೆ ಆಟೋದವರ ಬಗ್ಗೆ ನಾವು ಮಾಡುವ ಕಮೆಂಟುಗಳ ಬಗ್ಗೆ ಇನ್ನೊಮ್ಮೆ ಯೋಚನೆ ಮಾಡೋಹಾಗೆ ಆಗುತ್ತೆ ಅಲ್ವಾ ?
ನೋಡಿ...ಯಾರಾದ್ರೂ ಈ ಸೇವೆ ಟ್ರೈ ಮಾಡ್ತೀರಾ ?

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, July 16, 2008

ಇವಾಗ ಇರೋದು ಸಾಲ್ದು ಅಂತ

ನಿನ್ನೆ ಪೇಪರ್ ಹಾಗು ಅಂತರ್ಜಾಲದಲ್ಲಿ ಕಂಡ ಹಾಗೆ, ಸರ್ಕಾರವು ಬೆಂಗಳೂರಲ್ಲಿ ಇನ್ನೂ 7000 ಹೊಸಾ ಆಟೋಗಳಿಗೆ ಪರವಾನಗಿ ಕೊಡ್ತಾ ಇದ್ಯಂತೆ. ಯಾಕ್ ಸ್ವಾಮಿ, ಇವಾಗ್ಲೇ ಪಡಬಾರದ ಕಷ್ಟ ಪಟ್ಟು, ಆಟೋಗಳು ಮಿಗಿಸೋ ಅಲ್ಪ ಸ್ವಲ್ಪ ರೋಡಿನಲ್ಲಿ ಓಡಾಡ್ತಾ ಇದೀವಿ, ಇನ್ನೂ 7000 ಹೊಸಾ ಆಟೋಗಳು ರೋಡಿಗಿಳಿದರೆ ನಾವುಗಳು ಫುಟ್ಪಾತ್ ಏರಬೇಕಾಗುತ್ತೆ ಅಷ್ಟೇ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಈಗಾಗಲೇ 76,000 ಪರವಾನಗಿ ಇರುವ ಆಟೋಗಳು ಬೆಂಗಳೂರಿನ ರಸ್ತೆಗಳ ಮೇಲಿವೆ. ಇವುಗಳ ಜೊತೆ ಸುಮಾರು 10,000 ಅನಧಿಕೃತ (ಪರವಾನಗಿ ಇಲ್ಲದೆ ಇರುವ) ಆಟೋಗಳು ಸೇರಿವೆ.

2006 ರಲ್ಲಿ ಆಟೋ ದಟ್ಟಣೆ ಜಾಸ್ತಿಯಾದ ಕಾರಣ, ಪರ್ಮಿಟ್ ನೀಡುವುದನ್ನು ನಿಲ್ಲಿಸಲಾಗಿತ್ತು, ಆದರೆ ಬಿ.ಆರ್.ಅಂಬೇಡ್ಕರ್ ಕಾರ್ಪೊರೇಷನ್ ಹಾಗು ಸಣ್ಣ ಉದ್ಯೋಗ ಅಭಿವೃದ್ಧಿ ನಿಗಮದಿಂದ ಅನುಮತಿ ಪಡೆಯುತ್ತಾರೋ ಅವರಿಗೆ ಮಾತ್ರಾ ಪರ್ಮಿಟ್ ಕೊಡಲಾಗುತ್ತಿತ್ತು. ಸುದ್ಧಿ ಬಂದ ಪ್ರಕಾರ, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಕಾರಣ, ಸಾರಿಗೆ ಸಚಿವ ಆರ್.ಅಶೋಕ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರವು ಈ ರೀತಿಯ ಅನುಮತಿ ಅಂಗೀಕರಿಸಿ, ಆದೇಶಿಸುವ ಮುನ್ನ ಪಕ್ಷಕ್ಕೆ ಸಿಗುವ ಬೆಂಬಲಕ್ಕಿಂತ, ಜನಪರ ಕಾಳಜಿಯುಕ್ತ ಯೋಚನೆ ಮಾಡಿದರೆ ಕ್ಷೇಮ.

ಇನ್ನು ಈ ಆಟೋ ಪರ್ಮಿಟ್ ಅನ್ನೋ ದಂಧೆ ಬಗ್ಗೆ ಕೂಡಾ ಹೇಳಬೇಕು. ಆಟೋ ಪರ್ಮಿಟ್ ತಗೊಂಡಿರೋ ಜನರೇ ಅದನ್ನು ಓಡಿಸ್ತಾರೆ ಅನ್ಕೊಂಡ್ರೆ ತಪ್ಪಾಗುತ್ತೆ. ಸರ್ಕಾರ ನಿಗದಿ ಪಡಿಸಿರುವ ಆಟೋ ಪರ್ಮಿಟ್ ಶುಲ್ಕ ಕಮ್ಮಿ. ಈ ಪರ್ಮಿಟ್ ಹಂಚಿಕೆಯಲ್ಲಿ ಕೂಡಾ ಸಿಕ್ಕಾಪಟ್ಟೆ ಭ್ರಷ್ಟಾಚಾರ ತುಂಬಿದೆ. ಪರ್ಮಿಟ್ ಪಡೆದವರು, ಅದನ್ನು ಒಳ್ಳೇ ರೇಟಿಗೆ ಮಾರಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಪರ್ಮಿಟ್ ಕೊಂಡ ಆಟೋ ಡ್ರೈವರ್, ಕರೆಕ್ಟಾದ ಮೀಟರ್ ಹಾಕಿಸ್ತಾನೆ ಅನ್ನೋ ಗ್ಯಾರಂಟಿ ಇದ್ಯಾ ?? ಒಳ್ಳೇ ಪೆಟ್ರೋಲ್ ಅಥವಾ ಗ್ಯಾಸ್ ಹಾಕಿಸುತ್ತಾನೆ ಅಂತಾ ಗ್ಯಾರಂಟಿ ಇದ್ಯಾ ? ನೀವೇ ನೋಡಿರೋ ಹಾಗೆ, ಇವಾಗಲೇ ಎಷ್ಟು ಗಾಳಿ ಹಾಗು ಶಬ್ದ ಮಾಲಿನ್ಯ ಇದೆ.. ಇನ್ನು ಇದಕ್ಕೆ 7000 ಆಟೋಗಳು ರೋಡಿಗಿಳಿದರೆ ಹೆಂಗಿರುತ್ತೆ?

ಅಥವಾ, ನಮ್ಮಲ್ಲಿ ಕೂಡಾ ಮದ್ರಾಸು, ಹೈದ್ರಾಬಾದಿನ ಹಾಗೆ ಶೇರಿಂಗ್ (Sharing) ವಿಧಾನ ಶುರು ಮಾಡಿದರೆ ತುಂಬಾ ಅನುಕೂಲ. ನೂರು ಜನ ಎಂ.ಜಿ.ರೋಡಿನಿಂದ ಕೋರಮಂಗಲಕ್ಕೆ ಹೋಗಬೇಕು ಅಂದ್ರೆ ನೂರು ಆಟೋ ಹಿಡೀತಾರೆ. ಅದೇ, ಶೇರಿಂಗ್ ಇದ್ರೆ, 33 ಆಟೋ ಸಾಕು ತಾನೆ. ನಮ್ಮ ಬೆಂಗಳೂರಲ್ಲಿ ಆಟೋ ದಟ್ಟಣೆ ನೋಡಬೇಕಂದ್ರೆ, ನೀವು ಗಾಡಿಯಲ್ಲಿ ಹೋಗಬೇಕಾದ್ರೆ ಸುಮ್ನೆ ಸ್ವಲ್ಪ ಎದ್ದು ರೋಡಿನ ಉದ್ದಕ್ಕೂ ಒಮ್ಮೆ ಕಣ್ಣು ಹಾಯಿಸಿ.. ಎಲ್ಲಿ ನೋಡಿದರೂ ಎಲ್ಲೋ ಎಲ್ಲೋ ಟಾಪುಗಳು.

ಇದೇನಪ್ಪಾ, ಕಟ್ಟೆ ಶಂಕ್ರ ಆಟೋಗಳ ಮೇಲೇ ಕಿಡಿ ಕಾರ್ತಾ ಇದಾನೆ ಅನ್ನುಸ್ತಾ ಇದೀಯಾ?? ಹಂಗೆಲ್ಲ ಏನೂ ಇಲ್ಲ ಕಣ್ರೀ, ನಿನ್ನೆ ಓದಿದ ಸುದ್ಧಿ ಬಗ್ಗೆ ಇದು ನನ್ನ ಅಂಬೋಣ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, July 15, 2008

ಅಪರೂಪದ ಅಭಿಮಾನಿ

ನಾರ್ಮಲ್ ಆಗಿ ರಾಜಣ್ಣ, ವಿಷ್ಣು, ಅಂಬರೀಶ್, ಉಪೇಂದ್ರ, ಶಿವಣ್ಣ, ದರ್ಶನ್.. ಇವರುಗಳ ಫೋಟೋ, ಹೆಸರುಗಳನ್ನ ಆಟೋ ಮೇಲೆ, ಹೊರಗೆ, ಒಳಗೆ ಹಾಕೋದನ್ನ ನೋಡಿದೀವಿ ಆಲ್ವಾ.
ಆದ್ರೆ ನಮ್ಮ ಹಾಸ್ಯರತ್ನಾಕರ ನರಸಿಂಹರಾಜು ಅವರ ಫೋಟೋ ಹಾಕಿರೋದನ್ನ ಯಾರಾದ್ರೂ ನೋಡಿದೀರಾ ?
ನಿನ್ನೆ ಒಂದು ಆಟೋ ಒಳಗೆ ನರಸಿಂಹರಾಜು ಅವರ ಚಿತ್ರ ಬಿಡಿಸಿರುವುದು ಕಾಣುಸ್ತು...ತಕ್ಷಣ ಆಟೋ ಪಕ್ಕ ಹೋಗಿ, ಗುರೂ ಒಂದು ಫೋಟೋ ತೆಕ್ಕೊತೀನಿ ಅಂತ ಹೇಳಿ ಕ್ಲಿಕ್ಕಿಸಿದೆ. ಹೆಂಗೆ ????
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಆಟೋ ಅಣಿಮುತ್ತುಗಳು - ೨೧ - ಕೆಟ್ ನಿಂತ್ರೆ ಎಳೆಯೋರು ಯಾರು ?

ಇದು ಕಾಲಭೈರವನ ತೇರು..ಕೈಮುಗಿದು ಏರು..
ಆದ್ರೆ ನನ್ನ ಡೌಟು ಏನಪ್ಪಾ ಅಂದ್ರೆ,
"ಈ ತೇರು.. ಕೆಟ್ ನಿಂತ್ರೆ ಎಳೆಯೋರು ಯಾರು ?"
ಅಥವಾ.. ಇದನ್ನ ಏರುದ್ರೆ ಸಿವನ ಪಾದ ಏನಾದ್ರೂ ಗತಿನಾ ಅಂತಾ...
ಇವತ್ತು ಬೆಳಿಗ್ಗೆ ಆಫೀಸಿಗೆ ಬರಬೇಕಾದ್ರೆ ಸಿಕ್ಕಿದ್ದು
ಏರೋಣಾ ಅಂತ ಟ್ರೈ ಮಾಡಿದೆ.. ಆಫೀಸಿಗೆ ಟೈಮ್ ಆಗತ್ತೆ ಅಂತಾ ಸುಮ್ನಾದೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, July 10, 2008

ಹೆಸರು ಯಾಕೋ ಸಿಕ್ಕಾಪಟ್ಟೆ ಕೆಟ್ಟದಾಗಿದೆ ಅನ್ಸುತ್ತಲ್ವಾ ?

ನೋಡ್ರಪ್ಪಾ.. ನನಗಂತೂ ಯಾಕೋ ಬಾಳಾ ಕೆಟ್ಟದಾಗಿದೆ ಅನ್ನುಸ್ತು ಈ ಹೆಸ್ರು.
ನಿಮ್ಗೆ ಹೆಂಗೋ...
ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿದ್ದು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, July 8, 2008

ಆಟೋ ಅಣಿಮುತ್ತುಗಳು - ೨೦ - ನೆನಪು ಕಾಡತಾವ

ಅಹ್ಹಾ, ಸಿಕ್ಕಾಪಟ್ಟೆ ನೆನಪು ಮಾಡ್ಕೊಂಡು ಕನ್ನಡಾನ ಚಿಂದಿ ಚಿತ್ರಾನ್ನ ಮಾಡಿ ಹಾಕಿದಾನೆ ಈ ಭೂಪ.
ಇವತ್ತು ಬೆಳಿಗ್ಗೆ ಬ್ರಿಗೆಡ್ ರಸ್ತೆಯ ಇವಾ ಮಾಲ್ ಬಳಿ ಕಂಡಿದ್ದು.
ನೆನಪು ಕಾಡತಾವ

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ